Home Mangalorean News Kannada News ಕರಾವಳಿ ಉತ್ಸವ: ವಿವಿಧ ಕ್ರೀಡಾ ಸ್ಪರ್ಧೆಗಳು

ಕರಾವಳಿ ಉತ್ಸವ: ವಿವಿಧ ಕ್ರೀಡಾ ಸ್ಪರ್ಧೆಗಳು

Spread the love

ಕರಾವಳಿ ಉತ್ಸವ: ವಿವಿಧ ಕ್ರೀಡಾ ಸ್ಪರ್ಧೆಗಳು
ಮ0ಗಳೂರು : ಕರಾವಳಿ ಉತ್ಸವ ಅಂಗವಾಗಿ ದ. ಕ. ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು, ಹಾಗೂ ಮಹಾನಗರಪಾಲಿಕೆ, ಮಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ದ. ಕ. ಜಿಲ್ಲಾ ಮಟ್ಟದ ವಾಲಿಬಾಲ್, ಹಾಕಿ ಮತ್ತು ಈಜು ಸ್ಪರ್ಧೆಗಳನ್ನು ಸಂಘಟಿಸಲಾಗುವುದು. ಸ್ಪರ್ಧೆ ನಡೆಯುವ ಸ್ಥಳ ಮತ್ತು ದಿನಾಂಕಗಳು ಈ ಕೆಳಗಿನಂತಿದೆ.
ಪ್ರೌಢಶಾಲಾ ಮತ್ತು ಪಿಯುಸಿ ಕಾಲೇಜು ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾಟ- ಡಿ.24 ಮಂಗಳ ಕ್ರೀಡಾಂಗಣ, ಪ್ರವೇಶಪತ್ರ ಸಲ್ಲಿಸಲು ಡಿ.22 ಅಂತಿಮ ದಿನಾಂಕ.
ಜಿಲ್ಲಾ ಮಟ್ಟದ ಪುರುಷರ ಹಾಕಿ ಪಂದ್ಯಾಟ ಡಿ.31, ಕರಾವಳಿ ಉತ್ಸವ ಮೈದಾನದಲ್ಲಿ. ಪ್ರವೇಶಪತ್ರ ಸಲ್ಲಿಸಲು ಡಿ.29 ಅಂತಿಮ ದಿನಾಂಕ.
ಜಿಲ್ಲಾ ಮಟ್ಟದ ಈಜು ಸ್ಪರ್ಧೆ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರಿಗೆ, ಜನವರಿ 1ರಂದು ಮಹಾನಗರಪಾಲಿಕೆ ಈಜುಕೊಳ ಲೇಡಿಹಿಲ್, ಪ್ರವೇಶಪತ್ರ ಸಲ್ಲಿಸಲು ಡಿ.28 ಅಂತಿಮ ದಿನಾಂಕ.
ಭಾಗವಹಿಸಲು ಇಚ್ಚಿಸುವ ಕ್ರೀಡಾಪಟುಗಳು ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳಾ ಕ್ರೀಡಾಂಗಣ, ಮಂಗಳೂರು ಇವರನ್ನು ಕಚೇರಿ ವೇಳೆ ಹಾಗೂ ದೂರವಾಣಿ ಸಂ: 0824-2451264ವನ್ನು ಸಂಪರ್ಕಿsಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version