Home Mangalorean News Kannada News ಎರಡನೇ ಮದುವೆಯಾಗಲು ಪತ್ನಿಗೆ ಹಾವಿನಿಂದ ಕಚ್ಚಿಸಿ ಕೊಂದ ಪಾಪಿ ಪತಿ

ಎರಡನೇ ಮದುವೆಯಾಗಲು ಪತ್ನಿಗೆ ಹಾವಿನಿಂದ ಕಚ್ಚಿಸಿ ಕೊಂದ ಪಾಪಿ ಪತಿ

Spread the love

ಎರಡನೇ ಮದುವೆಯಾಗಲು ಪತ್ನಿಗೆ ಹಾವಿನಿಂದ ಕಚ್ಚಿಸಿ ಕೊಂದ ಪಾಪಿ ಪತಿ

ಕೊಲ್ಲಂ: ಎರಡನೇ ಮದುವೆಯಾಗಲು ಇಚ್ಛಿಸಿದ್ದ ಪತಿಯೊಬ್ಬ ತನ್ನ ತನ್ನ ಪತ್ನಿಗೆ ಹಾವಿನಿಂದ ಕಚ್ಚಿಸಿ ಆಕೆಯನ್ನು ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ಕೇರಳದಲ್ಲಿ ನಡೆದೆ.

ಉತ್ರಾ ಮೃತ ಮಹಿಳೆ. ಮೇ 7 ರಂದು ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಆರೋಪಿ ಸೂರಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಅಮಾನುಷವಾದ ಕೃತ್ಯದ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಜೊತೆಗೆ ಈ ಹಿಂದೆಯೂ ಹಾವಿನಿಂದ ಪತ್ನಿಗೆ ಕಚ್ಚಿಸಿದ್ದ ಎಂಬುದು ತಿಳಿದು ಬಂದಿದೆ.

ಎರ್ರಂ ಮೂಲದ ಪತ್ನಿ ಉತ್ರಾ ಸಾವಿನ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದರ ವಿಚಾರಣೆ ಕೈಗೆತ್ತಿಕೊಂಡಿದ್ದ ಕೇರಳ ಕ್ರೈಂ ಬ್ರಾಂಚ್ ವಿಭಾಗದ ಪೊಲೀಸರು, ಪತಿ ಸೂರಜ್‌ ಮತ್ತು ಇತರೆ ನಾಲ್ವರವನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಪತ್ನಿ ಬೆಡ್‌ ರೂಂನಲ್ಲಿ ಮಲಗಿದ್ದಾಗ ಹಾವಿನಿಂದ ಕಚ್ಚಿಸಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಕೃತ್ಯಕ್ಕಾಗಿ ಕಲ್ಲುವಾತುಕ್ಕಲ್ ಮೂಲದ ಹಾವು ಹಿಡಿಯುವ ಸುರೇಶ್‌ ಎಂಬಾತನಿಂದ ಆರೋಪಿ ಸೂರಜ್ 10,000 ರೂ.ಗೆ ಹಾವನ್ನು ಖರೀದಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾವು ಮಾರಾಟ ಮಾಡಿದವನೊಂದಿಗೆ ಆರೋಪಿ ನಡೆಸಿದ ದೂರವಾಣಿ ಸಂಭಾಷಣೆಯ ಮಾಹಿತಿ ಕೂಡ ಲಭ್ಯವಾಗಿದೆ.


Spread the love

Exit mobile version