ಕಾಂತಾರಾ ಚಾಪ್ಟರ್ 1 ಚಿತ್ರದ ಯಶಸ್ಸಿನ ಬೆನ್ನಲ್ಲೇ ಹರಕೆ ತೀರಿಸಲು ಬಂದ ರಿಷಬ್ ಶೆಟ್ಟಿ
ಮಂಗಳೂರು: ಕಾಂತಾರ ಚಾಪ್ಟರ್ 1 ಸಿನೆಮಾದ ಯಶಸ್ಸಿನ ಬೆನ್ನಲ್ಲೇ ಕಾಂತಾರ ಚಿತ್ರತಂಡ ಇಂದು ದೈವದ ಹರಕೆ ತೀರಿಸಿದೆ.

ಮಂಗಳೂರಿನ ಬಾರೆಬೈಲ್ ವರಾಹ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಕಾಂತಾರ ಚಿತ್ರತಂಡದ ಹರಕೆಯ ನೇಮ ನಡೆದಿದೆ. ನಟ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ವತಿಯಿಂದ ಹರಕೆ ನೇಮೋತ್ಸವ ಸೇವೆ ನೀಡಲಾಗಿದೆ. ಪತ್ನಿ ಮಕ್ಕಳ ಜೊತೆ ನೇಮೋತ್ಸವಕ್ಕೆ ರಿಷಬ್ ಶೆಟ್ಟಿ ಆಗಮಿಸಿದ್ದರು. ಗಗ್ಗರ ಸೇವೆ ಜೊತೆಗೆ ಅನ್ನಸಂತರ್ಪಣೆ ಕಾರ್ಯದಲ್ಲಿ ಕಾಂತಾರ ಚಿತ್ರತಂಡ ಭಾಗಿಯಾಗಿತ್ತು. ಈ ವೇಳೆ ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ಆನಂದ ರಾಮ್ ಸೇರಿದಂತೆ ಕಾಂತಾರ ಚಿತ್ರದ ಹಲವು ನಟರು ಇದ್ದರು.
ಕಳೆದ ಎಪ್ರಿಲ್ ನಲ್ಲಿ ಇದೇ ದೈವಸ್ಥಾನದ ನೇಮೋತ್ಸವದಲ್ಲಿ ಭಾಗಿಯಾಗಿದ್ದ ರಿಷಬ್ ಶೆಟ್ಟಿ ಭಾಗಿಯಾಗಿದ್ದರು. ಆ ವೇಳೆ ರಿಷಬ್ ಶೆಟ್ಟಿಗೆ ದೈವ ಎಚ್ಚರಿಕೆಯನ್ನು ಕೊಟ್ಟಿತ್ತು.