Home Mangalorean News Kannada News ಕಣ್ಣೂರಿನಲ್ಲಿ ಫಲಾನುಭವಿಗಳಿಗೆ ವಸತಿ ಸಮುಚ್ಚಯ ನಿರ್ಮಿಸಲು ಶಾಸಕ ಕಾಮತ್ ಅಧಿಕಾರಿಗಳ ಸಭೆ

ಕಣ್ಣೂರಿನಲ್ಲಿ ಫಲಾನುಭವಿಗಳಿಗೆ ವಸತಿ ಸಮುಚ್ಚಯ ನಿರ್ಮಿಸಲು ಶಾಸಕ ಕಾಮತ್ ಅಧಿಕಾರಿಗಳ ಸಭೆ

Spread the love

ಕಣ್ಣೂರಿನಲ್ಲಿ ಫಲಾನುಭವಿಗಳಿಗೆ ವಸತಿ ಸಮುಚ್ಚಯ ನಿರ್ಮಿಸಲು ಶಾಸಕ ಕಾಮತ್ ಅಧಿಕಾರಿಗಳ ಸಭೆ

ಮಂಗಳೂರು: ಕಣ್ಣೂರಿನಲ್ಲಿ ಆಶ್ರಯ ಯೋಜನೆಯಡಿ ಫಲಾನುಭವಿಗಳಿಗೆ ಮನೆ ಕಟ್ಟಿಕೊಡುವ ಕುರಿತು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅಧಿಕಾರಿಗಳ ಸಭೆ ನಡೆಸಿದರು.

ಶಕ್ತಿನಗರದಲ್ಲಿ ಆಶ್ರಯ ಯೋಜನೆಯಡಿ ಕಟ್ಟಬೇಕಾಗಿದ್ದ ತ್ರಿಪ್ಲಸ್ ಜಿ ವಸತಿ ಸಮುಚ್ಚಯದ ಜಾಗ ಅರಣ್ಯ ಇಲಾಖೆಯದ್ದಾಗಿರುವುದರಿಂದ ಕಣ್ಣೂರಿನಲ್ಲಿ ಅದೇ ಮಾದರಿಯಲ್ಲಿ ಮನೆ ನಿರ್ಮಾಣದ ಬಗ್ಗೆ ಶಾಸಕ ಕಾಮತ್ ಯೋಜನೆ ಹಾಕಿಕೊಂಡಿದ್ದಾರೆ. ಈ ಕುರಿತು ಅಧಿಕಾರಿಗಳ ಸಭೆ ನಡೆಸಿದ ಶಾಸಕ ಕಾಮತ್ ಅವರು ಕಣ್ಣೂರಿನಲ್ಲಿ ಒಟ್ಟು ಏಳು ಎಕರೆ ಜಾಗ ಲಭ್ಯ ಇದ್ದು, ಅದರಲ್ಲಿ ಈಗಾಗಲೇ 4 ಎಕರೆ ಸ್ಲಂಬೋರ್ಡ್ ಗೆ ಹಸ್ತಾಂತರಿಸಲಾಗಿದೆ. ಈಗ ಉಳಿದಿರುವ ಮೂರು ಎಕರೆ ಪ್ರದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ನಾಗರಿಕರಿಗೆ ವಸತಿ ಸಮುಚ್ಚಯ ಕಟ್ಟಿಕೊಡಲು ಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸುಮಾರು 500 ರಿಂದ 600 ರಷ್ಟು ಮನೆಗಳು ಕಣ್ಣೂರಿನಲ್ಲಿ ನಿರ್ಮಾಣ ಆಗುವ ಸಾಧ್ಯತೆಗಳಿವೆ


Spread the love

Exit mobile version