Home Mangalorean News Kannada News ಐ.ಎಸ್.ಎಫ್ ಕುವೈಟ್ ರಕ್ತದಾನ ಶಿಬಿರ: ಅತ್ಯುತ್ಸಾಹದಲ್ಲಿ ಪಾಲ್ಗೊಂಡ ಅನಿವಾಸಿಗಳು

ಐ.ಎಸ್.ಎಫ್ ಕುವೈಟ್ ರಕ್ತದಾನ ಶಿಬಿರ: ಅತ್ಯುತ್ಸಾಹದಲ್ಲಿ ಪಾಲ್ಗೊಂಡ ಅನಿವಾಸಿಗಳು

Spread the love

ಐ.ಎಸ್.ಎಫ್ ಕುವೈಟ್ ರಕ್ತದಾನ ಶಿಬಿರ: ಅತ್ಯುತ್ಸಾಹದಲ್ಲಿ ಪಾಲ್ಗೊಂಡ ಅನಿವಾಸಿಗಳು

ಕುವೈಟ್: ಬ್ಲಡ್ ಬ್ಯಾಂಕ್ ಕುವೈಟ್ ಮತ್ತು ಇಂಡಿಯನ್ ಸೋಶಿಯಲ್ ಪೋರಮ್ ಕುವೈಟ್ ಜಂಟಿ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರವು ಸೆಪ್ಟೆಂಬರ್ 11, 2020ರ ಶುಕ್ರವಾರ ಅಪರಾಹ್ನ 1ರಿಂದ ಸಂಜೆ 6 ಗಂಟೆಯವರೆಗೆ ಇಲ್ಲಿನ ಅದಾನ್ ಬ್ಲಡ್ ಬ್ಯಾಂಕ್‌’ನಲ್ಲಿ ಯಶಸ್ವಿಯಾಗಿ ಜರುಗಿತು.

ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಇಂಡಿಯನ್ ಸೋಶಿಯಲ್ ಫೋರಂ ಕುವೈಟ್, ಕರ್ನಾಟಕ ಘಟಕದ ಅಧ್ಯಕ್ಷರಾದ ಜನಾಬ್ ಮುಸ್ತಕೀಮ್ ಶಿರೂರ್ ಅವರು ಸಾರ್ವಜನಿಕ ರಕ್ತದಾನವು ಈ ಸಮಯದ ಅವಶ್ಯಕತೆಯಾಗಿದ್ದು, ಕುವೈಟ್ ರಕ್ತನಿಧಿಗಳಲ್ಲಿ ರಕ್ತದ ಅಭಾವವಿದ್ದು ಭಾರತೀಯ ಅನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ಆರಂಭದಿಂದಲೇ ಅತ್ಯುತ್ಸಾಹದಿಂದ ಭಾಗವಹಿಸಿದ ಕುವೈಟ್ ಅನಿವಾಸಿ ಭಾರತೀಯ ರಕ್ತದಾನಿಗಳು ಸಂಜೆಯವರೆಗೂ ತಂಡೋಪತಂಡವಾಗಿ ಆಗಮಿಸುತ್ತಿರುವುದು ಕಂಡು ಬಂತು. ಕೋವಿಡ್ ಮುನ್ನೆಚ್ಚರಿಕೆ ಮತ್ತು ಮಾರ್ಗಸೂಚಿಯೊಂದಿಗೆ ನಡೆದ ರಕ್ತದಾನ ಶಿಬಿರದಲ್ಲಿ ಜಾತಿಮತ ಭೇದವಿಲ್ಲದೆ ಸುಮಾರು ನೂರಕ್ಕೂ ಹೆಚ್ಚಿನ ಅನಿವಾಸಿಗಳು ಪಾಲ್ಗೊಂಡರು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅದಾನ್ ಬ್ಲಡ್ ಬ್ಯಾಂಕ್ ವೈದ್ಯೆ ಡಾ. ರಾನಿಯಾ ಇಬ್ರಾಹಿಂ, ಇಂಡಿಯನ್ ಸೋಶಿಯಲ್ ಫೋರಂ ಪದಾಧಿಕಾರಿಗಳು ಮತ್ತು ಸ್ವಯಂಸೇವಕರ ಶಿಸ್ತು ಮತ್ತು ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಅತಿಥಿಗಳಾಗಿ ಆಗಮಿಸಿದ್ದ ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ ವ್ಯವಸ್ಥಾಪಕರಾದ ಅಬ್ದುಲ್ ರಝಾಕ್’ರವರು ಮಾತನಾಡಿ ಐಎಸ್ಎಫ್ ಕಾರ್ಯಶೈಲಿ ಮಾದರಿಯಾಗಿದ್ದು ಇಂತಹ ಇನ್ನಷ್ಟು ಜನಪರ ಕಾರ್ಯಗಳನ್ನು ನಡೆಸುವಂತಾಗಲಿ ಎಂದು ಹಾರೈಸಿದರು.

ಇಂಡಿಯನ್ ಸೋಶಿಯಲ್ ಫೋರಂ ರಕ್ತದಾನ ಅಭಿಯಾನದ ಮುಂದಿನ ಶಿಬಿರವು ಕುವೈಟಿನ ಜಾಬ್ರಿಯಾ ಬ್ಲಡ್ ಬ್ಯಾಂಕ್’ನಲ್ಲಿ ಸೆಪ್ಟೆಂಬರ್ 25, 2020ರ ಶುಕ್ರವಾರ ಅಪರಾಹ್ನ 1ರಿಂದ ಸಂಜೆ 6ರ ವರೆಗೆ ನಡೆಯಲಿದೆ.


Spread the love

Exit mobile version