ಕಾಂಗ್ರೆಸ್ ಸರಕಾರದ “ಗೋಕಳ್ಳರಿಗೆ ಸಹಕರಿಸುವ’ ನೀತಿಗೆ ವಿಶ್ವ ಹಿಂದೂ ಪರಿಷದ್ ಆಕ್ರೋಶ
ಉಡುಪಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸರಕಾರ ಬಂದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಹಿಂದೂ ಸಮಾಜಕ್ಕೆ ತೀವ್ರ ರೀತಿಯ ಕಿರುಕುಳ ಕೊಡುತ್ತ ಬಂದಿದ್ದು ಅದರ ಮುಂದುವರಿದ ಭಾಗವಾಗಿ ಇದೇ ತಿಂಗಳ 8ನೇ ತಾರೀಕಿಗೆ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಹಿಂದೂ ಸಮಾಜಕ್ಕೆ ಅತ್ಯಂತ ಪೂಜನೀಯವಾದ ಗೋವಂಶವನ್ನು ಹಿಂಸಾತ್ಮಕವಾಗಿ ಕಳ್ಳಸಾಗಾಟ ಮಾಡುವಾಗ ಪೊಲೀಸರು ವಶಪಡಿಸಿದ ಸಾಗಾಟ ವಾಹನಗಳನ್ನು ಸುಲಭದಲ್ಲಿ ಹಿಂತಿರುಗಿಸುವಂತೆ ಮಾಡಲು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ. 2020ನ್ನು ಸಡಿಲುಗೊಳಿಸಿ ತಿದ್ದುಪಡಿ ತರಲು ಕ್ಯಾಬಿನೆಟ್ ಸಭೆಯಲ್ಲಿ ಪಾಸ್ ಮಾಡಿದೆ ಎಂದು ಮಾಧ್ಯಮಗಳ ವರದಿ ಮೂಲಕ ತಿಳಿದುಬಂದಿದ್ದು ಗೋವುಗಳಿಗೆ ಹಿಂಸೆ ಹೆಚ್ಚಾಗುವ ಸಾಧ್ಯತೆ ಇರುವ ಈ ತಿದ್ದುಪಡಿಯನ್ನು ವಿಶ್ವ ಹಿಂದು ಪರಿಷದ್ ಹಿಂದು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತ ಪಡಿಸುತಿದ್ದು ತಿದ್ದುಪಡಿಯನ್ನು ತಕ್ಷಣ ಹಿಂದಕ್ಕೆ ಪಡೆಯ ಬೇಕೆಂದು ಕರ್ನಾಟಕ ದಕ್ಷಿಣ ಪ್ರಾಂತ್ಯದ ಗೋ ರಕ್ಷಾ ಪ್ರಮುಖರಾದ ಸುನೀಲ್ ಕೆ.ಆರ್ ಆಗ್ರಹಿಸಿದರು.

ಇದರಲ್ಲಿ ಗೋ ಕಳ್ಳ ಸಾಗಾಟಗಾರರಿಗೆ ಬ್ಯಾಂಕ್ ಗ್ಯಾರಂಟಿಯನ್ನು ಕೊಡಲು ಕಷ್ಟವಾಗುತ್ತದೆಎಂಬ ಅಸಂಭದ್ದ ನೆಪ ಒಡ್ಡಿ. ಅಂತಹಆರೋಪಿಗಳ ಮೇಲಿನ ಕನಿಕರದಿಂದ ಕಾಂಗ್ರೆಸ್ ಸರಕಾರವು ಈ ಸೆಕ್ಷನ್ನಲ್ಲಿ ಇರುವ ಬ್ಯಾಂಕ್ ಗ್ಯಾರಂಟಿಯ ಶರತ್ತನ್ನು ಹಿಂಪಡೆದು ಕೇವಲ indemnitybond ಕೊಟ್ಟರೆ ಸಾಕೆಂದು ತಿದ್ದುಪಡಿ ತರುತ್ತಿದೆ. ಸರಕಾರಕ್ಕೆ ಗೋ ಕಳ್ಳ ಸಾಗಾಟಗಾರರ ಮೇಲೆ ಇಷ್ಟೊಂದು ಪ್ರೀತಿ ಯಾಕೆ ? ಇದು ಅಕ್ರಮ ಸಾಗಾಟಗಾರರಿಗೆ ಸರಕಾರವು “ಗೋಕಳ್ಳಸಾಗಣೇದಾರರೊಂದಿಗಿದೆ ನಾವಿದ್ದೇವೆ” ಎಂದು ಪರೋಕ್ಷವಾಗಿ ಸಂದೇಶ ಕೊಡುವ ಉದ್ದೇಶದಂತೆ ಕಾಣುತಿದ್ದು ಇನ್ನಷ್ಟು ಹಿಂಸಾತ್ಮಕ ರೀತಿಯಲ್ಲಿ ಗೋಸಾಗಾಟ ಹೆಚ್ಚಾಗಲಿದ್ದು ತಮಗೆ ಪೂಜನೀಯವಾಗಿರುವ ಗೋವುಗಳಿಗೆ ಹಿಂಸೆ ಆಗುವುದನ್ನು ನೋಡಿದವರ ಧಾರ್ಮಿಕ ಭಾವನೆಗೆ ಧಕ್ಕೆ ಬಂದು ಆಕ್ರೋಶ ಹೆಚ್ಚಿಸಲಿದೆ. ಈ ತಿದ್ದುಪಡಿಯ ಮೂಲಕ ಜನರನ್ನು ಉದ್ವಿಘ್ನಗೊಳಿಸುವಂತೆ ಸರಕಾರವೇ ಪ್ರಚೋದನೆ ನೀಡಿದಂತಾಗಿದೆ. ಸರಕಾರದ ಈ ನಡೆ ಧಾರ್ಮಿಕ ಭಾವನೆಗೆ ಪ್ರಚೋದನೆ ನೀಡುತ್ತಿದೆ. ಈ ತಿದ್ದುಪಡಿಯನ್ನು ತಕ್ಷಣ ಹಿಂದೆ ಪಡೆಯಲು ಒತ್ತಾಯಿಸಿ ವಿವಿಧ ಹಿಂದೂ ಸಂಘಟನೆಗಳ ನೇತ್ರತ್ವದಲ್ಲಿ ಹಿಂದೂ ಸಮಾಜವಿಡೀ ದಿನಾಂಕ 08-12-2025ನೇ ಸೋಮವಾರ ರಾಜ್ಯಾದ್ಯಾಂತ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.