Home Mangalorean News Kannada News ಉದ್ಯಮಿಗೆ ಬ್ಲಾಕ್ ಮೇಲ್! ಸುಳ್ಳುಕತೆ ಸೃಷ್ಟಿಸಿ ಕೋಟಿ ಕೋಟಿ ಲೂಟಿಗೈದ ಯುವ ಕಾಂಗ್ರೆಸ್ ಮುಖಂಡ

ಉದ್ಯಮಿಗೆ ಬ್ಲಾಕ್ ಮೇಲ್! ಸುಳ್ಳುಕತೆ ಸೃಷ್ಟಿಸಿ ಕೋಟಿ ಕೋಟಿ ಲೂಟಿಗೈದ ಯುವ ಕಾಂಗ್ರೆಸ್ ಮುಖಂಡ

Spread the love

ಉದ್ಯಮಿಗೆ ಬ್ಲಾಕ್ ಮೇಲ್! ಸುಳ್ಳುಕತೆ ಸೃಷ್ಟಿಸಿ ಕೋಟಿ ಕೋಟಿ ಲೂಟಿಗೈದ ಯುವ ಕಾಂಗ್ರೆಸ್ ಮುಖಂಡ

ಮಂಗಳೂರಿನ ಪ್ರಸಿದ್ದ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಮಾಡಿ ಕಾಂಗ್ರೆಸ್ ಮುಖಂಡನೊಬ್ಬ ಬ್ಲಾಕ್ಕೇಲ್ ಮಾಡಿದ್ದಲ್ಲದೆ, ಕೋಟ್ಯಂತರ ರೂಪಾಯಿ ಹಣ ಪೀಕಿಸಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಉರ್ವಾ ಪೊಲೀಸರು ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಮತ್ತು ಆತನ ಸ್ನೇಹಿತ ಜಿತೇಶ್ ಬಂಧನಕ್ಕೀಡಾದವರು. 2024ರಲ್ಲೇ ಉದ್ಯಮಿಗೆ ಹನಿಟ್ರಾಪ್ ಖೆಡ್ಡಾ ತೋಡಿದ್ದ ಆರೋಪಿಗಳು 2026ರ ವರೆಗೂ ಆತ್ಮಹತ್ಯೆ ನಾಟಕವಾಡಿ ಬರೋಬ್ಬರಿ 2 ಕೋಟಿ 77 ಲಕ್ಷ ರೂಪಾಯಿ ಹಣ ದೋಚಿದ್ದಾರೆ. ಜಿತೇಶ್ ಉದ್ಯಮಿ ಜೊತೆಗೆ ಆಪ್ತವಾಗಿ ವರ್ತಿಸಿದ್ದು ಅದರ ಅಶ್ಲೀಲ ವಿಡಿಯೋವನ್ನು ಗುಪ್ತವಾಗಿ ರೆಕಾರ್ಡ್ ಮಾಡಿಕೊಂಡಿದ್ದ. ಅಶ್ಲೀಲ ವಿಡಿಯೋ ಮುಂದಿಟ್ಟು ಉದ್ಯಮಿಯನ್ನು ಬ್ಲಾಕ್ ಮೇಲ್ ಮಾಡಲಾರಂಭಿಸಿದ್ದ.

ಉದ್ಯಮಿ ಜೊತೆಗಿನ ತನ್ನ ಅಶ್ಲೀಲ ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲಾಕ್ಟೇಲ್ ಆಟ ಶುರು ಮಾಡಿದ್ದ ಜಿತೇಶ್, ಪತ್ನಿಗೆ ವಿಡಿಯೋ ತೋರಿಸೋದಾಗಿ ಬೆದರಿಸಿ 35 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಮರ್ಯಾದೆಗೆ ಹೆದರಿ ಉದ್ಯಮಿ ಚೆಕ್ ಮೂಲಕ ಜಿತೇಶ್ ಗೆ ಹಣವನ್ನೂ ನೀಡಿದ್ದ. ಆದರೆ ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಉದ್ಯಮಿ, ಯುವ ಕಾಂಗ್ರೆಸ್ ಮುಖಂಡ ನಿಝಾಮ್ ಗೆ ತಿಳಿಸಿ ಹೇಗಾದರೂ ಬಚಾವ್ ಮಾಡುವಂತೆ ತಿಳಿಸಿದ್ದ. ಆದರೆ ನಿಜಾಮ್ ಕೂಡ ಜಿತೇಶ್ ಜೊತೆ ಸೇರಿಕೊಂಡಿದ್ದು ಉದ್ಯಮಿಯನ್ನೇ ಬ್ಲಾಕ್ ಮೇಲ್ ಮಾಡಲು ಇಳಿದಿದ್ದರು.

ನಿಝಾಮ್ ಎಂಟ್ರಿಯಾಗಿ ಉದ್ಯಮಿಯನ್ನೇ ಯಾಮಾರಿಸಿದ್ದಲ್ಲದೆ, ಜಿತೇಶ್ ನಿಮ್ಮ ಹೆಸರು ಬರೆದಿಟ್ಟು ಆತ್ಮತ ತ್ಯೆ ಮಾಡಿಕೊಂಡಿದ್ದಾಗಿ ಸುಳ್ಳು ಕಥೆ ಕಟ್ಟಿದ್ದ. ಅದಕ್ಕಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರೀತಿಯ ಫೋಟೊ ಮತ್ತು ಅಂತ್ಯಕ್ರಿಯೆ ಮಾಡಿರುವ ಫೋಟೊವನ್ನೂ ತೋರಿಸಿ ಡೆತ್ ನೋಟ್ ಹೊರಗೆ ಬರದಂತೆ ನೋಡಿಕೊಳ್ಳಲು ದೊಡ್ಡ ಮೊತ್ತದ ಹಣ ಕೇಳಿದ್ದ ಜಿತೇಶ್ ಸಾವು ನಿಜವೆಂದೇ ನಂಬಿದ್ದ ಪೆಕರಾ ಉದ್ಯಮಿ, ನಿಜಾಮ್ ಗೆ ಕೋಟಿಗೂ ಮಿಕ್ಕಿ ಹಣ ಕೊಟ್ಟಿದ್ದರು. 2024ರ ಮೇ ತಿಂಗಳಲ್ಲಿ ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ನಿಝಾಮ್ ಕಟ್ಟುಕಥೆ ಸೃಷ್ಟಿಸಿದ್ದಲ್ಲದೆ, ಉದ್ಯಮಿಯನ್ನೂ ನಂಬಿಸಿದ್ದ.

ಜೀವಂತ ಇದ್ದರೂ, ಜಿತೇಶ್ ಯಾರಿಗೂ ಕಾಣದಂತೆ ನಾಪತ್ತೆಯಾಗಿಸಿದ್ದಲ್ಲದೆ, ಆತ್ಮಹತ್ಯೆಗೆ ಶರಣಾಗಿದ್ದಾಗಿ ಬಿಂಬಿಸಲಾಗಿತ್ತು. ನಿಜಾಮ್ ಮತ್ತು ಜಿತೇಶ್ ಇಬ್ಬರೂ ಸೇರಿ ನಾಟಕ ಮಾಡಿದ್ದು ಕೇಸು ಹಾಕಿಸಿಕೊಂಡು ಜೈಲಿಗೆ ಹೋಗೋ ಬದಲು ಹಣ ಕೊಟ್ಟು ಎಲ್ಲವನ್ನೂ ಮುಗಿಸಿ ಬಿಡುವ ನಿರ್ಧಾರಕ್ಕೆ ಉದ್ಯಮಿ ಬಂದಿದ್ದರು. ಇದರಂತೆ, ಉದ್ಯಮಿಯನ್ನು ಕೇಸಿನಿಂದ ಪಾರಾಗಿಸುವ ನೆಪದಲ್ಲಿ ಕೋಟ್ಯಂತರ ಹಣಕ್ಕೆ ಬೇಡಿಕೆ ಇಡಲಾಗಿತ್ತು. 2024 ರಿಂದ 2026ರ ವರೆಗೂ ನಿಜಾಮ್, ಕೋಟ್ಯಾಂತರ ರೂಪಾಯಿ ಹಣ ವಸೂಲಿ ಮಾಡಿದ್ದ.

ಜಿತೇಶ್ ಡೆತ್ ನೋಟ್ ಸ್ಟೋರಿ ನಂಬಿದ್ದ ಮಂಗಳೂರಿನ ಉದ್ಯಮಿ ಜೈಲಿಗೆ ಹೋಗುವ ಭಯ ಮತ್ತು ಮರ್ಯಾದೆಗೆ ಅಂಜಿ ನಿಝಾಮ್ ಕೇಳಿದಷ್ಟು ದುಡ್ಡು ಕೊಟ್ಟಿದ್ದರು. ಆದರೂ ಮತ್ತೆ ಮತ್ತೆ ಹಣ ಕೇಳಿ ಪಡೆದುಕೊಂಡಿದ್ದ ಎರಡು ವರ್ಷಗಳ ಅವಧಿಯಲ್ಲಿ 2 ಕೋಟಿ 77 ಲಕ್ಷದಷ್ಟು ಹಣ ನೀಡಿದ್ದರು. ಆದರೆ 2026ರ ಜೂನ್ ಆರಂಭದಲ್ಲಿ ಅಚಾನಕ್ಕಾಗಿ ಜಿತೇಶ್, ಉದ್ಯಮಿಗೆ ಮಂಗಳೂರಿನಲ್ಲಿ ಕಾಣಸಿಕ್ಕಿದ್ದ. ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದ್ದ ಜಿತೇಶ್ ಜೀವಂತ ಇರೋದು ನೋಡಿ ಉದ್ಯಮಿಗೆ ಶಾಕ್ ಆಗಿತ್ತು.

ಕೂಡಲೇ ಮಂಗಳೂರಿನ ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿ ಹನಿಟ್ರಾಪ್ ಕತೆಯನ್ನು ಹೇಳಿದ್ದರು. ಉದ್ಯಮಿ ದೂರಿನ ಆಧಾರದಲ್ಲಿ ಜಿತೇಶ್ ಜಾಗೂ ನಿಝಾಮ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಯುವ ಕಾಂಗ್ರೆಸ್ ಮುಖಂಡನಾಗಿರುವ ನಿಜಾಮ್, ರಾಜ್ಯದ ಹಲವು ಕಾಂಗ್ರೆಸ್ ನಾಯಕರ ಜೊತೆಗೆ ತೆಗೆಸಿಕೊಂಡಿದ್ದ ಫೋಟೋ ಈಗ ವೈರಲ್ ಆಗಿದೆ.

Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
wpDiscuz
0
0
Would love your thoughts, please comment.x
()
x
Exit mobile version