Home Mangalorean News Kannada News ಕನ್ನಡದ ಸಾಧಕರನ್ನು ಗುರುತಿಸಿ ಅಭಿನಂದಿಸುವ ಕಾರ್ಯ ಶ್ಲಾಘನೀಯ-ಟಿ.ಎಸ್. ನಾಗಾಭರಣ

ಕನ್ನಡದ ಸಾಧಕರನ್ನು ಗುರುತಿಸಿ ಅಭಿನಂದಿಸುವ ಕಾರ್ಯ ಶ್ಲಾಘನೀಯ-ಟಿ.ಎಸ್. ನಾಗಾಭರಣ

Spread the love

ಕನ್ನಡದ ಸಾಧಕರನ್ನು ಗುರುತಿಸಿ ಅಭಿನಂದಿಸುವ ಕಾರ್ಯ ಶ್ಲಾಘನೀಯ-ಟಿ.ಎಸ್. ನಾಗಾಭರಣ

ದೆಹಲಿ: ದೆಹಲಿ ಕರ್ನಾಟಕ ಸಂಘವು ದೇಶದ ರಾಜಧಾನಿಯಲ್ಲಿ ಕನ್ನಡ ನಾಡು-ನುಡಿ, ಸಾಹಿತ್ಯ, ಕಲೆ ಮತ್ತು ಸಂಸ್ಕøತಿಯನ್ನು ಪ್ರತಿಬಿಂಬಿಸುವಂತಹ ಅತ್ಯಂತ ಗುಣಮಟ್ಟದ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದು, ಅದರ ಜೊತೆಗೆ ಕನ್ನಡ ಭಾಷೆ, ಕಲೆ, ಸಂಸ್ಕøತಿಗಾಗಿ ದುಡಿದು ಅಮೋಘ ಕೊಡುಗೆ ನೀಡಿ, ಅಗಲಿ ಹೋದ ಮಹನೀಯರ ನೆನಪಿನಲ್ಲಿ ಇಂತಹ ಪ್ರಶಸ್ತಿಗಳನ್ನು ಪ್ರತಿಷ್ಠಾಪಿಸಿ, ಈಗ ಕನ್ನಡಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಮಾಡುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಅತ್ಯಂತ ಶ್ಲಾಘನೀಯವಾದ ಕಾರ್ಯವಾಗಿದೆ ಎಂದು ಕನ್ನಡದ ಖ್ಯಾತರಂಗ ಮತ್ತು ಚಲನಚಿತ್ರ ನಿರ್ದೇಶಕರಾದ ಟಿ.ಎಸ್. ನಾಗಾಭರಣ ಅಭಿಪ್ರಾಯಪಟ್ಟರು.

ಅವರು ದೆಹಲಿ ಕರ್ನಾಟಕ ಸಂಘದಲ್ಲಿ ಈ ಸಾಲಿನ ‘ದೆಹಲಿ ಕರ್ನಾಟಕ ಸಂಘ ಡಾ. ಶಿವರಾಮ ಕಾರಂತ’ ಪ್ರಶಸ್ತಿಯನ್ನು ಪ್ರಕಾಶನ ಕ್ಷೇತ್ರದಲ್ಲಿ ಅಪೂರ್ವ ಸೇವೆಗೈದ ಧಾರವಾಡದ ಮನೋಹರ ಗ್ರಂಥಮಾಲಾ ಇವರಿಗೆ ಮತ್ತು ‘ದೆಹಲಿ ಕರ್ನಾಟಕ ಸಂಘ ಕನ್ನಡ ಭಾರತಿರಂಗ ಪ್ರಶಸ್ತಿ’ಯನ್ನು ರಂಗಭೂಮಿಯಲ್ಲಿ ಅನನ್ಯ ಸೇವೆ ಸಲ್ಲಿಸಿದ ಹೆಸರಾಂತ ನಟಿ ಸರೋಜಿನಿ ಎಸ್. ಶೆಟ್ಟಿ ಇವರಿಗೆ ನೀಡಿ ಗೌರವಿಸುತ್ತಾ ಈ ಅಭಿಪ್ರಾಯಪಟ್ಟರು. ಈ ಎರಡೂ ಪ್ರಶಸ್ತಿಗಳು ರೂ. 50,000/- ನಗದು, ಪ್ರಶಸ್ತಿ ಪತ್ರ, ಶಾಲು ಹಾಗೂ ಸಂಘದ ಸ್ಮರಣಿಕೆಯನ್ನು ಒಳಗೊಂಡಿದೆ.
ನಾಗಾಭರಣ ಅವರು ಮಾತನಾಡುತಾ,್ತ ತಮ್ಮ ಹಾಗೂ ಮನೋಹರ ಗ್ರಂಥಮಾಲೆಯ ಸ್ಥಾಪಕರಾದ ಜಿ.ಬಿ. ಜೋಷಿಯವರೊಡನೆ ತಾನು ಸಾರಥಿಯಾಗಿ ಕಳೆದ ಅಂದಿನ ದಿನಗಳನ್ನು ನೆನಪಿಸಿಕೊಂಡರು. ರಮಾಕಾಂತ ಜೋಷಿ ಮತ್ತು ಮನೋಹರ ಗ್ರಂಥಮಾಲೆಯ ಜೊತೆಗಿನ ತಮ್ಮ ಅನ್ಯೋನ್ಯವಾದ ಸಂಬಂಧವನ್ನು ವಿವರಿಸಿದರು. ಈ ಗ್ರಂಥಮಾಲೆ ಕನ್ನಡದ ನೂರಾರು ಉದಯೋನ್ಮುಖ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವುದರ ಮೂಲಕ ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಸರೋಜಿಎಸ್. ಶೆಟ್ಟಿ ಅವರು 1975ರಲ್ಲಿ ‘ಚೋಮನದುಡಿ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾಗ ‘ನಾನು ಸಹನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ, ಅಂದಿನಿಂದ ಇಂದಿನವರೆಗೆ ಈ ಕಲಾವಿದೆ ಹಂತಹಂತವಾಗಿ ಬೆಳೆದು ಬಂದ ರೀತಿಯನ್ನು ನಾನು ನೋಡುತ್ತಾ ಬಂದಿದ್ದೇನೆ. ಇಷ್ಟು ಬೆಳೆದು ನಾಟಕಮತ್ತು ಚಲನಚಿತ್ರ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿರುವರಾದರೂ ಈಕೆಗೆ ಕಿಂಚಿತ್ತೂಗರ್ವವಿಲ್ಲ. ಸದಾ ನಗುಮುಖದ ಮುಗ್ಧ ಮತ್ತು ಶ್ರೇಷ್ಠ ಕಲಾವಿದೆ ಎಂದು ಶ್ಲಾಘಿಸಿದರು’.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸರೋಜಿನಿ ಎಸ್. ಶೆಟ್ಟಿ ಅವರು ‘ನಾನು ಭಾಷಣಗಾರ್ತಿ ಅಲ್ಲ, ನಾನೋರ್ವ ಸಾಮಾನ್ಯ ಕಲಾವಿದೆ. ಈ ವೇದಿಕೆ ಬಹಳ ಮಹತ್ವದ ವೇದಿಕೆ. ಇಂತಹ ವೇದಿಕೆಯಲ್ಲಿ ನನ್ನನ್ನು ಗೌರವಿಸುತ್ತಿರುವುದು ಬಹಳ ಹೆಮ್ಮೆ ಅನ್ನಿಸುತ್ತಿದೆ. ನಾನು 5ನೇ ತರಗತಿಯಲ್ಲಿರುವಾಗಲೇ ಮುಖಕ್ಕೆ ಬಣ್ಣ ಹಚ್ಚಿದ್ದೇನೆ. ಆ ದಿನ ನನ್ನ ತಾಯಿ ನನ್ನನ್ನು ಪ್ರೋತ್ಸಾಹಿಸಿ ಹುರಿದುಂಬಿಸಿದ ರೀತಿ ನನಗೆ ಇಂದಿಗೂ ನೆನಪಾಗುತ್ತಿದೆ. ದೇವರು ಅಂತ ಪ್ರತ್ಯಕ್ಷವಾಗಿ ಕಣ್ಣಿಗೆ ಕಾಣುವುದು ನನ್ನ ತಾಯಿ ಎಂದು ಹೇಳಿ ಆ ಕಷ್ಟದ ದಿನಗಳನ್ನು ನೆನಪಿಸಿಕೊಂಡರು. ನಾನು ಐತಿಹಾಸಿಕ, ಪೌರಾಣಿಕ ನಾಟಕಗಳಲ್ಲಿ ಪಾತ್ರವಹಿಸಿದ್ದೇನೆ. ಬಹಳಷ್ಟೂ ಪ್ರಶಸ್ತಿಗಳು ಬಂದಿವೆ. ಈ ಪ್ರಶಸ್ತಿಗೆ ನನ್ನನ್ನು ಆರಿಸಿದ ಶ್ರೀನಿವಾಸ ಜಿ. ಕಪ್ಪಣ್ಣ ಮತ್ತು ಟಿ.ಎಸ್. ನಾಗಾಭರಣ ಅವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ದೆಹಲಿ ಕರ್ನಾಟಕ ಸಂಘವು ಅನೇಕ ಸಾಹಿತ್ಯಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಾ ಇರುವುದನ್ನು ನಾನು ಪತ್ರಿಕೆಗಳಲ್ಲಿ ಓದಿ ತಿಳಿದಿದ್ದೇನೆ. ನನ್ನನ್ನು ಅಲ್ಲಿಂದ ಇಲ್ಲಿಗೆ ಕರೆಸಿಕೊಂಡು, ಗೌರವಿಸುತ್ತಿರುವುದು ನನ್ನ ಸೌಭಾಗ್ಯ ಮತ್ತು ಈ ಗೌರವವನ್ನು ನನ್ನ ತಾಯಿಗೆ ಅರ್ಪಿಸುತ್ತಿದ್ದೇನೆ’ ಎಂದು ಭಾವುಕರಾದರು.
ಡಾ. ಶಿವರಾಮ ಕಾರಂತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಮಾಕಾಂತ ಜೋಷಿಯವರು ಮನೋಹರಗ್ರಂಥ ಮಾಲೆ ನನಗಿಂತ ದೊಡ್ಡದು. ಅದಕ್ಕಿಂತ ಹೆಚ್ಚಾಗಿ ಶಿವರಾಮ ಕಾರಂತ ಪ್ರಶಸ್ತಿ ಬಂದಿರುವುದು. ಒಂದು ರೀತಿಯಿಂದ ಶಿವರಾಮ ಕಾರಂತರಿಗೂ ಮನೋಹರ ಗ್ರಂಥಮಾಲೆಗೂ ಇರುವ ಸಂಬಂಧವನ್ನು ವ್ಯಕ್ತಪಡಿಸುತ್ತದೆ ಎಂದರು. ಮನೋಹರ ಗ್ರಂಥಮಾಲೆ ಕಾರಂತರ ‘ಮರಳಿ ಮಣ್ಣಿಗೆ’, ‘ಬೆಟ್ಟದಜೀವ’ ಇನ್ನೂ ಅನೇಕ ಕೃತಿಗಳನ್ನು ಪ್ರಕಟಿಸಿದೆ. ಮನೋಹರ ಗ್ರಂಥಮಾಲೆ ಪ್ರತಿಷ್ಠಿತರ ಪುಸ್ತಕಗಳನ್ನು ಮಾತ್ರ ಪ್ರಕಟಿಸುವುದಲ್ಲದೆ ಸಾಮಾನ್ಯರ ಪುಸ್ತಕಗಳನ್ನು ಕೂಡ ಪ್ರಕಟಿಸುತ್ತದೆ ಎಂದು ನುಡಿದರು. ಮನೋಹರ ಗ್ರಂಥಮಾಲೆ ಪ್ರಕಟಿಸಿರುವ ಕನ್ನಡದ ಏಳು ಜನರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ನಮ್ಮ ತಂದೆಯವರು ಬಹಳ ಶ್ರಮವಹಿಸಿ ಕನ್ನಡ ಕೃತಿಗಳನ್ನು ಪ್ರಕಟಿಸುವ ಮಹಾನ್ ಕಾರ್ಯ ಮಾಡಿದ್ದಾರೆ, ಈಗ ನಾನು ಅವರು ಮಾಡಿದ ಸಾಧನೆಯನ್ನು ಗುರುತಿಸಿ ನೀಡುತ್ತಿರುವ ಪ್ರಶಸ್ತಿಗಳನ್ನು ಸ್ವೀಕರಿಸುವ ಕೆಲಸವನ್ನು ಮಾಡುತ್ತಿದ್ದೇನೆ ಎಂದರು.
ಮುಖ್ಯಅತಿಥಿಯಾಗಿ ಆಗಮಿಸಿದ್ದ ಕೇಂದ್ರ ಲಲಿತಾ ಕಲಾ ಅಕಾಡೆಮಿಯ ಅಧ್ಯಕ್ಷರಾದ ಚಿ.ಸು.ಕೃಷ್ಣ ಶೆಟ್ಟಿ ಅವರು ಮಾತನಾಡುತ್ತ ಮನೋಹರ ಗ್ರಂಥಮಾಲಾ ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದ್ದು, ನನ್ನ ಕಾಲೇಜು ದಿನಗಳಲ್ಲಿ ಈ ಗ್ರಂಥಮಾಲೆಯು ಪ್ರಕಟಿಸಿದ ಹಲವಾರು ಅಮೂಲ್ಯ ಕೃತಿಗಳನ್ನು ಓದಿಕೊಂಡು ಬೆಳೆದದ್ದನ್ನು ನೆನೆಸಿಕೊಂಡರು. ಮನೋಹರ ಗ್ರಂಥಮಾಲೆ ಪ್ರಕಾಶನ ಕ್ಷೇತ್ರದಲ್ಲಿ ಅತ್ಯಂತ ಮಹತ್ವದ ಕೆಲಸ ಮಾಡುತ್ತಿದ್ದು, ಜಿ.ಬಿ. ಜೋಷಿ, ರಮಾಕಾಂತಜೋಷಿ ಮತ್ತು ಸಮೀರ್‍ಜೋಷಿ ಅವರು ನೀಡುತ್ತಿರುವ ಕೊಡುಗೆ ಬಹಳ ದೊಡ್ಡದು ಎಂದರು. ಅದೇರೀತಿ ಕನ್ನಡರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಅಮೋಘವಾಗಿ ನಟಿಸುತ್ತಿರುವ ಓರ್ವ ಶ್ರೇಷ್ಠ ನಟಿಯನ್ನು ಗೌರವಿಸುತ್ತಿರುವುದು ದೆಹಲಿ ಕರ್ನಾಟಕ ಸಂಘ ಮಾಡುತ್ತಿರುವ ಒಳ್ಳೆಯ ಕೆಲಸಗಳಿಗೆ ನಿದರ್ಶನವಾಗಿದೆ ಎಂದರು. ಈಗಾಗಲೇ ಕರ್ನಾಟಕ ಸಂಘದ ಅಧ್ಯಕ್ಷರು ಲಲಿತಾ ಕಲಾ ಅಕಾಡೆಮಿ ಜೊತೆ ಸೇರಿ ಕಾರ್ಯಕ್ರಮಗಳ ಯೋಜನೆಯನ್ನು ಹಾಕಿಕೊಳ್ಳಬೇಕೆಂದು ನನ್ನೊಡನೆ ಚರ್ಚಿಸಿದ್ದಾರೆ, ಮುಂಬರುವ ದಿನಗಳಲ್ಲಿ ದೆಹಲಿ ಕರ್ನಾಟಕ ಸಂಘದ ಜೊತೆಗೂಡಿ ಕಲೆಗೆ ಸಂಬಂಧಿಸಿದಂತೆ ಒಂದು ಒಳ್ಳೆಯ ಕಾರ್ಯಕ್ರಮವನ್ನು ಮಾಡುವ ಆಶಯವನ್ನು ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ ಅವರು ಮಾತನಾಡುತ್ತ ದೆಹಲಿ ಕರ್ನಾಟಕ ಸಂಘವು ಸದಾ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹೊರರಾಜ್ಯದಲ್ಲಿ ಆಯೋಜಿಸಲು ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ದೆಹಲಿ ಕರ್ನಾಟಕ ಸಂಘಕ್ಕೆ ಏನು ಸಹಾಯ ಬೇಕು ಅದನ್ನು ನೀಡುತ್ತಾ ಬರುತ್ತಿದೆ ಎಂದರು.ನಾವು ಬೇg ರಾಜ್ಯದಲ್ಲಿಲ್ಲ, ಕರ್ನಾಟಕದಲ್ಲೇ ಇದ್ದೇವೆ ಅನ್ನಿಸುತ್ತದೆ ಎಂದರು. ಅವರು ಮನೋಹರ ಗ್ರಂಥಮಾಲೆಯು ಎಂಟು ದಶಕಗಳಿಗೂ ಹೆಚ್ಚು ಕಾಲದಿಂದ ಪ್ರಕಾಶನ ಕೆಲಸವನ್ನು ಬಹಳ ಮುತುವರ್ಜಿಯಿಂದ ಮಾಡುತ್ತಾ ಬಂದಿರುವುದನ್ನು ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಸರೋಜಿನಿ ಶೆಟ್ಟಿ ಅವರ ಸಾಧನೆಯನ್ನೂ ಶ್ಲಾಘಿಸಿದರು. ದೆಹಲಿ ಕರ್ನಾಟಕ ಸಂಘವು ಡಾ. ಸರೋಜಿನಿ ಮಹಿಷಿ ಪ್ರಶಸ್ತಿ, ಡಾ. ಶಿವರಾಮ ಕಾರಂತ ಪ್ರಶಸ್ತಿ ಮತ್ತು ಕನ್ನಡ ಭಾರತಿರಂಗ ಪ್ರಶಸ್ತಿಗಳನ್ನು ನೀಡುತ್ತಿರುವುದು ಪ್ರಶಂಸನಾರ್ಹವಾಗಿದೆ, ದೆಹಲಿ ಕರ್ನಾಟಕ ಸಂಘದ ಈ ಕಾರ್ಯವೈಖರಿಯು ರಾಜ್ಯ ಮತ್ತು ದೇಶದಾದ್ಯಂತ ಇರುವ ಇತರ ಕನ್ನಡ ಸಂಘ ಸಂಸ್ಥೆಗಳಿಗೆ ಮಾದರಿಯಾಗಬೇಕು ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಸಂತ ಶೆಟ್ಟಿ ಬೆಳ್ಳಾರೆ ಅವರು ‘ಯಾವುದೇ ಒಂದು ನಾಡಿನ ಭಾಷೆ, ಸಂಸ್ಕøತಿ, ಸಾಹಿತ್ಯ ಮತ್ತು ಕಲೆ ಸದಾ ಬೆಳೆಯುವಂತಾಗಬೇಕಾದರೆ ಅದರ ಏಳಿಗೆಗಾಗಿ ಶ್ರಮಪಟ್ಟು ದುಡಿದು ತಮ್ಮ ಜೀವನವನ್ನೇ ಮುಡಿಪಾಗಿಟ್ಟಂತಹ ಮಹನೀಯರನ್ನು ಸ್ಮರಿಸುವುದರ ಜೊತೆ ಜೊತೆಗೆ ಸಮಕಾಲೀನ ಜಗತ್ತಿನಲಿ ್ಲಮಾತೃಭಾಷೆ, ಕಲೆ, ಸಂಸ್ಕøತಿಯ ಅಭಿವೃದ್ಧಿಗಾಗಿ ದುಡಿಯುವ ಸಾಧಕರನ್ನು ಗುರುತಿಸಿ ಅಭಿನಂದಿಸುವಂತಹ ಕಾರ್ಯವನ್ನು ಮಾಡಿದಾಗಲೇ ನಮ್ಮಂತ ಹದೇಶದ ರಾಜಧಾನಿಯಲ್ಲಿ ಇರುವ ಸಂಘದ ಉದ್ದೇಶ ಸಾರ್ಥಕವಾದಂತಾಗುವುದು ಎಂಬುದೇ ನಮ್ಮ ದೃಢ ವಿಶ್ವಾಸವಾಗಿದೆ’ ಎಂದು ನುಡಿದರು. ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತಾ ಹಿರಿಯರಾದ ರಮಾಕಾಂತ ಜೋಷಿಯವರು ತಮ್ಮ ತಂದೆಯವರ ಸಾಧನೆಯನ್ನು ನೆನಪಿಸಿ ಮುಗುಳ್ನಕ್ಕರೆ, ಶ್ರೀಮತಿ ಸರೋಜಿನಿ ಶೆಟ್ಟಿ ಅವರು ತಾನು ನಟನೆಗೆ ಆರಂಭಿಸಿದ ಮೊದಲ ದಿನಗಳಲ್ಲಿ ತನ್ನತಾಯಿ ನೀಡಿದ ಪ್ರೋತ್ಸಾಹವನ್ನು ಸ್ಮರಿಸಿ ಗದ್ಗದೆಯಾದರು. ಈ ಅಮೂಲ್ಯ ಕ್ಷಣಗಳೇ ದೆಹಲಿ ಕರ್ನಾಟಕ ಸಂಘ ನೀಡುತ್ತಿರುವ ಈ ಪ್ರಶಸ್ತಿಗಳಿಗೆ ಅರ್ಥತಂದಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಶ್ವೇತಾಪ್ರಭು, ಖ್ಯಾತ ಹಿನ್ನೆಲೆ ಗಾಯಕಿ ಬೆಂಗಳೂರು ಅವರು ಸುಶ್ರಾವ್ಯವಾಗಿ ಸುಗಮ ಸಂಗೀತವನ್ನು ಹಾಡಿನೆರೆದವರನ್ನು ರಂಜಿಸಿದರು.ವಿದೂಷಿ ವೀಣಾ ಮರಡೂರ್ ಹಾಗೂ ವಿದ್ವಾನ್‍ತಾನ್‍ಸೇನ್ ಅವರು, ಕ್ರಮವಾಗಿ ಶ್ವೇತಾರವರಿಗೆ ಹಾರ್ಮೋನಿಯಂ ಮತ್ತು ತಬಲಾ ಸಾಥ್ ನೀಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಎಂ.ನಾಗರಾಜ ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ಶ್ರೀ ಸಖಾರಾಮ ಉಪ್ಪೂರು ಕಾರ್ಯಕ್ರಮವನ್ನು ನಿರೂಪಸಿದರು. ಜಂಟೀ ಕಾರ್ಯದರ್ಶಿ ಶ್ರೀಮತಿ ಜಮುನಾ ಸಿ.ಮಠದ ಅವರು ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಶ್ರೀ ಶಿವಾನಂದ ಇಂಗಳೇಶ್ವರ ಅವರ ನಿರ್ದೇಶನದ‘ ಗಾಂಧಿಗೆ ಸಾವಿಲ್ಲ’ ನಾಟಕವನ್ನು ‘ದಿನಕರ’, ದೆಹಲಿಯ ಸ್ಥಳೀಯ ಹವ್ಯಾಸಿ ಕನ್ನಡ ಕಲಾವಿದರನ್ನೊಳಗೊಂಡ ತಂಡ, ಪ್ರಸ್ತುತಪಡಿಸಿತು.


Spread the love

Exit mobile version