Home Mangalorean News Kannada News ಕಾನೂನು ಉಲ್ಲಂಘಿಸಲು ಯತ್ನಿಸಿದ್ದವರನ್ನು ತಡೆದ 3 ಪೊಲೀಸರಿಗೆ ನಗರ ಆಯುಕ್ತರಿಂದ ಬಹುಮಾನ

ಕಾನೂನು ಉಲ್ಲಂಘಿಸಲು ಯತ್ನಿಸಿದ್ದವರನ್ನು ತಡೆದ 3 ಪೊಲೀಸರಿಗೆ ನಗರ ಆಯುಕ್ತರಿಂದ ಬಹುಮಾನ

Spread the love

ಕಾನೂನು ಉಲ್ಲಂಘಿಸಲು ಯತ್ನಿಸಿದ್ದವರನ್ನು ತಡೆದ 3 ಪೊಲೀಸರಿಗೆ ನಗರ ಆಯುಕ್ತರಿಂದ ಬಹುಮಾನ

ಮಂಗಳೂರು: ಚುನಾವಣಾ ಮತ ಎಣಿಕೆ ಪ್ರಯುಕ್ತ ನಿಷೇಧಾಜ್ಞೆ ಇದ್ದ ಸಮಯದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯ ಎದುರು ರಸ್ತೆಯ ಮಧ್ಯದಲ್ಲಿ ಬೆಂಕಿ ಹಚ್ಚಿ ಕಾನೂನು ಉಲ್ಲಂಘನೆ ಮಾಡಲು ಯತ್ನಿಸಿದ್ದ ಕೆಲವು ವ್ಯಕ್ತಿಗಳನ್ನು ತಡೆದು ಕಾನೂನು ಭಂಗವಾಗದಂತೆ ಎಚ್ಚರಿಕೆ ವಹಿಸಿದ ಮೂವರು ಪೊಲೀಸ್ ಸಿಬಂದಿಗಳಿಗೆ ನಗರ ಪೊಲೀಸ್ ಆಯುಕ್ತರು ಶುಕ್ರವಾರ ಬಹುಮಾನ ನೀಡಿದ್ದಾರೆ.

ಲೋಕಸಭಾ ಚುನಾವಣಾ ಫಲಿತಾಂಶದ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವವನ್ನು ಆಚರಿಸುತ್ತಿದ್ದ ವೇಳೆ ಕೆಲವು ಕಾರ್ಯಕರ್ತರು ಮಲ್ಲಿಕಟ್ಟೆ ರಸ್ತೆಯ ಮಧ್ಯದಲ್ಲಿ ಪಟಾಕಿಗೆ ಬೆಂಕಿ ಹಚ್ಚಲು ಯತ್ನಿಸಿದ್ದು, ಅದೇ ವೇಳೆ ಅಲ್ಲಿ ಕರ್ತವ್ಯ ನಿರತ ಪೊಲೀಸರು ತಡೆಯಲು ಯತ್ನಿಸಿದ್ದ ವೇಳೆ ಕಾರ್ಯಕರ್ತರು ಅತೀರೇಕವಾಗಿ ಪೊಲೀಸರೊಂದಿಗೆ ವರ್ತಿಸಿ ಟ್ರಾಫಿಕ್ ಜಾಮ್ ಗೆ ಬಿಜೆಪಿ ಕಾರ್ಯಕರ್ತರು ಕಾರಣರಾಗಿದ್ದರು.

ರಸ್ತೆಯ ಮಧ್ಯದಲ್ಲಿ ಕೆಲವೊಂದು ಯುವಕರು ಪಟಾಕಿ ಒಡೆಯಲು ಯತ್ನಿಸಿದ್ದ ವೇಳೆ ಅಲ್ಲಿದ್ದ ಮಹಿಳಾ ಪೊಲೀಸ್ ಸಿಬಂದಿ ಮಧ್ಯಪ್ರವೇಶಿಸಿ ತಡೆದಿದ್ದು ಅಲ್ಲದೆ ಇನ್ನೊಬ್ಬ ಮಹಿಳಾ ಪೊಲೀಸ್ ಹಾಗೂ ಪುರುಷ ಪೇದೆ ಘಟನೆಯನ್ನು ತಮ್ಮ ಮೊಬೈಲಿನಲ್ಲಿ ಚಿತ್ರೀಕರಿಸಿದ್ದರು.

ಮೂವರು ಪೊಲೀಸ್ ಸಿಬಂದಿಗಳ ಕೆಲಸವನ್ನು ಶ್ಲಾಘಿಸಿದ ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸಿಬಂದಿಗಳ ಚುರುಕಾದ ಮತ್ತು ಸಕ್ರೀಯ ಕಾರ್ಯಕ್ಕಾಗಿ ಬಹುಮಾನ ನೀಡಿ ಗೌರವಿಸಿದ್ದಾರೆ.
ಅಪರಾಧವನ್ನು ನಿಗ್ರಹಿಸಲು ನಮಗೆ ಇಂತಹ ಧೈರ್ಯಶಾಲಿ ಪೊಲೀಸ್ ಸಿಬ್ಬಂದಿಯ ಅಗತ್ಯವಿದೆ. ಕಾನೂನಿನ ಮೇಲೆ ಯಾರೂ ಇಲ್ಲ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದಾಗ, ಎಲ್ಲಾ ಸಮಯದಲ್ಲೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಎಲ್ಲಾ ನಾಗರಿಕರಿಗೆ ಸುರಕ್ಷತೆ ಮತ್ತು ಭದ್ರತೆ ಒದಗಿಸುವುದು ಅಗತ್ಯವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಘಟನೆ ಕುರಿತು ಈಗಾಗಲೇ ಪ್ರಕರಣ ದಾಖಲಿಸಿದ್ದ, ಆರೋಪಿಗಳನ್ನು ಶ್ರೀಘ್ರದಲ್ಲೇ ಪತ್ತೆ ಹಚ್ಚಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸದ್ದಾರೆ.


Spread the love

Exit mobile version