Home Mangalorean News Kannada News ಉಡುಪಿ ವಕೀಲರ ಸಂಘದ ಅಧ್ಯಕ್ಷರಾಗಿ ರೆನೋಲ್ಡ್ ಪ್ರವೀಣ್ ಕುಮಾರ್ ಆಯ್ಕೆ

ಉಡುಪಿ ವಕೀಲರ ಸಂಘದ ಅಧ್ಯಕ್ಷರಾಗಿ ರೆನೋಲ್ಡ್ ಪ್ರವೀಣ್ ಕುಮಾರ್ ಆಯ್ಕೆ

Spread the love

ಉಡುಪಿ ವಕೀಲರ ಸಂಘದ ಅಧ್ಯಕ್ಷರಾಗಿ ರೆನೋಲ್ಡ್ ಪ್ರವೀಣ್ ಕುಮಾರ್ ಆಯ್ಕೆ

ಉಡುಪಿ: ಉಡುಪಿ ಜಿಲ್ಲಾ ವಕೀಲರ ಸಂಘದ 2025-27ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರೆನೋಲ್ಡ್ ಪ್ರವೀಣ್ ಕುಮಾರ್ ಪುನಾರಾಯ್ಕೆಯಾಗಿರುತ್ತಾರೆ.

ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಚಲಾವಣೆಯಾದ 756 ಮತಗಳ ಪೈಕಿ 398 ಮತಗಳನ್ನು ಪಡೆದ ರೆನೋಲ್ಡ್ ಪ್ರವೀಣ್ ಕುಮಾರ್, ತನ್ನ ಪ್ರತಿಸ್ಪರ್ಧಿ ಜಯಪ್ರಕಾಶ್ ಕೆದ್ಲಾಯ ಅವರನ್ನು 40 ಮತಗಳ ಅಂತರದಿಂದ ಸೋಲಿಸಿ ಜಯಶಾಲಿಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಶೆಟ್ಟಿ, ಉಪಾಧ್ಯಕ್ಷರಾಗಿ ದೇವದಾಸ್, ಖಜಾಂಚಿಯಾಗಿ ಹಿಲ್ಲಾ ಕ್ಯಾಸ್ಟಲಿನೋ, ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಾವಿತ್ರಿ, ಕ್ರೀಡಾ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್, ಕಾರ್ಯದರ್ಶಿಯಾಗಿ ಗಿರೀಶ್ ಎಸ್.ಪಿ., ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ದೀಪಕ್ ಕುಮಾರ್ ಪೂಜಾರಿ, ಭರತೀಶ, ದೀಪಾ ಕೆ.ಶೆಟ್ಟಿ, ವಿನಯ ಸುವರ್ಣ, ಆದಿತ್ಯ, ಮಂಜುನಾಥ ನಾಗಪ್ಪ ನಾಯ್ಕ, ನಾಗರ್ಜುನ, ಶಾರದ ಎನ್., ನಾಗರಾಜ ಉಪಾಧ್ಯ ಎಂ., ಸಚಿನ್ ಕುಮಾರ್, ಗುರುಪ್ರಸಾದ್ ಜಿ.ಎಸ್., ಹರ್ಷಿತಾ, ನಾಗರಾಜ, ಸಂತೋಷ್ ಆಚಾರ್ಯ, ಗುರುರಾಜ್ ಜಿ.ಎಸ್., ಕವಿತಾ, ನಾಗರಾಜ ಬಿ., ಸಂತೋಷ್ ಹೆಬ್ಬಾರ್ ಎ., ಶ್ರೀಶ ಆಚಾರ್ಯ ಕೆ. ಮತ್ತು ಗೀತಾ ಕೌಶಿಕ್ ಆಯ್ಕೆಯಾದರು.


Spread the love

Exit mobile version