Home Mangalorean News Kannada News ಎ.ಎನ್.ಎಫ್ ಹೆಡ್ ಕಾನ್ ಸ್ಟೆಬಲ್ ನಿಂದ ಸ್ಪೋಟಕ ಪ್ರದರ್ಶಿಸಿ ಬೆದರಿಕೆ – ಪ್ರಕರಣ ದಾಖಲು

ಎ.ಎನ್.ಎಫ್ ಹೆಡ್ ಕಾನ್ ಸ್ಟೆಬಲ್ ನಿಂದ ಸ್ಪೋಟಕ ಪ್ರದರ್ಶಿಸಿ ಬೆದರಿಕೆ – ಪ್ರಕರಣ ದಾಖಲು

Spread the love

ಎ.ಎನ್.ಎಫ್ ಹೆಡ್ ಕಾನ್ ಸ್ಟೆಬಲ್ ನಿಂದ ಸ್ಪೋಟಕ ಪ್ರದರ್ಶಿಸಿ ಬೆದರಿಕೆ – ಪ್ರಕರಣ ದಾಖಲು

ಕಾರ್ಕಳ: ಸಮೀಪದ ರಾಮಸಮುದ್ರ ಎಂಬಲ್ಲಿರುವ ನಕ್ಸಲ್‌ ನಿಗ್ರಹ ಪಡೆಯ ಕ್ಯಾಂಪ್‌ನಲ್ಲಿ (ಎ.ಎನ್. ಎಫ್) ಹೆಡ್‌ಕಾನ್‌ಸ್ಟೆಬಲ್‌ ಪಿಸ್ತೂಲ್‌ ಮತ್ತು ಸ್ಫೋಟಕ ಪ್ರದರ್ಶಿಸಿ ಬೆದರಿಕೆ ಹಾಕಿದ್ದು, ಪ್ರಕರಣ ದಾಖಲಾಗಿದೆ.

ಕ್ಯಾಂಪ್‌ನಲ್ಲಿ ಹೆಡ್‌ಕಾನ್‌ಸ್ಟೆಬಲ್‌ ಆನಂದ ಎಸ್. ಪಾಟೀಲ ಎಂಬಾತ ಕ್ಯಾಂಪ್‌ನ ಗೇಟ್‌ನ ಎದುರುಗಡೆಗೆ ಅಡ್ಡಲಾಗಿ ಕುಳಿತುಕೊಂಡು ಇಲಾಖಾ ಪಿಸ್ತೂಲನ್ನು ಹೊರತೆಗೆದು ಬೆದರಿಕೆ ಹಾಕಿದ್ದು, ಬಳಿಕ ಆತನನ್ನು ಸಮಾ
ಧಾನ ಪಡಿಸಿ ಪಿಸ್ತೂಲನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಎಲ್ಲಿಂದಲೋ ತಂದ ಸ್ಫೋಟಕ ವಸ್ತುಗಳನ್ನು ಕೈಚೀಲ
ದಲ್ಲಿ ಅಕ್ರಮವಾಗಿ ಇರಿಸಿ ಎ.ಎನ್.ಎಫ್ ಕ್ಯಾಂಪ್‌ನ ಮುಂಭಾಗದ ಗೇಟ್ ಬಳಿ ಕುಳಿತುಕೊಂಡು ಸ್ಫೋಟಿಸುತ್ತೇನೆ ಎಂಬುದಾಗಿ ಬೆದರಿಕೆ ಹಾಕಿರುವ ಬಗ್ಗೆ ದೂರು ದಾಖಲಾಗಿದೆ.

ಎ.ಎನ್.ಎಫ್‌ ಇನ್‌ಸ್ಪೆಕ್ಟರ್‌ ಎಂ. ಸುನೀಲ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.


Spread the love

Exit mobile version