ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗೌರರ್ಪಣೆ
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಿವೃತ್ತ ಮುಖ್ಯ ಶಿಕ್ಷಕರಾದ ನಿರ್ಮಲಾ, ಹೆಲೆನ್ ಸಾಲಿನ್ಸ್, ಅಮಿತಾ ಕಲಾ, ಚಂದ್ರಾಯ ಆಚಾರ್ಯ ಹಾಗೂ ನಿವೃತ್ತ ದೈಹಿಕ ಶಿಕ್ಷಕರಾದ ವಿಶ್ವನಾಥ್ ಬಾಯರಿ ಅವರನ್ನು ಅವರವರ ನಿವಾಸದಲ್ಲಿ ಭೇಟಿಯಾಗಿ ಅವರಿಗೆ ಶಾಲು ಹೊದಿಸಿ ಹೂಗುಚ್ಛ ಹಾಗೂ ಸ್ಮರಣಿಕೆ ನೀಡಿ ಶಿಕ್ಷಣ ಕ್ಷೇತ್ರದಲ್ಲಿ ಅವರ ಸೇವೆಯನ್ನು ಗುರುತಿಸಿ ಅವರೆಲ್ಲರಿಗೂ ಸನ್ಮಾನಿಸಿ ಅವರ ಮುಂದಿನ ಜೀವನವು ಸುಖಕರವಾಗಿರಲಿ ಎಂದು ಪ್ರಾರ್ಥಿಸಿ ಅವರ ಆಶೀರ್ವಾದ ಪಡೆಯಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ ವಿಜಯ ಪೂಜಾರಿ, ಮೀನಾಕ್ಷಿ ಮಾಧವ ಬನ್ನಂಜೆ, ಯುವರಾಜ್ ಪುತ್ತೂರು, ಸತೀಶ್ ಪುತ್ರನ್, ಚಂದ್ರಮೋಹನ್ ಚಿಟ್ಪಾಡಿ, ಸುಕೇಶ್ ಕುಂದರ್, ಚಿತ್ತರಂಜನ್ ಆಚಾರ್ಯ, ಸತೀಶ್ ಕುಮಾರ್ ಮಂಚಿ, ನಾರಾಯಣ್ ಕುಂದರ್, ಶರತ್ ಶೆಟ್ಟಿ, ಜಯವೀರ್ ಫೆಡ್ರಿಕ್ಸ್, ಸಂಧ್ಯಾ ತಿಲಕ್ರಾಜ್, ಅನಿಲ್, ಸಂಜಯ್ ಆಚಾರ್ಯ, ಸಾಯಿರಾಜ್ ಕೋಟ್ಯಾನ್, ನಿತಿನ್ ಚಿಟ್ಪಾಡಿ, ಸುಪ್ರಿತಾ, ಶೈಲೇಶ್, ದೀಕ್ಷಿತ್, ಅಭಿಷೇಕ್, ಶರತ್, ಅರುಣಾ ಹಾಗೂ ಅರ್ಚನಾ ಅವರು ಉಪಸ್ಥಿತರಿದ್ದರು