Home Mangalorean News Kannada News ಒಮಾನ್ ಬಿಲ್ಲವಾಸ್ ಕುಟುಂಬ ಸಮಾಗಮ 2019

ಒಮಾನ್ ಬಿಲ್ಲವಾಸ್ ಕುಟುಂಬ ಸಮಾಗಮ 2019

Spread the love

ಒಮಾನ್ ಬಿಲ್ಲವಾಸ್ ಕುಟುಂಬ ಸಮಾಗಮ 2019

ಒಮಾನ್ ಬಿಲ್ಲವಾಸ್ ವತಿಯಿಂದ ಫೆಬ್ರವರಿ 15, 2019 ರಂದು ಓಮನಿನ ಅಲ್ ಬರ್ಕಾದ ಎಸ್ರಿ ಫಾರ್ಮ್ ಹೌಸಿನಲ್ಲಿ “ಓಮನ್ ಬಿಲ್ಲವಾಸ್ ಕುಟುಂಬ ಸಮಾಗಮ 2019” ಸಂಭ್ರಮದಿಂದ ನಡೆಯಿತು. ಓಮನ್ ದೇಶದಲ್ಲಿ ವಾಸಿಸುತ್ತಿರುವ ಬಿಲ್ಲವ ಕುಟುಂಬಗಳ ಸದಸ್ಯರು ಈ ಒಂದು ದಿನದ ಕುಟುಂಬ ಸಮಾಗಮ ಮತ್ತು ಕ್ರೀಡಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. “ಓಮಾನ್ ಬಿಲ್ಲವಾಸ್” ನ 10 ನೇ ವರ್ಷದ ಸ್ಮರಣಾರ್ಥವಾಗಿ, ಈ ಪೂರ್ಣ ದಿನದ ಸ್ಪರ್ಧೆಯನ್ನು ಸದಸ್ಯರ ನಡುವೆ ಏಕತೆ ಮತ್ತು ಒಗ್ಗಟ್ಟನ್ನು ತರುವ ಉದ್ದೇಶದಿಂದ ಆಯೋಜಿಸಲಾಯಿತು. ಇಡೀ ದಿನ ವಿವಿಧ ಕ್ರೀಡಾ ಚಟುವಟಿಕೆಗಳು ಮತ್ತು ವಿನೋದ / ಕೌಶಲ್ಯದ ಆಟಗಳನ್ನು ಆಯೋಜಿಸಲಾಯಿತು, ಇದು ಸದಸ್ಯರಲ್ಲಿ ಮತ್ತು ಹೆಂಗಸರು ಮತ್ತು ಮಕ್ಕಳಲ್ಲಿ ಬಹಳ ಆಸಕ್ತಿಯನ್ನು ತೋರಿತು.

ಈ ಕಾರ್ಯಕ್ರಮ ಸಮುದಾಯದ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಿತು. ಇದು ವರ್ಷದ ಮೊದಲ ಹೊರಾಂಗಣ ಕಾರ್ಯಕ್ರಮವಾಗಿದ್ದು, ಎಲ್ಲರೂ ಒಟ್ಟಾಗಿ ವಿನೋದ, ವ್ಯಾಯಾಮ ಮತ್ತು ಭಾಗವಹಿಸವಿಕೆ ಆನಂದಿಸಲು ಒಂದು ಪರಿಪೂರ್ಣ ಅವಕಾಶವಾಗಿತ್ತು. ಇದು ಸದಸ್ಯರ ನಡುವಿನ ಸ್ನೇಹ ಮತ್ತು ಸಂಬಂಧ, ಬೆಂಬಲ ನಿರ್ಮಿಸಲು ಸಹಾಯ ಮಾಡಿತು.

ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಯುವ ಬಿಲ್ಲವ ಸಾಧಕರಾದ ನೀವ್ ಜಯಪ್ರಕಾಶ್, ನಿಹಾಲ್ ಜಯಪ್ರಕಾಶ್ (ಅಂಡರ್ 19 ಕ್ರಿಕೆಟ್ ತಂಡದ ಆಟಗಾರು) ಕೃತಿಕಾ ವಿಠಲ ಪೂಜಾರಿ (ಓಮನ್ ಮಹಿಳಾ ವಾಲಿಬಾಲ್ ತಂಡದ ಸದಸ್ಯೆ), ಕಿರಣ್ ಅಂಚನ್ (ಮೊದಲ ಪ್ರಯತ್ನದಲ್ಲಿ ಎಸಿಸಿಎ ಪರೀಕ್ಷೆ ತೇರ್ಗಡೆ) ಕ್ರೀಡಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟನೆಗೆ ಮುನ್ನ ಪುಲ್ವಾಮಾದಲ್ಲಿ ತಮ್ಮ ಜೀವವನ್ನು ಕಳೆದುಕೊಂಡ ಭಾರತೀಯ ಯೋಧರ ಗೌರವಾರ್ಪಣೆಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಬಾಲಕರಿಗಾಗಿ ರನ್ನಿಂಗ್ ರೇಸ್, ಚಾಕೊಲೇಟ್ ಎಣಿಕೆ, ಚೆಂಡನ್ನು ಎಸೆಯುವುದು, ಕಾಲುಗಳ ಮೇಲೆ ಬಾಲ್, ಫ್ರಾಗ್ ರೇಸ್, ಮಾರ್ಬಲ್ಸ್ ಮತ್ತು ಹುಲ್ಲು, ನಿಂಬೆ ಮತ್ತು ಚಮಚ ಓಟ, ಮಹಿಳೆಯರಿಗಾಗಿ ಒಂದು ಕಾಲಿನ ರೇಸ್, ಸೂಜಿ ಮತ್ತು ಥ್ರೆಡ್, ನಿಂಬೆ ಮತ್ತು ಚಮಚ, ಡೂಂಕಾ, ಟ್ಯಾಲೆಂಟ್ ಹಂಟ್, ಟಗ್ ಆಫ್ ವಾರ್ ಹಾಗೂ ಪುರುಷರಿಗಾಗಿ ಲಗೋರಿ, ಟಗ್ ಆಫ್ ವಾರ್ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಕ್ರೀಡಾ ಸಮಿತಿಯ ಉಮೇಶ್ ಜೆಪ್ಪು, ರಿಷಿಕೇಶ್ ಅಮೀನ್, ಅಕ್ಷತಾ ರಿಷಿಕೇಶ್ ಅಮೀನ್, ಗಂಗಾಧರ್ ಪೂಜಾರಿ, ಅಮೃತ್ ಪೂಜಾರಿ ಮತ್ತು ಶ್ರೀನಿವಾಸ್ ಪೂಜಾರಿ ಅವರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಭಾಸ್ಕರ್ ಮತ್ತವರ ತಂಡ ಮಂಗಳೂರಿನ  ಗೋಳಿಬಜೆ, ಕೋರಿ ಸುಕ್ಕಾ ಸಹಿತ ಕರಾವಳಿಯ ಖಾದ್ಯಗಳ ಉಟೋಪಚಾರ ವ್ಯವಸ್ಥೆ ಮಾಡಿದರು. ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಹುಲಿ ವೇಷ ಕುಣಿತ ಕೂಡ ವಿಶೇಷ ಆಕರ್ಷಣೆ ಆಗಿತ್ತು.

ಬಿಲ್ಲವಾಸ್ ಉಪಾಧ್ಯಕ್ಷ ಸುಹಾನ್ ಧನ್ಯವಾದ ನೀಡಿದರು. ಈ ಕಾರ್ಯಕ್ರಮವನ್ನು ವಿವಿಧ ರೀತಿಯಲ್ಲಿ ತಮ್ಮ ಕೊಡುಗೆಗಳ ಮೂಲಕ ಬೆಂಬಲಿಸಿದ ಪ್ರಾಯೋಜಕರಿಗೆ ಅವರು ಧನ್ಯವಾದಗಳನ್ನು ನೀಡಿದರು. ಮನೋಹರ್ ಸಾಲ್ಯಾನ್, ಶ್ರೀಮತಿ ಸುಚೇತನ, ಶಂಕರ್ ಉಪ್ಪೂರು, ವಿಜಯ್ (ರಹಾ), ಹರೀಶ್ ಪೂಜಾರಿ, ಕೆ.ಎನ್. ಅಂಚನ್, ಗಂಗಾಧರ ಪೂಜಾರಿ, ಉತ್ತಮ್ ಕೊಟಿಯನ್, ಸಂದೀಪ್ (ಡಿಜೆ), ಪ್ರಕಾಶ್ (ಎಂ.ಸಿ.ಟಿ.ಫಾರ್ಮಸಿ), ಶ್ರೀಮತಿ ಪ್ರಪುಲ್ಲ ಪ್ರವೀಣ್, ಶ್ರೀಮತಿ ಸಪ್ನಾ ವಿತ್ತಾಲ್, ರೋಹಿದಾಸ್ ಮಂಜೇಶ್ವರ್, ಸುಧಕರ್ ಪೂಜಾರಿ, ಸೋಹರ್ ತಂಡ, ನಿಜ್ವಾ ತಂಡ, ಜೀತು ತಂಡ, ಭಾಸ್ಕರ್ ತಂಡ, ಪ್ರಕಾಶ್ (ಎಸ್ಬಿಜಿ) ಮತ್ತಿತರರು ಭಾಗವಹಿಸಿದರು.


Spread the love

Exit mobile version