Home Mangalorean News Kannada News ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಮೊಗವೀರ ಸಮಾಜಕ್ಕೆ ನೀಡಿ : ವಿಶ್ವಾಸ್ ಅಮೀನ್

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಮೊಗವೀರ ಸಮಾಜಕ್ಕೆ ನೀಡಿ : ವಿಶ್ವಾಸ್ ಅಮೀನ್

Spread the love

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಮೊಗವೀರ ಸಮಾಜಕ್ಕೆ ನೀಡಿ : ವಿಶ್ವಾಸ್ ಅಮೀನ್

ಪಡುಬಿದ್ರಿ: ಕರಾವಳಿ ಭಾಗದ ಉದ್ದಗಲಕ್ಕೂ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಮೊಗವೀರ ಸಮಾಜವು ಹಿಂದುಳಿದ ಸಮಾಜವಾಗಿದ್ದು, ಮೀನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತಿದ್ದು ಅಬ್ಬರದ ಕಡಲಿಗೆ ಎದೆ ಒಡ್ಡಿ ಜೀವ ಭಯ ಲೆಕ್ಕಿಸದೇ ಮೀನುಗಾರಿಕೆಯನ್ನು ಮಾಡಿಕೂಂಡು ಬರುತಿದ್ದು ನ್ಯಾಯಯುತ ಬದುಕನ್ನು ನಡೆಸುತಿರುವ ಮೊಗವೀರ ಸಮಾಜವು ಸರ್ಕಾರದ ಸ್ಥಾನ ಮಾನವನನ್ನು ಪಡೆಯುವಲ್ಲಿ ವಂಚಿತರಾಗಿದ್ದು .ಅದ್ದರಿಂದ ಈ ಬಾರಿ ಕಾಂಗ್ರೆಸ್ ಸರ್ಕಾರ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಮೊಗವೀರ ಸಮಾಜದ ಸೂಕ್ತ ವ್ಯಕ್ತಿಗೆ ನೀಡುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬಾಲ್ಕರ್ ರವರಿಗೆ ಮನವಿ ಸಲ್ಲಿಸಿರುತ್ತಾರೆ.

ಹಿಂದೆ ಮೊಗವೀರ ಸಮಾಜವು ಕಾಂಗ್ರೆಸ್ ಪಕ್ಷದ ಪರವಾಗಿ ನಿಂತಿದ್ದು, ಈ ಸಮಾಜದ ಎಸ್ ಕೆ ಅಮೀನ್,ಮನೋರಮಾ ಮಧ್ವರಾಜ್, ಯು.ಅರ್ ಸಭಾಪತಿ , ಪ್ರಮೋದ್ ಮಧ್ವರಾಜ್ ಮತ್ತು ಅನಂದ್ ಅಸ್ಪ್ಮೊಟಿಕರ್ ಹೀಗೆ ಹಲವಾರು ಸಮಾಜದ ನಾಯಕರನ್ನು ಗೆಲ್ಲಿಸುವಲ್ಲಿ ಮಹತ್ವರ ಪಾತ್ರ ವಹಿಸಿರುತ್ತಾರೆ

ಕರಾವಳಿ ಅಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಸ್ಥಾನ ಮೊಗವೀರ ಸಮಾಜದ ಸೂಕ್ತ ವ್ಯಕ್ತಿಗೆ ನೀಡಿದಲ್ಲಿ ಇತ್ತೀಚೆಗೆ ಕಾಂಗ್ರೇಸ್ ಪಕ್ಷದಿಂದ ಸ್ವಲ್ಪ ದೂರ ಸರಿದಿರುವ ಮೊಗವೀರ ಸಮಾಜವನ್ನು ಕಾಂಗ್ರೇಸ್ ಪಕ್ಷದೆಡೆಗೆ ಮರು ಸೆಳೆಯುವಲ್ಲಿ ಮಹತ್ತರವಾದ ಪಾತ್ರ ವಹಿಸಲಿದ್ದು . ಬೇರೆ ಯಾವುದೇ ನಿಗಮವು ಮೊಗವೀರರಿಗೆ ಸಂಬಂಧ ಪಟ್ಟದಲ್ಲ ಹಾಗೂ ಕೆ ಎಫ್ ಡಿ ಸಿ ಅಧ್ಯಕ್ಷ ಸ್ಥಾನವನ್ನು ಈಗಾಗಲೇ ಬೇರೆ ಸಮಾಜದ ವ್ಯಕ್ತಿಗೆ ನೀಡಿದ್ದು ಮೊಗವೀರ ಸಮಾಜಕ್ಕೆ ಪ್ರಾತಿನಿಧ್ಯ ನೀಡುವುದು ಅತ್ಯಾವಶ್ಯಕ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿ ಜಿಲ್ಲಾಧ್ಯಕ್ಷ ವಿಶ್ವಾಸ್ ವಿ.ಅಮೀನ್ ಒತ್ತಾಯಿಸಿರುತ್ತಾರೆ..


Spread the love

Exit mobile version