ಎಂ ಓ 4 ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಲು ವಿಕಾಸ್ ಹೆಗ್ಡೆ ಆಗ್ರಹ
ಉಡುಪಿ ಜಿಲ್ಲೆಯಲ್ಲಿ ಈ ಭಾರಿ ವಾಡಿಕೆಗಿಂತ ಅತ್ಯಂತ ಹೆಚ್ಚು ಮಳೆಯಾಗಿದೆ ಹಾಗೂ ಮಳೆಯ ಅಬ್ಬರ ಇಂದಿಗೂ ತಗ್ಗಿಲ್ಲಾ. ರೈತರು ಭತ್ತ ನೇಜಿಯ ನಾಟಿ ಸಮಯದಲ್ಲಿ ವಿಪರೀತ ಮಳೆಗೆ ಕಂಗೆಟ್ಟು ಹೋಗಿ ನಾಟಿ ಮಾಡಿದ ನೇಜಿ ಹಲವು ಭಾರೀ ನೆರೆಯ ನೀರಿನಲ್ಲಿ ಕೊಚ್ಚಿ ಹೋದರೂ ಸಹ ಇಂತಾ ಕಠಿಣ ಪರಿಸ್ಥಿತಿಯಲ್ಲೂ ರೈತರು ಅತ್ಯಂತ ಕಷ್ಟ ಪಟ್ಟು ಇಲ್ಲಿಯ ಪ್ರಮುಖ ಭತ್ತದ ತಳಿಯಾದ ಎಂ ಓ 4 ಭತ್ತವನ್ನು ಬೆಳೆದು ಉತ್ತಮ ಫಸಲನ್ನು ಪಡೆದಿದ್ದಾರೆ ಆದರೆ ಈಗ ಕಟಾವು ಪ್ರಾರಂಭವಾಗಿದ್ದು ಒಂದು ಕಡೆಯಲ್ಲಿ ವಿಪರೀತ ಮಳೆ ಭತ್ತದ ಫಸಲು ಕಟಾವಿಗೆ ತೊಂದರೆ ಕೊಡುತ್ತಿದ್ದರೆ, ಇನ್ನೊಂದು ಕಡೆ ರೈತರಿಗೆ ಫಸಲನ್ನು ಶೇಖರಿಸಿಡಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಹೊಲದಿಂದಲೇ ನೇರ ಮಾರಾಟ ಮಾಡುತ್ತಾರೆ ಆದರೆ ಖಾಸಗಿ ಖರೀದಿದಾರರು ಈ ಭತ್ತವನ್ನು ಕಡಿಮೆ ಬೆಲೆಗೆ ಕೇಳುತ್ತಿದ್ದು ರೈತ ಅನಿವಾರ್ಯ ಪರಿಸ್ಥಿತಿಯಲ್ಲಿ ಭತ್ತವನ್ನು ಖಾಸಗಿಯವರಿಗೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಆದುದರಿಂದ ಸರ್ಕಾರ ಕೂಡಲೇ ಎಂ ಓ 4 ಭತ್ತಕ್ಕೆ ಕ್ವಿಂಟಲ್ ಗೆ ಸುಮಾರು ನಾಲ್ಕರಿಂದ ನಾಲ್ಕುವರೆ ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಬೇಕು ಹಾಗೂ ಕೂಡಲೇ ಬೆಂಬಲ ಬೆಲೆಯಡಿಯಲ್ಲಿ ಭತ್ತ ಖರೀದಿಯನ್ನು ಪ್ರಾರಂಭಿಸಬೇಕು ಎಂದು ಕುಂದಾಪುರ ತಾಲ್ಲೂಕು ರೈತ ಮುಖಂಡ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.
