Home Mangalorean News Kannada News ಎರ್ಮಾಳು : ಬೈಕ್ – ಬಸ್ಸಿನ ನಡುವೆ ಅಫಘಾತ – ಇಬ್ಬರು ಗಂಭೀರ

ಎರ್ಮಾಳು : ಬೈಕ್ – ಬಸ್ಸಿನ ನಡುವೆ ಅಫಘಾತ – ಇಬ್ಬರು ಗಂಭೀರ

Spread the love

ಎರ್ಮಾಳು : ಬೈಕ್ – ಬಸ್ಸಿನ ನಡುವೆ ಅಫಘಾತ – ಇಬ್ಬರು ಗಂಭೀರ

ಉಡುಪಿ: ಬೈಕ್ ಮತ್ತು ಖಾಸಗಿ ಬಸ್ಸಿನ ನಡುವೆ ನಡೆದ ಮುಖಾಮುಖಿ ಅಫಘಾತದಲ್ಲಿ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಎರ್ಮಾಳ್ ಬಳಿ ಶನಿವಾರ ರಾತ್ರಿ ಸಂಭವಿಸಿದೆ.

ಗಾಯಗೊಂಡವರನ್ನು ಎರ್ಮಾಳು ನಿವಾಸಿಗಳಾದ ಹರೀಶ್ಚಂದ್ರ (39) ಮತ್ತು ರೋಹಿತಾಶ್ವ (46) ಎಂದು ಗುರುತಿಸಲಾಗಿದೆ.

ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಶ್ರೀ ದುರ್ಗಾಂಬಾ ಬಸ್ತು ಬಡಾ ಎರ್ಮಾಳು ಬಳಿ ಇನ್ನೊಂದು ಬಸ್ಸಿಗೆ ಒವರ್ ಟೇಕ್ ಮಾಡುವ ಭರದಲ್ಲಿ ಮುಂದೆ ಚಲಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಮತ್ತು ಸಹ ಸವಾರ ರಸ್ತೆಗೆಸೆಯಲ್ಲಪಟ್ಟಿದ್ದು ಬಸ್ಸು ಡಿವೈಡರ್ ದಾಟಿ ರಸ್ತೆಯ ಇನ್ನೊಂದು ಕಡೆಗೆ ಹೊಗಿ ನಿಂತಿದ್ದು ಬೈಕನ್ನು ಎಳೆದುಕೊಂಡು ಹೋಗಿದೆ.

ಗಾಯಗೊಂಡವರನ್ನು ಉಡುಪಿ ನಗರದ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.


Spread the love

Exit mobile version