Home Mangalorean News Kannada News ಉಡುಪಿ ಸಿಟಿ ಬಸ್ಸಿನಲ್ಲಿ ‘ಚಲೋ ಸೂಪರ್ ಸೇವರ್ ಸೀಸನ್ ಪಾಸ್’ ಕೊಡುಗೆ

ಉಡುಪಿ ಸಿಟಿ ಬಸ್ಸಿನಲ್ಲಿ ‘ಚಲೋ ಸೂಪರ್ ಸೇವರ್ ಸೀಸನ್ ಪಾಸ್’ ಕೊಡುಗೆ

Spread the love

ಉಡುಪಿ ಸಿಟಿ ಬಸ್ಸಿನಲ್ಲಿ ಚಲೋ ಸೂಪರ್ ಸೇವರ್ ಸೀಸನ್ ಪಾಸ್ ಕೊಡುಗೆ

ಉಡುಪಿ: ಉಡುಪಿ ಬಸ್ ಮಾಲಕರ ಸಂಘ ಮತ್ತು ಚಲೋ ಆ್ಯಪ್ ಉಡುಪಿಯಲ್ಲಿ ಚಲೋ ಸೂಪರ್ ಸೇವರ್ ಪ್ಲಾನ್ಸ್ ಎಂಬ ಸಾಪ್ತಾಹಿಕ ಮತ್ತು ಮಾಸಿಕ ಬಸ್ ಪಾಸ್ ಯೋಜನೆಯನ್ನು ಆರಂಭಿಸಿದ್ದು, ಪ್ರಯಾಣಿಕರಿಗೆ ಪ್ರತಿ ಟ್ರಿಪ್ಗೆ ಸರಾಸರಿ ಕೇವಲ 4.99 ರೂಪಾಯಿ ವೆಚ್ಚದಲ್ಲಿ ಪ್ರಯಾಣಿಸಲು ಅವಕಾಶ ನೀಡುತ್ತದೆ. ಚಲೋ ಸೂಪರ್ ಸೇವರ್ ಯೋಜನೆಗಳನ್ನು ಚಾಲೋ ಕಾರ್ಡ್ನಲ್ಲಿ ಖರೀದಿಸಬಹುದು ಮತ್ತು ಉಡುಪಿಯ ಎಲ್ಲಾ ಸಿಟಿ ಬಸ್ಗಳಲ್ಲಿ ಮಾನ್ಯವಾಗಿರುತ್ತವೆ ಎಂದು ಉಡುಪಿ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಗುರುವಾರ ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಾಮಾನ್ಯವಾಗಿ ಉಡುಪಿಯಲ್ಲಿ ಒಂದೇ ಟ್ರಿಪ್ ಬಸ್ ಟಿಕೆಟ್ ಮಾತ್ರ ನೀಡಲಾಗುತ್ತದೆ. ಹೊಸ ಯೋಜನೆ ಪ್ರಕಾರ ಪ್ರಯಾಣಿಕರು 7 ದಿನಗಳು ಅಥವಾ 28 ದಿನಗಳ ಕಾರ್ಡ್ ಪಡೆದುಕೊಳ್ಳಬಹುದು ಮತ್ತು ಸಾಮಾನ್ಯವಾಗಿ ಪ್ರಯಾಣಿಕರು ಪ್ರಯಾಣಿಸುವ ದೂರ ವನ್ನು ಆಧರಿಸಿ ತಮಗೆ ಪ್ರಯೋಜನಕಾರಿಯಾದ ಕಾರ್ಡ್ ಪಡೆದುಕೊಳ್ಳಬಹುದು. ಪ್ರಯಾಣಿಕರು ತಮ್ಮ ಅಗತ್ಯಗಳಿಗೆ ಸೂಕ್ತವಾದ ಯೋಜನೆಯನ್ನು ಆಯ್ಕೆ ಮಾಡಲು ಇದು ಅನುವು ಮಾಡಿಕೊಡುತ್ತದೆ. ಇದೇ ಮೊದಲ ಬಾರಿಗೆ ಉಡುಪಿ ಬಸ್ ಮಾಲಕರ ಸಂಘ ಸಿಟಿ ಬಸ್ ಪ್ರಯಾಣಿಕರಿಗೆ ಇಂತಹದೊಂದು ಸೀಸನ್ ಕಾರ್ಡ್ ಸೌಲಭ್ಯವನ್ನು ನೀಡುತ್ತಿದೆ.

ದೈನಂದಿನ ಪ್ರಯಾಣಿಕರು ಒಂದು ಟೈಪ್ತಿಗೆ 10 ರೂಪಾಯಿ ಪಾವತಿ ಮಾಡುವ ಪ್ರಯಾಣಿಕರು ಸೂಪರ್ ಸೇಪರ್ 409) ಯೋಜನೆಯ ಕಾರ್ಡನ್ನು ಖರೀದಿಸಬಹುದು. ಈ ಕಾರ್ಡಿನೊಂದಿಗೆ ಅವರು 28 ದಿನಗಳಲ್ಲಿ 100 ಟಿಪ್ ಪ್ರಯಾಣಿಸಲು ಅರ್ಹರಾಗಿರುತ್ತಾರೆ, ಪರಿಣಾಮವಾಗಿ ಅವರು ಪ್ರತಿ ಪ್ರೀತಿಗೆ ಕೇವಲ 4,95) ರೂಪಾಯಿ ನೀಡಿ ದಂತಾಗುವುದು ಮತ್ತು ಇದು ಉಡುಪಿ-ಮಣಿಪಾಲ ಪ್ರದೇಶದಲ್ಲಿ ಅತ್ಯಂತ ಕಡಿಮೆ ಪ್ರಯಾಣ ದರ ಆಗಿರುತ್ತದೆ. ಪ್ರಯಾಣಿಕರ ಏಕಮುಖ ಟಿಕೇಟಿನ ದರ ಪಟ್ಟಿ ಮತ್ತು ಪ್ರಯಾಣದ ದಿನಗಳು ಆಧಾರದ ಮೇಲೆ ಯೋಜನೆಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ವಿನ್ಯಾಸ ಮಾಡಲಾಗಿದೆ, ಟ್ರಿಪ್ ಸಂಖ್ಯೆಯನ್ನು ಕೂಡ ಸೂಕ್ತವಾಗಿ ನಿರ್ಧರಿಸಲಾಗಿದೆ.

ಚಲೋ ಸೂಪರ್ ಸೇವ್ ಯೋಜನೆಯನ್ನು ಹೇಗೆ ಪಡೆಯುವುದು;
ಚಲೋ ಸೂಪರ್ ಸೇವರ್ ಯೋಜನೆ ಕಾರ್ಡುಗಳನ್ನು ಉಡುಪಿಯ ಯಾವುದೇ ಸಿಟಿ ಬಸ್ಸಿನಲ್ಲಿ ಅಥವಾ ಉಡುಪಿ ಯಾವುದೇ ಚಲೋ ಸೀಸನ್ ಟಿಕೆಟ್ ಕೌಂಟರಿನಲ್ಲಿ ಪ್ರಯಾಣಿಕರು ಚಲೋ ಕಾರ್ಡ್ ಖರೀದಿಸಿ ಉಪಯೋಗಿಸಬಹುದು.

ಚಲೋ ಸೂಪರ್ ಸೇವ್ ಯೋಜನೆಯನ್ನು ಬಳಸುವುದು ಹೇಗೆ:
ಚಲೋ ಸೂಪರ್ ಸೇವರ್ ಯೋಜನೆಯ ಕಾರ್ಡ್ ಅನ್ನು ಖರೀದಿಸುವ ಪ್ರಯಾಣಿಕ ಸಿಟಿ ಬಸ್ಸಿನಲ್ಲಿ ಪ್ರಯಾಣಿಸುವಾಗ ತಮ್ಮ ಚಲೋ ಕಾರ್ಡ್ ಅನ್ನು ಬಸ್ ಕಂಡಕ್ಟರ್ ಎಲೆಕ್ಟ್ರಾನಿಕ್ ಟಿಕೆಟ್ ನೀಡುವ ಯಂತ್ರ (ಎಟಿಎಂ)ಕ್ಕೆ ತೋರಿಸಬೇಕು. ಈಗ ಎಟಿಎಂ ಸೂಪರ್ ಸೇವರ್ ಯೋಜನೆಯನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡಿ ದಾಖಲಿಸಿಕೊಳ್ಳುತ್ತದೆ.

ಗಮನಿಸಿ: ಸೂಪರ್ ಸೇವರ್ ಯೋಜನೆಗಳು ಪ್ರತಿ ಯೋಜನೆ ಗೆ ಸೂಚಿಸಲಾದ ಗರಿಷ್ಠ ಶುಲ್ಕಕ್ಕೆ ಮಾತ್ರ ಮಾನ್ಯವಾಗಿರುತ್ತದೆ ಮತ್ತು ಹೆಚ್ಚಿನ ದೂರ ಪ್ರಯಾಣಿಸಲು ಬಳಸಲಾಗುವುದಿಲ್ಲ. ಉದಾಹರಣೆಗೆ, ಸೂಪರ್ ಸೇವರ್ 499 ಯೋಜನೆ ತಲಾ 10 ರೂ. ಟಿಕೆಟ್ ದರದ ದೂರಕ್ಕೆ ಮಾತ್ರಕ್ಕೆ ಮಾತ್ರ ಅನ್ವಯಿಸುತ್ತದೆ ಮತ್ತು 15 ರೂಪಾಯಿ ದರ ಅಂತಹ ಸಂದರ್ಭಗಳಲ್ಲಿ, ಪ್ರಯಾಣಿಕರು ಸೂಪರ್ ಸೇವರ್ ಯೋಜನೆಯನ್ನು 10 ರೂ. ದರದ ಗರಿಷ್ಠ ದೂರಕ್ಕೆ ಬಳಸಬಹುದು ಮತ್ತು ಉಳಿದ ದೂರಕ್ಕೆ ಹೆಚ್ಚುವರಿ ಟಿಕೆಟ್ ಖರೀದಿಸಬೇಕು.

ಚಲೋ ಸೂಪರ್ ಸೇವರ್ ಅನ್ನು ಪ್ರಯಾಣಿಸಲು ಬಳಸುವುದರಿಂದ ಬಸ್ಸಿನಲ್ಲಿ ಚಿಲ್ಲರೆ ಹಣ ವಿನಿಮಯ ಮಾಡಿಕೊಳ್ಳುವ ಸಮಸ್ಯೆ ಇರುವುದಿಲ್ಲ ಮತ್ತು ಕೋವಿಡ್ -19 ಸಂದರ್ಭದಲ್ಲಿ ಇದೊಂದು ಸುರಕ್ಷಿತ ಕ್ರಮವಾಗಿದೆ. ನಗದು ರಹಿತ (ಕ್ಯಾಶ್ ಲೆಸ್) ಮತ್ತು ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಮೂಲಕ. ಉಡುಪಿ ಬಸ್ ಮಾಲಕರ ಸಂಘ ಬಸ್ಗಳಲ್ಲಿ ಡಿಜಿಟಲ್ ವಹಿವಾಟನ್ನು ಪ್ರಾರಂಭಿಸುತ್ತಿರುವುದು ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಅನುಗುಣವಾಗಿದೆ.

ಚಲೋ ಕಾರ್ಡ್ ಪಡೆಯುವುದು ಹೇಗೆ:
ಚಲೋ ಸೂಪರ್ ಸೇವರ್ ಯೋಜನೆಗಳನ್ನು ಪಡೆಯಲು ಪ್ರಯಾಣಿಕರಿಗೆ ಆರಂಭದಲ್ಲಿ ಚಲೋ ಕಾರ್ಡ್ ಖರೀದಿಸಬೇಕು. ಪ್ರಯಾಣಿಕರ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಅನ್ನು ನೀಡುವ ಮೂಲಕ ನಗರದ ಯಾವುದೇ ಚಲೋ ಕೌಂಟರ್ಗಳಿಂದ ಚಲೋ ಕಾರ್ಡ್ ಖರೀದಿಸಬಹುದು. ಕ್ಯೂಆರ್ ಕೋಡ್ ಪಡೆಯಲು ಪ್ರಯಾಣಿಕರು ಆನ್ ಲೈನ್ ಕೆವೈಸಿ ಯನ್ನು www.chalo.com/activate ನಲ್ಲಿ ಸಹ ಮಾಡಬಹುದು. ಇದರಿಂದ ನೀವು ಉಡುಪಿಯ ಯಾವುದೇ ನಗರ ಬಸ್ಗಳಲ್ಲಿ ಕಂಡಕ್ಟರ್ಗಳಿಂದ ಸಹ ಚಲೋ ಕಾರ್ಡ್ ಖರಿದಿಸಲು ಅನುವು ಮಾಡಿಕೊಡುತ್ತದೆ. ಈ ಯೋಜನೆಗಳು ಶೀಘ್ರದಲ್ಲೇ ಚಲೋ ಆ್ಯಪ್ನಲ್ಲಿ ಮೊಬೈಲ್ ಫೋನ್ಗಳಲ್ಲಿ ಖರೀದಿಸಲು ಸಹ ಲಭ್ಯವಿರುತ್ತವೆ.

ಈ ಕೊಡುಗೆಯು ಟಿಕೆಟುಗಳನ್ನು ಪಾವತಿಸುವುದನ್ನು ಸುಲಭ ಗೊಳಿಸುವುದರ ಮೂಲಕ ಪ್ರಯಾಣದಲ್ಲಿ ಹೊಸ ಕ್ರಾಂತಿಯನ್ನು ಮಾಡುತ್ತಿದೆ, ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಕಡಿಮೆ ವೆಚ್ಚದ ಮತ್ತು ಹೆಚ್ಚು ಸುರಕ್ಷಿತವಾಗಿ ಮೂಲಕ ಬಸ್ ಪಾಸ್ ತೆಗೆದುಕೊಳ್ಳುವ ಮೂಲಕ ಜನರು ಈ ಹೊಸ ವ್ಯವಸ್ಥೆಯನ್ನು ಹೆಚ್ಚು ಪ್ರೋತ್ಸಾಹಿಸುತ್ತಾರೆ ಎಂಬ ವಿಶ್ವಾಸವನ್ನು ಬಸ್ ಮಾಲಕರ ಸಂಘ ಹೊಂದಿದೆ

ಹೆಚ್ಚಿನ ವಿವರಗಳಿಗಾಗಿ https://chato.com/udupi ಗೆ ಭೇಟಿ ನೀಡಿ.

ಆರಂಭಿಕ ಕೊಡುಗೆ
ಉಡುಪಿ ಬಸ್ ಮಾಲಕರ ಸಂಘದ ವತಿಯಿಂದ ಉಡುಪಿಯಲ್ಲಿ ಆರಂಭಿಸಲಾದ ಚಲೋ ಸೀಸನ್ ಕಾರ್ಡ್ ಪ್ರಯಾಣಿಕರಿಗೆ ಆರಂಭಿಕ ಕೊಡುಗೆ ಯಾಗಿ ಬಹುಮಾನ ಪ್ರಕಟಿಸಿದೆ. ಪ್ರತೀ ತಿಂಗಳು ಆಯ್ದ ಬಸ್ ಮಂದಿ ಅದೃಷ್ಟಶಾಲಿ ಪ್ರಯಾಣಿಕರು ಚಲೋ ಆ್ಯಪ್ ವತಿಯಿಂದ ಗೃಹಪಯೋಗಿ ವಸ್ತುಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ಸಿಟಿ ಬಸ್ಸುಗಳಲ್ಲಿ ಡಿಜಿಟಲ್ ಕಾರ್ಡ್ ಪಾವತಿ ಕಾರ್ಡ್ ಹೆಚ್ಚು ಪ್ರಯಾಣಿಕರು ಉಪಯೋಗಿಸಲು ಇದೊಂದು ಉತ್ತಮ ಆಕರ್ಷಕ ಯೋಜನೆ ಮೂರು ಆಗಲಿದೆ ಎಂದು ಸಂಘದ ಆಶಯವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಗಣನಾಥ್ ಹೆಗ್ಡೆ, ಸಂದೀಪ್ ಮಂಜುನಾಥ್ ಉಪಸ್ಥಿತರಿದ್ದರು.


Spread the love

Exit mobile version