Home Mangalorean News Kannada News ಕಾರಿನಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆ, ಕೊಲೆ ಶಂಕೆ

ಕಾರಿನಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆ, ಕೊಲೆ ಶಂಕೆ

Spread the love

ಕಾರಿನಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆ, ಕೊಲೆ ಶಂಕೆ
ಮಂಗಳೂರು: ಹೆದ್ದಾರಿ ಸಮೀಪದ ಉಪ್ಪಿನಂಗಡಿ ಸೇತುವೆ ಬಳಿ ಗ್ಯಾರೇಜು ಮುಂದೆ ನಿಲ್ಲಿಸಿದ್ದ ಇಂಡಿಕಾ ಕಾರಿನಲ್ಲಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ.

ಶನಿವಾರ ಸ್ಥಳೀಯ ನಿವಾಸಿಗಳು ಕಾರಿನಿಂದ ಬರುತ್ತಿರುವ ಕೆಟ್ಟ ವಾಸನೆಯನ್ನು ಗಮನಿಸಿದಾಗ ಕಾರಿನ ಒಳಗಡೆ ರಕ್ತದ ಕಲೆಗೆಳು ಕಾರಿನ ಬಾಗಿಲಿನ ಮೇಲೆ ಕಂಡಿದ್ದು, ಕೂಡಲೇ ಉಪ್ಪನಂಗಡಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಉಪ್ಪನಂಗಡಿ ಪೋಲಿಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದಾಗ ಕಾರಿನ ಒಳಗೆ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯ ವ್ಯಕ್ತಿಯ ಕಾರು ಇದಾಗಿದ್ದು, ಕಳೆದ ಎರಡು ವರುಷಗಳಿಂದ ಉಪಯೋಗಿಸದೆ ಇದ್ದಿದ್ದರು. ಆದ್ದರಿಂದ ಕಳೆದ ಎರಡು ತಿಂಗಳ ಹಿಂದೆ ಕಾರನ್ನು ಈ ಗ್ಯಾರೇಜು ಬಳಿ ನಿಲ್ಲಿಸಿದ್ದರು ಎನ್ನಲಾಗಿದೆ.

ಮೃತ ವ್ಯಕ್ತಿಯನ್ನು ಕೊಲೆ ಮಾಡಿ ಕಾರಿನಲ್ಲಿ ಹಾಕಲಾಗಿದೆ ಎಂದು ಶಂಕಿಸಲಾಗಿದೆ.
ಉಪ್ಪಿನಂಗಡಿ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.


Spread the love

Exit mobile version