ಉಪ್ಪಿನಂಗಡಿ| ಜೇನು ಕೃಷಿ ಕಲಿಸುವ ನೆಪದಲ್ಲಿ ಬಾಲಕಿಯ ಅತ್ಯಾಚಾರ: ಆರೋಪಿಯ ಬಂಧನ
ಉಪ್ಪಿನಂಗಡಿ: ಜೇನುಕೃಷಿ ಕಲಿಸುವ ನೆಪದಲ್ಲಿ ವ್ಯಕ್ತಿಯೋರ್ವ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಬ್ದುಲ್ ಗಫೂರ್ ಅತ್ಯಾಚಾರ ಆರೋಪಿಯಾಗಿದ್ದು, ಆತನನ್ನು ಬಂಧಿಸಿರುವ ಉಪ್ಪಿನಂಗಡಿ ಪೊಲೀಸರು ಅ. ಕ್ರ 118/2025, ಕಲಂ: 115(2),351(2),65(1) BNS-2023 4, 6 ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಘಟನೆ ವಿವರ: ಬೆಳಗಾವಿ ಮೂಲದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಜೇನುಕೃಷಿ ತರಬೇತಿ ನೀಡುವುದಾಗಿ ಹೇಳಿ ಆರೋಪಿ ಅಬ್ದುಲ್ ಗಫೂರ್ ಹೇಳಿದ್ದ. ಈ ಕಾರಣಕ್ಕೆ ಬಾಲಕಿಯನ್ನು ಪೋಷಕರು ಎರಡು ತಿಂಗಳಿನಿಂದ ಅಬ್ದುಲ್ ಗಫೂರ್ ಮನೆಯಲ್ಲಿ ಬಿಟ್ಟಿದ್ದರು. ಈ ಮಧ್ಯೆ ಬಾಲಕಿಯ ಪೋಷಕರು ಊರಿಗೆ ತೆರಳಿದ್ದರು. ಈ ಅವಧಿಯಲ್ಲಿ ಡಿ.2ರಿಂದ 19ರವರೆಗೆ ಆರೋಪಿ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
