Home Mangalorean News Kannada News ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ – ಸಾಧಕರ ಸನ್ಮಾನ 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ – ಸಾಧಕರ ಸನ್ಮಾನ 

Spread the love

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ – ಸಾಧಕರ ಸನ್ಮಾನ 

ಮಂಗಳೂರು : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಪ್ರಾಂಕಿ ಪ್ರಾನ್ಸಿಸ್ ಕುಟಿನ್ಹ ಇವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಹಕಾರ್ಯದರ್ಶಿ ಮೋಹನ್ ವಾರ್ಷಿಕ ವರದಿ ಓದಿದರು. ಸಿ.ಹೆಚ್ ಪುಂಡರೀಕ ಕೋಶಾಧಿಕಾರಿ 2018-19ನೇ ಸಾಲಿನ ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. 2019-20ನೇ ಸಾಲಿನ ಆಡಳಿತ ಮಂಡಳಿಗೆ ಇಲಾಖಾವಾರು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಸಂಘದ ಕ್ರೀಡಾ, ಸಾಹಿತ್ಯ, ದಾನಿ ಈ ಮೂವರನ್ನು ಗುರುತಿಸಿ ಈ 3 ಮಂದಿ ಸದಸ್ಯರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಶಾಖೆಗೆ 2019-2024ನೇ ಸಾಲಿಗೆ ಆಯ್ಕೆಯಾದ ಎಲ್ಲಾ ಸದಸ್ಯರನ್ನು ಹಾಗೂ ದಿ ಸೌತ್ ಕೆನರಾ ಗವರ್ನಮೆಂಟ್ ಆಫೀಸರ್ಸ್ ಬ್ಯಾಂಕ್ (ಲಿ) ಕೊಡಿಯಾಲ್‍ಬೈಲ್ ಮಂಗಳೂರು ಇದರ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದ ಸಂಘದ ಅಧ್ಯಕ್ಷ ಪ್ರಾಂಕಿ ಪ್ರಾನ್ಸಿಸ್ ಕುಟಿನ್ಹ ಇವರನ್ನು ಸನ್ಮಾನಿಸಲಾಯಿತು.

ಸಿರಿಲ್ ರಾಬರ್ಟ್ ಡಿ’ಸೋಜ ದ್ವಿತೀಯ ದರ್ಜೆ ಸಹಾಯಕರು, (ತೋಟಗಾರಿಕೆ ಇಲಾಖೆ), ಕಾರ್ಯಕ್ರಮ ನಿರೂಪಿಸಿದರು. ಮೋಹನ್ ಶಿರ್ಲಾಲು ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಜಂಟಿಯಾಗಿ ಇವರು ನಿರ್ವಹಿಸಿದರು.


Spread the love

Exit mobile version