ಎ. 27: ತೊಟ್ಟಂ ಚರ್ಚಿನಲ್ಲಿ ‘ಈಸ್ಟರ್ ಕಲಾ ಸಂಜೆ’ ಸಾಂಸ್ಖೃತಿಕ ಕಾರ್ಯಕ್ರಮ
ಮಲ್ಪೆ: ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ತೊಟ್ಟಂ ಸಂತ ಅನ್ನಮ್ಮ ಚರ್ಚ್ ಘಟಕದ ವಿವಿಧ ಯೋಜನೆಗಳ ಸಹಾಯರ್ಥವಾಗಿ ಈಸ್ಟರ್ ಕಲಾ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಪ್ರಿಲ್ 27 ರಂದು ಸಂಜೆ 6 ಗಂಟೆಗೆ ಚರ್ಚಿನ ಬಯಲು ವೇದಿಕೆಯಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಪ್ರತಿಭಾಂಗಣ್ ಸಾಂಸ್ಕೃತಿಕ ಸಂಘಟನೆಯ ಉದ್ಘಾಟನೆ ಜರುಗಲಿದ್ದು, ಮುಖ್ಯ ಅತಿಥಿಗಳಾಗಿ ಹೆಸರಾಂತ ಕೊಂಕಣಿ ಗಾಯಕಿ ಕೊಂಕಣ್ ಮೈನಾ ಮೀನಾ ರೆಬಿಂಬಸ್ ಹಾಗೂ ಅವರ ಪುತ್ರ ಗಾಯಕ ವಿಶ್ವಾಸ್ ರೆಬಿಂಬಸ್, ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ರೊನಾಲ್ಡ್ ಡಿ ಆಲ್ಮೇಡಾ ಉಪಸ್ಥಿತರಿರಲಿದ್ದಾರೆ
ಕಲಾಸಂಜೆ ಕಾರ್ಯಕ್ರಮದಲ್ಲಿ ಹೆಸರಾಂತ ಸಂಗೀತ ತಂಡ ನೆಲ್ಸನ್ ಲೂವಿಸ್ ಸಂತೆಕಟ್ಟೆ ಇವರ ಕ್ಯಾರಲ್ಸ್ ಬೀಟ್ ಗ್ರೂಪ್, ಹಾಗೂ ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ಸಹಿತ, ಸ್ಥಳೀಯ ಕಲಾವಿದರಿಂದ ಸಂಗೀತ ಕಾರ್ಯಕ್ರಮ, ಮಂಗಳೂರಿನ ಹಾಸ್ಯ ತಂಡ ಮೆಮೊರಿ ಇವರಿಂದ ಹಾಸ್ಯ ಕಾರ್ಯಕ್ರಮಗಳು ನಡೆಯಲಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ