Home Mangalorean News Kannada News ಕುಂಟಾಡಿ ರಕ್ತೇಶ್ವರಿ ದೇವಸ್ಥಾನ ; 6 ಲಕ್ಷ ಮೌಲ್ಯದ ಬೆಳ್ಳಿಯಾಭರಣ ಲೂಟಿ

ಕುಂಟಾಡಿ ರಕ್ತೇಶ್ವರಿ ದೇವಸ್ಥಾನ ; 6 ಲಕ್ಷ ಮೌಲ್ಯದ ಬೆಳ್ಳಿಯಾಭರಣ ಲೂಟಿ

Spread the love

ಕಾರ್ಕಳ : ಕಲ್ಯಾ ಗ್ರಾಮದ ಕುಂಟಾಡಿ ರಕ್ತೇಶ್ವರಿ ದೇವಸ್ಥಾನಕ್ಕೆ ಹಿಂಬಾಗಿಲಿನಿಂದ ಒಳನುಗ್ಗಿದ ಕಳ್ಳರು 6 ಲಕ್ಷ ರೂ. ಮೌಲ್ಯದ ಕಂಚು ಮತ್ತು ಬೆಳ್ಳಿಯ ಆಭರಣವನ್ನು ಕದ್ದೊಯ್ದಿದ್ದಾರೆ. ಶನಿವಾರ ರಾತ್ರಿ ಈ ಕಳವು ನಡೆದಿದ್ದು, ರವಿವಾರ ಮುಂಜಾನೆ ದೇವಸ್ಥಾನಕ್ಕೆ ಅರ್ಚಕರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
4 ಕಂಚಿನ ವಿಗ್ರಹಗಳು, ಗರ್ಭಗುಡಿಧಿ ಗೆ ಅಳವಡಿಸಿದ ಬೆಳ್ಳಿಯ ತಗಡು ಕಳವಾಗಿದೆ. ಸ್ಥಳಕ್ಕೆ ಶ್ವಾನ ದಳ ಆಗಮಿಸಿದ್ದು, ದೇವಳದಲ್ಲಿ ದೀಪದೆಣ್ಣೆ ಚೆಲ್ಲಿದ ಪರಿಣಾಮ ಯಾವುದೇ ಸುಳಿವು ಲಭ್ಯವಾಗಿಲ್ಲ. ದೇವರಹುಂಡಿಯಲ್ಲಿ ಸ್ವಲ್ಪ ಹಣವಿತ್ತು. ಅದನ್ನು ಕಳ್ಳರು ಬಿಟ್ಟು ಪರಾರಿಯಾಗಿದ್ದಾರೆ.


Spread the love

Exit mobile version