Home Mangalorean News Kannada News ಉಡುಪಿ ಜಿಲ್ಲಾ ಮಟ್ಟದ ಭೂಮಾಪನ ಇಲಾಖಾ ಕಾರ್ಯಗಾರ

ಉಡುಪಿ ಜಿಲ್ಲಾ ಮಟ್ಟದ ಭೂಮಾಪನ ಇಲಾಖಾ ಕಾರ್ಯಗಾರ

Spread the love

ಉಡುಪಿ ಜಿಲ್ಲಾ ಮಟ್ಟದ ಭೂಮಾಪನ ಇಲಾಖಾ ಕಾರ್ಯಗಾರ

ಉಡುಪಿ : ಭೂಮಾಪನ ಇಲಾಖೆ ದಾಖಲೆಗಳು ಗಣಕೀಕರಣ, ಡಿಜಿಟೆಲ್ಸ್‍ನತ್ತ ಸಾಗುವ ಈ ಸನ್ನಿವೇಶದಲ್ಲಿ ಇಂತಹ ಕಾರ್ಯಗಾರಗಳು ಅಳತೆ ಕೆಲಸವನ್ನು ಉನ್ನಿತೀಕರಣ ಮಾಡುವಲ್ಲಿ ಸಹಕಾರಿಯಾಗಲಿದೆ ಎಂದು ಭೂದಾಖಲೆಗಳ ಇಲಾಖಾ ಉಡುಪಿ ಜಿಲ್ಲಾ ಭೂದಾಖಲೆಗಳ ಉಪನಿರ್ದೇಶಕರಾದ ಕುಸುಮಾಧರ್ ಬಿ.ಕೆ ಅವರು ಅಭಿಪ್ರಾಯಪಟ್ಟರು

ಅವರು ಗುರುವಾರ ಬನ್ನಂಜೆ ಶಿವಗಿರಿ ಸಭಾಗೃಹದಲ್ಲಿ ಜರುಗಿದ ಜಿಲ್ಲಾ ಮಟ್ಟದ ಭೂಮಾಪನಾ ಇಲಾಖೆಯ ನೌಕರರ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು.

ಮಾಹಿತಿ ಹಕ್ಕು ನಿಯಮಗಳ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ಉಪವಿಭಾಗದ ಭೂದಾಖಲೆಗಳ ಸಹಾಯಕ ನಿರ್ದೇಶಕರಾದ ಪುಷ್ಪರಾಜ್ ಪೂಜಾರಿ ಅವರು ವಿಷಯ ಮಂಡನೆ ಮಾಡಿದರು.

11ಇ ನಕ್ಷೆಯಂತೆ ನೊಂದಣಿ ಕಛೇರಿಯಲ್ಲಿ ನೊಂದಣಿ ಬಳಿಕ ಭೂಮಿ ತಂತ್ರಾಂಶದಲ್ಲಿ ನಡೆಯುವ ಪ್ರಕ್ರಿಯೆಗಳ ಬಗ್ಗೆ ಉಡುಪಿ ಜಿಲ್ಲಾ ಭೂಮಿ ಸಮಾಲೋಚಕರಾದ ವಿನೋದ ಗಾಂವ್ಕರ್ ಇವರು ಮಾಹಿತಿ ನೀಡಿದರು. ಉಡುಪಿ ಭೂದಾಖಲೆಗಳ ಉಪನಿರ್ದೇಶಕರ ಕಛೇರಿಯ ಅಧೀಕ್ಷಕರಾದ ನಾಗೇಶ ಇವರು ಕಛೇರಿ ನಿರ್ವಹಣೆ, ನೌಕರರಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ವಿವರಗಳನ್ನು ನೀಡಿದರು.

ಶ್ರೀಕಲಾ ಅಧೀಕ್ಷಕರು(ಕಾ.ನಿ)ಕಾರ್ಕಳ ಇವರು ವಿಭಾಗ, ಕ್ರಯ ಪತ್ರ ಇನ್ನಿತರ ಉದ್ದೇಶಗಳಿಗೆ ನೊಂದಣಿ ಬಳಿಕ ಆಕಾರಬಂದ್ ದುರಸ್ತಿ ( ಜಮೀನು ವಿಭಜನೆ ಆದಾಗ ಜಮೀನು, ನಕ್ಷೆಯಲ್ಲಿ ವಿಭಜನೆ ಆದರೂ ಭೂಕಂದಾಯದಲ್ಲಿ ವಿಭಜನೆ ಪ್ರಕ್ರಿಯೆ ಆಕಾರಬಂದ್ ದುರಸ್ತಿ ಎಂದು ಹೇಳುತ್ತಾರೆ.) ವೇಳೆ ಭೂಮಾಪನ ಸಿಬ್ಬಂದಿಗಳು ನಿಗಾವಹಿಸಬೇಕಾದ ವಿಷಯಗಳ ಕುರಿತು ಸವಿವರವಾದ ಸೂಚನೆಗಳನ್ನು ನೀಡಿದರು.

ಕುಂದಾಪುರ ಉಪವಿಭಾಗ ಭೂದಾಖಲೆಗಳ ಸಹಾಯಕ ನಿರ್ದೇಶಕರಾದ ರವೀಂದ್ರ ಇವರು ನೌಕರರು ಕಾರ್ಯಗಾರದಲ್ಲಿ ಮಂಡಿಸಿದ ಹಾಗೂ ಚರ್ಚಿಸಿದ ವಿಷಯಗಳನ್ನು ಪ್ರಾಮಾಣಿಕವಾಗಿ ಕರ್ತವ್ಯದಲ್ಲಿ ಜಾರಿಗೊಳಿಸಬೇಕೆಂದು ಹಾಗೂ ಒತ್ತಡದ ನಡುವೆ ವಿರಾಮ, ವೈಯಕ್ತಿಕ ವಿಷಯಗಳಿಗೂ ಪ್ರಾಮುಖ್ಯತೆ ನೀಡುವ ಅಗತ್ಯತೆ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದು ನಿವೃತ ಭೂಮಾಪನ ಸಹಾಯಕ ನಿರ್ದೇಶಕರಾದ ಕೃಷ್ಣ ತಾಂಡೇಲ್ ಇವರು ಹೊಸಭೂಮಾಪಕರುಗಳಿಗೆ ಹಿತವಚನ ನೀಡಿದರು.

ಎಲ್ಲಾ ವಿಷಯಗಳ ಬಗ್ಗೆ ಅನೇಕ ನೌಕರರು ತಮ್ಮ ಅನಿಸಿಕೆ,ಸಂದೇಹ, ಸ್ಪಷ್ಟನೆ ಕೋರಿ ಚರ್ಚೆಯಲ್ಲಿ ಪಾಲ್ಗೊಂಡರು ಖಾಯಂ ಪೂರ್ವಾವಧಿ ಘೋಷಣೆ ಆದ 18 ಮಹಿಳೆಯರು ಸೇರಿದಂತೆ 54 ಭೂಮಾಪಕರಿಗೆ ಅಧ್ಯಕ್ಷರು ಮತ್ತು ಅತಿಥಿಗಳು ಅಳತೆ ಸ್ಕೇಲು ಹಾಗೂ ಪೆನ್ಸಿಲ್‍ಗಳನ್ನು ಸ್ಮರಣಿಕೆಯಾಗಿ ನೀಡಿದರು.

ಶಿವಮೊಗ್ಗದಲ್ಲಿ ಎಪ್ರಿಲ್ 10 ರಂದು ನಡೆಯಲಿರುವ ‘’ಸರ್ವೆ ದಿನಾಚರಣೆ’’ ಮತ್ತು ಪೂರ್ವಬಾವಿಯಾಗಿ ಎಪ್ರಿಲ್ 8 ಮತ್ತು 9 ರಂದು ನಡೆಯಲಿರುವ ಭೂಮಾಪನ ಇಲಾಖಾ ಸಿಬ್ಬಂದಿಗಳ ಕ್ರೀಡಾಕೂಟ ಯಶಸ್ವಿಗೊಳಿಸಲು ಎಲ್ಲರು ಪಾಲ್ಗೊಳ್ಳುವಂತೆ ಕಾರ್ಯಗಾರದಲ್ಲಿ ಭೂದಾಖಲೆಗಳ ಉಪನಿರ್ದೇಶಕರು ವಿನಂತಿಸಿದರು ಕಾರ್ಕಳ ಪರ್ಯಾವೇಕ್ಷಕರಾದ ಗೋಪಾಲ್ ಎನ್.ವಿ, ಎನ್ ಸುಬ್ರಮಣ್ಯ, ಉಡುಪಿ ಪರ್ಯಾವೇಕ್ಷಕರಾದÀ ನಾಗೇಶ, ಬ್ರಹ್ಮಾವರ ಪರ್ಯಾವೇಕ್ಷಕರಾದ ಮಹೇಶ ಕುಮಾರ್, ಬೈಂದೂರು ಪರ್ಯಾವೇಕ್ಷಕರಾದ (ಪ್ರಭಾರ) ಎಂ.ಸಿ ಪೂಜಾರಿ ಅವರು ಉಪಸ್ಥಿತರಿದ್ದರು.

ಆರಂಭದಲ್ಲಿ ಕುಂದಾಪುರ ಪರ್ಯಾವೇಕ್ಷಕರಾದ ಪುರುಷೋತ್ತವ ಅವರು ಕಾರ್ಯಗಾರಕ್ಕೆ ಆತಿಥಿಗಳನ್ನು ಸ್ವಾಗತ ಮಾಡಿದರು ಭೂದಾಖಲೆಗಳ ಉಪನಿರ್ದೇಶಕರ ಕಛೇರಿಯ ಬಿ.ಜಿ ಹುದ್ದಾರ್ ಅವರು ಪ್ರಾರ್ಥನೆ ಮಾಡಿದರು,ಕೊನೆಗೆ ಉಡುಪಿ ಪರ್ಯಾವೇಕ್ಷಕರಾದ ದಯಾನಂದ ಅವರು ವಂದನಾರ್ಪಣೆಗೈದರು. ಬ್ರಹ್ಮಾವರ ಪರ್ಯಾವೇಕ್ಷಕರಾದ ಸುನೀಲ್ ನಟೇಕರ್ ಅವರು ಕಾರ್ಯಕ್ರಮ ನಿರ್ವಹಿಸಿದರು.


Spread the love

Exit mobile version