Home Mangalorean News Kannada News ಎಸ್.ಎಸ್.ಎಲ್.ಸಿ ಫಲಿತಾಂಶ: ಉಡುಪಿ ದಕ ಸಾಧನೆಗೆ ಕ್ಯಾ. ಕಾರ್ಣಿಕ್ ಶ್ಲಾಘನೆ

ಎಸ್.ಎಸ್.ಎಲ್.ಸಿ ಫಲಿತಾಂಶ: ಉಡುಪಿ ದಕ ಸಾಧನೆಗೆ ಕ್ಯಾ. ಕಾರ್ಣಿಕ್ ಶ್ಲಾಘನೆ

Spread the love

ಎಸ್.ಎಸ್.ಎಲ್.ಸಿ ಫಲಿತಾಂಶ: ಉಡುಪಿ ದಕ ಸಾಧನೆಗೆ ಕ್ಯಾ. ಕಾರ್ಣಿಕ್ ಶ್ಲಾಘನೆ

ಮಂಗಳೂರು: ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಗಳಿಸಿರುವುದಕ್ಕಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಅಭಿನಂದಿಸಿದ್ದಾರೆ.

ಗುಣ ಮಟ್ಟದ ಶಿಕ್ಷಣದೊಂದಿಗೆ ಅವಳಿ ಜಿಲ್ಲೆಗಳ ಈ ಸಾಧನೆಗೆ ಕಾರಣೀಭೂತರಾದ ಇಲಾಖೆಯ ಅಧಿಕಾರಿಗಳ, ಶಾಲೆಯ ಮುಖ್ಯೋಪಾಧ್ಯಯರ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕಠಿಣ ಪರಿಶ್ರಮವನ್ನು ಶ್ಲಾಘಿಸುತ್ತಾ, ಕರಾವಳಿಯ ಉತ್ಕೃಷ್ಠ ಶೈಕ್ಷಣಿಕ ಪರಂಪರೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ ಎಲ್ಲರನ್ನೂ ಅಭಿನಂದಿಸಿದ್ದಾರೆ.


Spread the love

Exit mobile version