Home Mangalorean News Kannada News ಕನಕದಾಸರ ಕೀರ್ತನೆಗಳು ಸದಾಕಾಲ ಪ್ರಸ್ತುತ: ಐವನ್ ಡಿ ಸೋಜ

ಕನಕದಾಸರ ಕೀರ್ತನೆಗಳು ಸದಾಕಾಲ ಪ್ರಸ್ತುತ: ಐವನ್ ಡಿ ಸೋಜ

Spread the love

ಕನಕದಾಸರ ಕೀರ್ತನೆಗಳು ಸದಾಕಾಲ ಪ್ರಸ್ತುತ: ಐವನ್ ಡಿ ಸೋಜ

ಮಂಗಳೂರು: ಕನಕದಾಸರು ನೀಡಿದ ಕೀರ್ತನೆಗಳ ಮೂಲಕ ನೀಡಿದ ಜೀವನ ಮೌಲ್ಯ ಸದಾಕಾಲ ಪ್ರಸ್ತುತ ಎಂದು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ತುಳುಭವನದಲ್ಲಿ ಬುಧವಾರ ನಡೆದ ಕನಕ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನಕದಾಸರ ಬಗ್ಗೆ ಸಂಶೋಧನೆಗಳಾಗಬೇಕು; ಅವರ ಭಕ್ತಿ ಮಾರ್ಗ ಸಮಾಜಕ್ಕೆ ಮಾರ್ಗದರ್ಶಿಯಾಗಬೇಕೆಂಬ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅವರ ಪೀಠವನ್ನು ಸ್ಥಾಪಿಸಲಾಗಿದೆ. ಮಂಗಳೂರಿನಲ್ಲಿ ಕನಕ ಭವನ ನಿರ್ಮಿಸಬೇಕು ಎಂದು ಕುರುಬರ ಸಂಘ ಬೇಡಿಕೆಯಿಟ್ಟಿದೆ. ಕನಕ ಭವನ ನಿರ್ಮಾಣ ಅಥವಾ ಸರಕಾರಿ ಕಟ್ಟಡಕ್ಕೆ ಕನಕದಾಸರ ಹೆಸರು ಇರಿಸಲಾಗುವುದು. ಜತೆಗೆ ಮಂಗಳೂರಿನ ರಸ್ತೆಯೊಂದಕ್ಕೆ ಕನಕದಾಸರ ಹೆಸರಿಡಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.

ಕನಕದಾಸರ ಭಕ್ತಿ, ಚಿಂತನೆಯನ್ನು ಇಂದಿನ ಪೀಳಿಗೆ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಹಿಂಸೆ, ಅವಮಾನ ಅನುಭವಿಸಿದರೂ ಭಕ್ತಿಯ ಸಾಕ್ಷಾತ್ಕಾರದ ಬಗ್ಗೆ ಕನಕದಾಸರು ತೋರಿಸಿಕೊಟ್ಟಿದ್ದಾರೆ ಎಂದರು.

ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಮಾತನಾಡಿ, ಎಲ್ಲ ಆಚರಣೆಗಳು ಧರ್ಮ ಮತ್ತು ದಾರ್ಶನಿಕರ ಸಂದೇಶಗಳು ಸಮ ಸಮಾಜ ಸೃಷ್ಟಿಗೆ ಪೂರಕವಾಗಿದೆ. ಪ್ರೀತಿ, ಮಾನವೀಯ ಮೌಲ್ಯ ಎಲ್ಲ ಸಾಧಕರ ಜೀವನದ ಸಂದೇಶವಾಗಿದೆ. ಭಕ್ತಿ ಸಂದೇಶದಲ್ಲಿ ಪ್ರೀತಿ ಸಹಬಾಳ್ವೆಗಳಿರುತ್ತದೆ.

ಪತ್ರಕರ್ತ ಜಿತೇಂದ್ರ ಕುಂದೇಶ್ವರ ಸಂಪನ್ಮೂಲ ಭಾಷಣ ಮಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಡಾ. ಸೆಲ್ವಮಣಿ ಆರ್., ಅಪರ ಜಿಲ್ಲಾಧಿಕಾರಿ ಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕರಾವಳಿ ಕುರುಬರ ಸಂಘ ಅಧ್ಯಕ್ಷ ಡಾ. ಕೆ.ಆರ್. ಪ್ರಕಾಶ್, ಜಿಲ್ಲಾ ಹಾಲುಮತ ಮಹಾಸಭಾ ಅಧ್ಯಕ್ಷ ರಂಗಪ್ಪ, ಶ್ರೀ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಜಿಲ್ಲಾಧ್ಯಕ್ಷ ಧನುಷ್, ಕರ್ನಾಟಕ ಪ್ರದೇಶ ಕುರುಬರ ಪದವೀಧರ ಸಂಘ ಕಾರ್ಯದರ್ಶಿ ಚಂದ್ರಶೇಖರ್ ಅತಿಥಿಯಾಗಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ವಿದ್ಯಾಂಗ ಇಲಾಖೆಯ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version