Home Mangalorean News Kannada News ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರ 60 ಕೋಟಿ ಸಾಲ ಮನ್ನಾ ಮಾಡಿದ ಬಿಎಸ್​ವೈ

ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರ 60 ಕೋಟಿ ಸಾಲ ಮನ್ನಾ ಮಾಡಿದ ಬಿಎಸ್​ವೈ

Spread the love

ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರ 60 ಕೋಟಿ ಸಾಲ ಮನ್ನಾ ಮಾಡಿದ ಬಿಎಸ್​ವೈ

ಬೆಂಗಳೂರು: ಅಧಿಕಾರಕ್ಕೆ ಬಂದ ಗಂಟೆಯಲ್ಲಿ ನೇಕಾರರ ಸುಮಾರು 100 ಕೋಟಿ ಸಾಲ ಮಾಡಿದ್ದ ನೂತನ ಸಿಎಂ ಬಿ.ಎಸ್.ಯಡಿಯೂರಪ್ಪ ಇದೀಗ ಮೀನುಗಾರರ ಸಾಲವನ್ನು ಮನ್ನಾ ಮಾಡುವ ಮೂಲಕ ಅವರಿಗೆ ಸಿಹಿ ಸುದ್ದಿ ನೀಡಿದ್ದಾರೆ.

2017-18, 2018-19 ಸಾಲಿನಲ್ಲಿ ಕರಾವಳಿಯ 3 ಜಿಲ್ಲೆಗಳಲ್ಲಿ ಒಟ್ಟು 23507 ಮೀನುಗಾರರು ವಾಣಿಜ್ಯ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳಿಂದ 60 ಕೋಟಿ ರೂ. ಸಾಲ ಪಡೆದಿದ್ದಾರೆ. ಇಂದು ನಡೆದ ಸಂಪುಟ ಸಭೆಯಲ್ಲಿ ಮೀನುಗಾರರ ಸಾಲ ಮನ್ನಾ ಮಾಡುವ ತೀರ್ಮಾನವನ್ನು ನೂತನ ಸಿಎಂ ಬಿ.ಎಸ್.ಯಡಿಯೂರಪ್ಪ ತೆಗೆದುಕೊಂಡಿದ್ದಾರೆ.

ಶಾಸಕರಾದ ರಘುಪತಿ ಭಟ್ ಇವರ ನೇತೃತ್ವದಲ್ಲಿ ಭಾನುವಾರ ನಡೆದ ಶಾಸಕಾಂಗ ಸಭೆಯಲ್ಲಿ ಮೂರು ಜಿಲ್ಲೆಗಳ ಕರಾವಳಿಯ ಶಾಸಕರು ಮುಖ್ಯಮಂತ್ರಿಗಳಲ್ಲಿ ಆಗ್ರಹ ಮಾಡಿದ ಮೇಲೆ ಸೋಮವಾರ ನಡೆದ ಕ್ಯಾಬಿನೆಟ್ ನಲ್ಲಿ ಈ ನಿರ್ಣಯ ಮಾಡಿರುತ್ತಾರೆ. ಹಾಗಾಗಿ ನೇಕಾರರ ಜೊತೆಗೆ ಮೀನುಗಾರರ ಸಮುದಾಯಕ್ಕೂ ಈ ಸವಲತ್ತನ್ನು ವಿಸ್ತರಣೆ ಮಾಡಿದಂತಹ ಮುಖ್ಯಮಂತ್ರಿಯವರಿಗೆ ಉಡುಪಿ ಶಾಸಕ ರಘುಪತಿ ಭಟ್ ರವರು ಅಭಿನಂದನೆ ಸಲ್ಲಿಸಿರುತ್ತಾರೆ.


Spread the love

Exit mobile version