ಎತ್ತಿನಹೊಳೆ ಯೋಜನೆ ಹೋರಾಟ ನಾಯಕರ ಬಂಧನ ಸಂಸದ ಕಟೀಲ್ ಖಂಡನೆ

Spread the love

ಮಂಗಳೂರು : ಎತ್ತಿನಹೊಳೆ ಯೋಜನೆ ವಿರೋಧಿಸಿ ಹೋರಾಟ ನಡೆಸುತ್ತಿರುವ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ನಾಯಕರನ್ನು ಮುಖ್ಯಮಂತ್ರಿ ಆಗಮನದ ಮುನ್ನ ಪೆÇಲೀಸರು ಬಂಧಿಸಿದ ಕ್ರಮವನ್ನು ಸಂಸದ ನಳಿನ್‍ಕುಮಾರ್ ಕಟೀಲ್ ಖಂಡಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ನಡೆಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಪೆÇಲೀಸ್ ಬಲ ಪ್ರಯೋಗಿಸಿ ಹೋರಾಟಗಾರರ ಹಕ್ಕು ಮೊಟಕುಗೊಳಿಸಲು ಯತ್ನಿಸಿದ್ದು ಪ್ರಜಾಪ್ರಭುತ್ವದ ಕೊಲೆಯಾಗಿದೆ. ಸರ್ಕಾರದ ಈ ದಮನಕಾರಿ ನೀತಿಗೆ ಮುಂದಿನ ದಿನಗಳಲ್ಲಿ ಕರಾವಳಿಯ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎತ್ತಿನಹೊಳೆ ಯೋಜನೆ ವಿರೋಧಿಸಿ ಕರಾವಳಿಯಲ್ಲಿ ವಿವಿಧ ಹಂತಗಳಲ್ಲಿ ಹೋರಾಟ ನಡೆದಿದೆ. ಆದರೆ ಸರ್ಕಾರ ಜಿಲ್ಲೆಯ ಜನತೆಯ ಭಾವನೆಗಳಿಗೆ ಯಾವುದೇ ಗೌರವ ನೀಡಿಲ್ಲ. ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಅವರು ಹೋರಾಟಗಾರರ ಅಹವಾಲು ಆಲಿಸಬೇಕಿತ್ತು. ಆದರೆ ನಾಯಕರನ್ನು ಬಂಧನ ಮಾಡಿರುವುದು ಜಿಲ್ಲೆಗೆ ಮಾಡಿದ ಅವಮಾನ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.


Spread the love

1 Comment

Comments are closed.