ಕಾಂಗ್ರೆಸ್ ನಲ್ಲಿರುವ ಕೆಲವರಿಗೆ ಆರ್.ಎಸ್.ಎಸ್ ನ ಭಯ ಇದೆ – ರಘುಪತಿ ಭಟ್
ಉಡುಪಿ: ಸಾರ್ವಜನಿಕವಾಗಿ ಆರ್ ಎಸ್ ಎಸ್ ಚಟುವಟಿಕೆ ನಿಷೇಧ ಪ್ರಿಯಾಂಕ ಖರ್ಗೆ ಪತ್ರ ಬರೆದಿರುವುದು ಖಂಡನೀಯ ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಆರ್ ಎಸ್ ಎಸ್ ಸಂಘಟನೆಗೆ 100 ವರ್ಷ ತುಂಬಿದ್ದು, ಸಂಘದ ಕಾರ್ಯಚಟುವಟಿಕೆಯನ್ನು ದೇಶವೇ ಮೆಚ್ಚಿದೆ. ನೆಹರು ಕಾಲದಲ್ಲಿ ಪರೇಡ್ ನಲ್ಲಿ ಆರ್ ಎಸ್ ಎಸ್ ಪಥಸಂಚಲ ಮಾಡಿದೆ. ಭಾರತವನ್ನು ಪ್ರೀತಿಸುವವರೆಲ್ಲರೂ ಹಿಂದುಗಳು ಅನ್ನುವುದು ಆರ್ ಎಸ್ ಎಸ್ ತತ್ವವಾಗಿದೆ. ಆರ್ ಎಸ್ ಎಸ್ ಗೆ ಹಿಂದೂ ಕ್ರೈಸ್ತ ಮುಸಲ್ಮಾನ ಎಂಬ ಭೇದ ಭಾವ ಇಲ್ಲ. ವಾಜಪೇಯಿ, ಮೋದಿ ಆರ್ ಎಸ್ ಎಸ್ ಸಂಘಟನೆಯಿಂದ ಬಂದವರಾಗಿದ್ದು ಅವರ ಕೆಲಸವನ್ನು ದೇಶವೇ ಮೆಚ್ಚಿದೆ ಎಂದರು.
ಪ್ರಿಯಾಂಕ ಖರ್ಗೆ ಅವರ ಈ ನಡೆಗೆ ನನ್ನ ವಿರೋಧವಿದೆ. ಆರ್ ಎಸ್ ಎಸ್ ಬೆಳೆದಷ್ಟು ರಾಷ್ಟ್ರಕ್ಕೆ ಒಳಿತು ಆದರೆ ಕಾಂಗ್ರೆಸ್ ನಲ್ಲಿರುವ ಕೆಲ ವ್ಯಕ್ತಿಗಳಿಗೆ ಆರ್ಎಸ್ಎಸ್ ನ ಭಯ ಇದೆ. ಆರ್ ಎಸ್ ಎಸ್ ಎಂದೂ ಕೂಡ ರಾಷ್ಟ್ರ ವಿರೋಧಿ ಧರ್ಮವಿರೋಧಿ ಬೋಧನೆ ಮಾಡಿಲ್ಲ. ಆರ್ ಎಸ್ ಎಸ್ ಈ ರಾಷ್ಟ್ರದ ಹಿತ ಎಂದರು.
ಡಿಕೆಶಿ ಕರಿ ಟೋಪಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಅದು ಕರಿ ಟೋಪಿಯಲ್ಲ ಆರ್ ಎಸ್ ಎಸ್ ಸಂಘದ ಗಣವೇಷ ಕರಿ ಟೋಪಿ ಎಂದು ಕರೆಯುವ ಸ್ವಭಾವ ಒಳ್ಳೆಯದಲ್ಲ ಎಂದರು.