Home Mangalorean News Kannada News ಉಡುಪಿ: ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಕೊರೋನಾ ವರದಿ ನೆಗೆಟಿವ್

ಉಡುಪಿ: ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಕೊರೋನಾ ವರದಿ ನೆಗೆಟಿವ್

Spread the love

ಉಡುಪಿ: ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಕೊರೋನಾ ವರದಿ ನೆಗೆಟಿವ್

ಉಡುಪಿ: ಕಳೆದ ಮೂರು ದಿನದಿಂದ ಶೀತ, ಕೆಮ್ಮು ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಉಡುಪಿಯಲ್ಲಿ ಭಾನುವಾರ ಮೃತಪಟ್ಟಿದ್ದು ಕೋವಿಡ್ ಲಕ್ಷಣಗಳ ಹಿನ್ನಲೆಯಲ್ಲಿ ಪರೀಕ್ಷೆಗೆ ಕಳುಹಿಸಲಾದ ಅವರ ಗಂಟಲ ದ್ರವ ನೆಗೆಟಿವ್ ಬಂದಿದೆ.

ಉಡುಪಿ ನಗರದ ಬನ್ನಂಜೆ ವಾರ್ಡ್ ನ 44 ವರ್ಷದ ನಿವಾಸಿಯೋರ್ವರು ಕಳೆದ ಮೂರು ದಿನದಿಂದ ಶೀತ, ಕೆಮ್ಮು ಜ್ವರದಿಂದ ಬಳಲುತ್ತಿದ್ದು, ಅವರನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಾಗುವಷ್ಟರಲ್ಲಿ ಸಾವನಪ್ಪಿದ್ದರು.

ವ್ಯಕ್ತಿಯ ಸಂಶಯಾಸ್ಪದ ಸಾವಿನ ಹಿನ್ನೆಲೆಯಲ್ಲಿ ಗಂಟಲ ದ್ರವ ಪರೀಕ್ಷೆಗೆ ರವಾನಿಸಲಾಗಿತ್ತು ಭಾನುವಾರ ಅದರ ವರದಿ ಬಂದಿದ್ದು, ವರದಿಯಲ್ಲಿ ಕೊರೋನಾ ಲಕ್ಷಣ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ|ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.


Spread the love

Exit mobile version