Home Mangalorean News Kannada News ಕದ್ರಿ ಅಪಾರ್ಟ್ ಮೆಂಟ್ ನಲ್ಲಿ ವೇಶ್ಯಾವಾಟಿಕೆ – ಇಬ್ಬರು ಮಹಿಳಾ ಪಿಂಪ್ ಬಂಧನ

ಕದ್ರಿ ಅಪಾರ್ಟ್ ಮೆಂಟ್ ನಲ್ಲಿ ವೇಶ್ಯಾವಾಟಿಕೆ – ಇಬ್ಬರು ಮಹಿಳಾ ಪಿಂಪ್ ಬಂಧನ

Spread the love

ಕದ್ರಿ ಅಪಾರ್ಟ್ ಮೆಂಟ್ ನಲ್ಲಿ ವೇಶ್ಯಾವಾಟಿಕೆ – ಇಬ್ಬರು ಮಹಿಳಾ ಪಿಂಪ್ ಬಂಧನ

ಮಂಗಳೂರು: ನಗರದ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಕೇಂದ್ರಕ್ಕೆ ಕದ್ರಿ ಪೊಲೀಸರು ಶನಿವಾರ ದಾಳಿ ನಡೆಸಿ ಇಬ್ಬರು ಮಹಿಳಾ ಪಿಂಪ್ ಗಳನ್ನು ಬಂಧಿಸಿದ್ದು ಒರ್ವ ನೊಂದ ಮಹಿಳೆಯನ್ನು ರಕ್ಷಿಸಿದ್ದಾರೆ.

ಬಂಧಿತ ಮಹಿಳಾ ಪಿಂಪ್ ಗಳನ್ನು ಮುಲ್ಕಿ ನಿವಾಸಿ ಕಾವ್ಯ (32) ಮತ್ತು ಲಕ್ಷ್ಮೀ (47) ಎಂದು ಗುರುತಿಸಲಾಗಿದೆ.

ನಗರದ ಕದ್ರಿ ಸ್ಮಶಾನ ಬಳಿಯ ಮರಿಯನ್ ಸೆಂಟಿನೆಲ್ ಅಪಾರ್ಟ್ ಮೆಂಟ್ ನ ಪ್ಲಾಟ್ 303 ರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಮಾಹಿತಿ ಪಡೆದ ಕದ್ರಿ ಠಾಣಾಧಿಕಾರಿಗಳಾದ ಶಾಂತರಾಮ ಮತ್ತು ಮಾರುತಿ ಅವರು ತಮ್ಮ ಸಿಬಂದಿಗಳ ಜೊತೆ ದಾಳಿ ನಡೆಸಿ ಇಬ್ಬರು ಮಹಿಳಾ ಪಿಂಪ್ ಗಳನ್ನು ಬಂಧಿಸಿ ಹಾಗೂ ನೊಂದ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.

ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version