ಕುಂದಾಪುರ: ತಾಮ್ರದ ವಯರ್, ಹಿತ್ತಾಳೆಯ ವಸ್ತುಗಳನ್ನು ಕಳ್ಳತನ ಮಾಡಿದ ನಾಲ್ವರ ಬಂಧನ
ಕುಂದಾಪುರ: ಅಂಗಡಿಯಿಂದ ತಾಮ್ರದ ವಯರ್ ಹಾಗೂ ಹಿತ್ತಾಳೆಯ ವಸ್ತುಗಳನ್ನು ಕಳವು ಮಾಡಿದ ಆರೋಪದ ಮೇಲೆ ನಾಲ್ವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಂಗಳೂರು ಕಸಬಾ ಬೆಂಗ್ರೆ ನಿವಾಸಿ ಸರ್ಫರಾಜ್ (33), ಜಾಕೀರ್ ಹುಸೈನ್ (36), ಮೊಹಮ್ಮದ್ ಅಲ್ಫಾಝ್ (26) ಮತ್ತು ಆರೋಪಿಗಳಿಂದ ಕಳ್ಳತನದ ಸೊತ್ತುಗಳನ್ನು ಸ್ವೀಕರಿಸಿದ ಮಂಜನಾಡಿ ನಿವಾಸಿ ಮಹಮ್ಮದ್ ರಿಯಾಜ್ (44) ಎಂದು ಗುರುತಿಸಲಾಗಿದೆ.
ಜುಲೈ 14 ರಂದು ಯಾರೋ ಕಳ್ಳರು ಸಮಯ ರಾತ್ರಿ 02:30 ಗಂಟೆಯಿಂದ 07:00 ಗಂಟೆಯ ಮದ್ಯಾವದಿಯಲ್ಲಿ ಕುಂದಾಪುರ ತಾಲೂಕು ಕಸಬಾ ಗ್ರಾಮದ ಸಂತೆ ಮಾರ್ಕೆಟ್ ಬಳಿ ಇರುವ 557/6 ನೇ ನಂಬ್ರದ ಅಂಗಡಿ ಕೋಣೆಯ ಶಟರ್ ನ ಬಾಗಿಲ ಬೀಗವನ್ನು ಒಡೆದು ಶಟರ್ ನ್ನು ಮೇಲಕ್ಕೇತ್ತಿ ಅಂಗಡಿ ಒಳಗೆ ಪ್ರವೇಶಿಸಿ, ಸುಮಾರು 95,000/- ರೂಪಾಯಿ ಬೆಲೆಬಾಳುವ ತಾಮ್ರದ ವಯರ್ ಗಳನ್ನು ಹಾಗೂ ಹಿತ್ತಾಳೆಯ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ, ಎಂಬುದಾಗಿ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 88/2025 ಕಲಂ. 331(4), 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ತನಿಖೆ ಕೈಗೊಂಡ ಕುಂದಾಪುರ ಪೊಲೀಸ್ ಠಾಣೆಯ ಪಿಎಸ್ಐ ನಂಜಾನಾಯ್ಕ್ ಎನ್ ಹಾಗೂ ಪುಷ್ಪ ಮತ್ತು ನೂತನ್ ಪಿಎಸ್ಐ ಸಂಚಾರ ಠಾಣೆ ಹಾಗೂ ಸಿಬ್ಬಂದಿಗಳಾದ ಹೆಚ್ ಸಿ ಮೋಹನ್, ಹೆಚ್ ಸಿ ಸಂತೋಷ, ಹೆಚ್ ಸಿ ಪ್ರೀನ್ಸ್, ಹೆಚ್ ಸಿ ನಾಗೇಶ, ಹೆಚ್ ಸಿ ಮಹಾಬಲ, ಮಹೆಚ್ಸಿ 171 ರೇವತಿ, ಪಿಸಿ ಘನಶ್ಯಾಮ್ ಮತ್ತು ಸತೀಶ ಇವರನ್ನು ಒಳಗೊಂಡ ತಂಡ ಆರೋಪಿಗಳನ್ನು ಸಂತೆಕಟ್ಟೆ ಬಳಿ ಬಂಧಿಸಿದ್ದಾರೆ.
ಬಂಧಿತರಿಂದ 50 ಕೆಜಿ ತೂಕದ ತಾಮ್ರದ ಸರಿಗೆ, ಅಂದಾಜು ಮೌಲ್ಯ 35,000/-ರೂಪಾಯಿ, 34 ಕೆಜಿ ತೂಕದ ತಾಮ್ರದ ಸರಿಗೆ, ಅಂದಾಜು ಮೌಲ್ಯ 23,800/- ರೂಪಾಯಿ, 61 ಕೆಜಿ ತೂಕದ ಹಿತ್ತಾಳೆಯ ವಸ್ತು, ಅಂದಾಜು ಮೌಲ್ಯ 27,450/-, 20 ಕೆಜಿ ತೂಕದ ಅಲ್ಯೂಮಿನಿಯಂ ವಸ್ತು, ಅಂದಾಜು ಮೌಲ್ಯ 3600/-ರೂಪಾಯಿ, ಫ್ರಿಡ್ಜ್ ಎ ಸಿ ಕಂಪ್ರೆಸರ್, ಅಂದಾಜು ಮೌಲ್ಯ 650/- ರೂಪಾಯಿ ಹಾಗೂ ಹಳೆಯ ಮೊಬೈಲ್ ಗಳು 45, ಅಂದಾಜು ಮೌಲ್ಯ 4500/- ರೂಪಾಯಿ, ಒಟ್ಟು 95,000/- ಮತ್ತು KL 14 AC 0551 Maruthi Suzuki Baleno ವಾಹನದ ಮೌಲ್ಯ ಅಂದಾಜು ರೂಪಾಯಿ 4,00,000/- ಯನ್ನು ವಶಕ್ಕೆ ಪಡೆಯಲಾಗಿದೆ.