Home Mangalorean News Kannada News ಕಾಪು: ಉಚ್ಚಿಲ ದೇವಸ್ಥಾನದ ನೂತನ ಶಿಲಾಮಯ ಗುಡಿಯ ಶಿಲಾ ಮಹೂರ್ತಕ್ಕೆ ಚಾಲನೆ

ಕಾಪು: ಉಚ್ಚಿಲ ದೇವಸ್ಥಾನದ ನೂತನ ಶಿಲಾಮಯ ಗುಡಿಯ ಶಿಲಾ ಮಹೂರ್ತಕ್ಕೆ ಚಾಲನೆ

Spread the love

ಕಾಪು: ಉಚ್ಚಿಲ ಶ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಗುರುವಾರ  ಬೆಳಿಗ್ಗೆ ಗಣಪತಿಯ ನೂತನ ಶಿಲಾಮಯ ಗುಡಿಗಾಗಿ ಶಿಲಾ ಮೂಹೂರ್ತ ಹಾಗೂ ಬ್ರಹ್ಮ ರಥದ ಜೀಣೋದ್ಧಾರ ಪ್ರಕ್ರಿಯೆಗೆ ದೇವಳದ ಪ್ರಧಾನ ತಂತ್ರಿ ವೇದ ಮೂರ್ತಿ ಕಂಬಳಕಟ್ಟ ರಾಧಾಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

uchilatemple

ಈ ಸಂದರ್ಭ ರಾಧಾಕೃಷ್ಣ ತಂತ್ರಿ ಮಾತನಾಡಿ, ಕೆಲ ಸಮಯದ ಹಿಂದೆ ನಡೆದ ಅಷ್ಠ ಮಂಗಳ ಪ್ರಶ್ನೆಯಲ್ಲಿ ದೇವಳವು ಅಜೀರ್ಣಗೊಂಡಿದ್ದು, ಆದಷ್ಟು ಶೀಘ್ರವಾಗಿ ಜೀರ್ಣೋದ್ಧಾರ ಪ್ರಕ್ರಿಯೆ ನೆರವೇರಿಸಬೇಕೆಂದು ಕಂಡು ಬಂದಿದೆ. ಅಂತೆಯೇ ದೇವಳದ ಬ್ರಹ್ಮ ರಥವನ್ನು ಶೀಘ್ರವಾಗಿ ಸುಸೂತ್ರಗೊಳೀಸಬೇಕೆಂದು ಆದೇಶಿಸಲಾಗಿದೆ. ಆಪ್ರಯುಕ್ತ ದೇವಳದ ಭಕ್ತರಾದ ಅಣ್ಣಾವರ ಶಂಕರ ಶೆಟ್ಟಿಯವರು ಈ ಎರಡೂ ಪ್ರಕ್ರಿಯೆಯ ಸಂಪೂರ್ಣ ಖರ್ಚನ್ನು ಭರಿಸುವವರಿದ್ದಾರೆ. ಮುಂದಿನ ವಾರ್ಷಿಕ ರಥೋತ್ಸವದ ಮೊದಲು ಶಿಲಾಮಯ ಮಹಾಗಣಪತಿಯ ಗುಡಿ ಮತ್ತು ಬ್ರಹ್ಮ ರಥ ಪೂರ್ಣಗೊಳ್ಳಲಿದೆ ಎಂದೂ ಅವರು ಹೇಳಿದ್ದಾರೆ.

ಗಣಪತಿ ಗುಡಿಯ ಶಿಲ್ಪಿ ಹಾಗೂ ರಥದ ಶಿಲ್ಪಿಯವರಿಗೆ ಈ ಸಂದರ್ಭ ತಂತ್ರಿಯವರು ವಿಷೇಶ ಪ್ರಸಾದ ನೀಡಿ ಶೀಘ್ರವಾಗಿ ಕಾಮಗಾರಿ ಮುಗಿಸುವಂತೆ ಪ್ರಾರ್ಥಿಸಿಕೊಂಡರು.

ಈ ಸಂದರ್ಭ ದೇವಳದ ಪ್ರಧಾನ ಅರ್ಚಕ ಸೀತಾರಾಮ ಭಟ್, ಆಡಳಿತಾಧಿಕಾರಿ ಎಸ್ ಬಾಲಕೃಷ್ಣ ರೈ, ದೇವಳದ ಸಹಾಯಕರಾದ ರಾಘವೇಂದ್ರ ಭಟ್ , ದಾನಿಗಳಾದ ಎರ್ಮಾಳು ಅಣ್ಣಾವರ ಶಂಕರ್ ಶೆಟ್ಟಿಯವರ ಪರವಾಗಿ ಅಣ್ಣಾವರ ಶ್ರೀಧರ್ ಶೆಟ್ಟಿ, ಕಿಶೋರ್ ಶೆಟ್ಟಿ, ಉದಯ ಕೆ. ಶೆಟ್ಟಿ, ವೆಂಕಟೇಶ್ ನಾವಡ ಲಕ್ಷ್ಮೀ ನಾರಾಯಣ ಸಾಮಗ, ಶ್ರೀಧರ್ ಭಟ್, ವಿಶ್ವನಾಥ್. ಕೃಷ್ಣ ಭಟ್, ಜ್ಯೋಯಿಸ್, ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version