ಕಟಪಾಡಿ: ತ್ರಿಶಾ ವಿದ್ಯಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ
ಕಟಪಾಡಿ: ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಸಿ ಎನ್ ಎಕ್ಸಿಕ್ಯೂಟಿವ್, ಸಿ ಎಸ್ ಪ್ರೊಫೆಷನಲ್ ನಲ್ಲಿ ಉತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅತಿಥಿಯಾಗಿ ರಘುನಾಥ್ ನಾಯಕ್, ಸಚಿನ್ ಶೆಟ್ಟಿ, ಕೆ ಸತ್ಯೇಂದ್ರ ಪೈ ಹಾಗೂ ಕಾಲೇಜಿನ ಟ್ರಸ್ಟೀಗಳಾದ ನಮಿತಾ ಜಿ ಭಟ್ ಮತ್ತು ರಾಮ್ ಪ್ರಭು ಹಾಗೂ ಪ್ರಾಂಶುಪಾಲರಾದ ನಾರಾಯಣ್ ರಾವ್ ಮತ್ತು ವಿಶ್ಲೇಶ್ ಶೆಣೈ ಬಿ ಹಾಗೂ ಬಿ ಎಂ ಹೆಗ್ಡೆ ಉಪಸ್ಥಿತರಿದ್ದರು, ವಿದ್ಯಾರ್ಥಿ ಸಂಘದ ಸಂಚಾಲಕರಾದ ರಾಮದಾಸ್ ನಾಯ್ಕ ಉಪಸ್ಥಿತರಿದ್ದರು.
ಅತಿಥಿಗಳಾದ ರಘುನಾಥ್ ನಾಯಕ್ ತಮ್ಮ ಭಾಷಣದಲ್ಲಿ ತಮ್ಮ ಬಾಲ್ಯ ಜೀವನದ ಬಗ್ಗೆ ಹಾಗೂ ತಮ್ಮ ರೈಲ್ವೆ ಮತ್ತು ಯಕ್ಷಗಾನ ವೃತ್ತಿಯ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು ಮತ್ತು ನಾಯಕರಾಗಲು ಶಿಸ್ತು ಅತ್ಯಗತ್ಯ ಮತ್ತು ಸಮಾನ ಮನಸ್ಕರು ಕೂಡುವುದು ಅತಿ ಮುಖ್ಯ ಎಂದು ಹೇಳಿದರು.
ಶಟರ್ ಬಾಕ್ಸ್ ಫಿಲ್ಡ್ ಖ್ಯಾತಿಯ ಸಚಿನ್ ಶೆಟ್ಟಿ ತಮ್ಮ ಅತೀಥ್ಯ ಭಾಷಣದಲ್ಲಿ ನಾಯಕರಾಗುವದರೊಂದಿಗೆ ಸಮಾಜ ಮುಖಿ ಕಾರ್ಯವು ಅಗತ್ಯ ಎಂದು ಹೇಳಿದರು ಮತ್ತು ಕಾರ್ಯದಲ್ಲಿ ದೃಢತೆ ಅತ್ಯಗತ್ಯ ಎಂದು ಹೇಳಿದರು.
ಎಸ್ ವಿ ಎಸ್ ವಿದ್ಯಾವರ್ಧಕ ಸಂಘದ ಸಂಚಾಲಕರು ಆಗಿರುವ ಕೆ ಸತ್ಯೇಂದ್ರ ಪೈ ಇವರು ತಮ್ಮ ಅತಿಥೇಯ ನುಡಿಯಲ್ಲಿ ಮೊಬೈಲ್ ಅನ್ನು ಬಿಟ್ಟು ಮಕ್ಕಳಿಗೆ ಸಂಬಂಧವನ್ನು ಬೆಳೆಸಲು ತಿಳಿ ಹೇಳಿದರು. ಕಾಲೇಜಿನ ನೂತನ ಪದಾಧಿಕಾರಿಗಳಿಗೆ ಶುಭಹಾರಾಯಿಸಿದರು ಮತ್ತು ತ್ರಿಶಾ ಸಂಸ್ಥೆಯ ಸಮಾಜ ಮುಖಿ ಕಾರ್ಯಗಳಿಗೆ ಶುಭ ಹಾರೈಸಿದರು.
ವಿದ್ಯಾರ್ಥಿಗಳಿಂದ ನಡೆಸಲ್ಪಟ್ಟ ವಿದ್ಯಾ ವಿನಾಯಕ ಮಹೋತ್ಸವದ ದೇಣಿಗೆಯ ಮೊತ್ತದಲ್ಲಿ ಎಸ್ ವಿ ಎಸ್ ಕನ್ನಡ ಮಾಧ್ಯಮ ಶಾಲೆಗೆ ಕ್ರೀಡಾ ಡ್ರಮ್ ಸೆಟ್ ಅನ್ನು ಕೊಡುಗೆಯಾಗಿ ನೀಡಲಾಯಿತು.
ಪ್ರಾಂಶುಪಾಲರ ನುಡಿಯಲ್ಲಿ ಪ್ರೊ. ನಾರಾಯಣ್ ರಾವ್ ವಿದ್ಯಾರ್ಥಿ ಪರಿಷತ್ ಎಂದರೆ ಸಂಸ್ಥೆಯ ಹೃದಯವಿದ್ದಂತೆ. ಹೃದಯವು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸದರೆ ಎಲ್ಲ ಕಾರ್ಯವು ಸುಲಭ ಸಾಧ್ಯ ಎಂದು ಚುಟುಕಾಗಿ ಹಿತ ನುಡಿಯನ್ನು ಹೇಳಿದರು.
ಬ್ರೆಷರ್ನ್ ಡೇ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇಡೀ ಕಾರ್ಯಕ್ರಮದ ನಿರೂಪಣೆಯನ್ನು ಪ್ರೊಢಿ, ಅಕ್ಷಯ ಪೈ, ಸ್ವಾಗತ ಪ್ರೊ. ವಾಗೀಶ ಭಟ್, ಪದಕ ವಿತರಣೆಯನ್ನು ಪ್ರೊಫ್. ಅನ್ವಿತಾ ಹಾಗೂ ಧನ್ಯವಾದ ಸಮರ್ಪಣೆಯನ್ನು ಪ್ರೊ. ಶ್ವೇತಾ ಕರ್ಕೇರ ನಡೆಸಿ ಕೊಟ್ಟರು. ತ್ರಿಶಾ ಸಮೂಹ ಸಂಸ್ಥೆಗಳ ಬೋಧಕ ಬೋಧಕೇತರ ಸಿಬ್ಬಂದಿ, ಎಸ್ ವಿ ಎಸ್ ಕನ್ನಡ ಹಾಗೂ ಅಂಗ್ಲ ಮಾಧ್ಯಮ ಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.