ಉದ್ಯಾವರ: ಡಿವೈಡರ್ ಮೇಲೆರಿದ ಕಾರು, ಮೂವರಿಗೆ ಗಾಯ
ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್ ಮೇಲೆರಿದ ಘಟನೆ ಶುಕ್ರವಾರ ಮುಂಜಾನೆ ರಾ.ಹೆ. 66 ಉದ್ಯಾವರದ ಕಿಯಾ ಶೋರೂಮ್ ಬಳಿ ಸಂಭವಿಸಿದೆ.
ಮಂಗಳೂರಿನಿಂದ ಹರ್ಯಾಣದತ್ತ ತೆರಳುತ್ತಿದ್ದ ಕಾರಿನಲ್ಲಿ ಮೂವರ ಪ್ರಯಾಣಿಸುತ್ತಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಡಿವೈಡರ್ ಮೇಲಿನ ಕ್ರಾಶ್ ಗಾರ್ಡ್ ಸಹಿತ ಕಾರು ನಜ್ಜುಗುಜ್ಜಾಗಿದ್ದು ಅಪಾರ ಹಾನಿಯಾಗಿದೆ
ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.