Home Mangalorean News Kannada News ಕುಂದಾಪುರ – ಬೆಂಗಳೂರು : ಅಂಬಾರಿ ಡ್ರೀಮ್ ಕ್ಲಾಸ್ ಎ.ಸಿ. ಸ್ಲೀಪರ್ ಬಸ್

ಕುಂದಾಪುರ – ಬೆಂಗಳೂರು : ಅಂಬಾರಿ ಡ್ರೀಮ್ ಕ್ಲಾಸ್ ಎ.ಸಿ. ಸ್ಲೀಪರ್ ಬಸ್

Spread the love

ಕುಂದಾಪುರ – ಬೆಂಗಳೂರು : ಅಂಬಾರಿ ಡ್ರೀಮ್ ಕ್ಲಾಸ್ ಎ.ಸಿ. ಸ್ಲೀಪರ್ ಬಸ್

ಮಂಗಳೂರು: ಕೆ.ಎಸ್.ಆರ್.ಟಿ.ಸಿ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಕೇಂದ್ರೀಯ ವಿಭಾಗದಿಂದ ಬೆಂಗಳೂರು-ಕುಂದಾಪುರ ನಡುವೆ ಮಂಗಳೂರು, ಉಡುಪಿ, ಕುಂದಾಪುರ, ಮಣಿಪಾಲ ಮಾರ್ಗದಲ್ಲಿ ಈಗಾಗಲೇ ಐರಾವತ ಕ್ಲಬ್ಕ್ಲಾಸ್ ಮಲ್ಟಿಆಕ್ಸ್ಲ್ ಸಾರಿಗೆಯನ್ನು ಕಾರ್ಯಾಚರಣೆಗೊಳಿಸಲಾಗುತ್ತಿದ್ದು, ಇದನ್ನು ಅಂಬಾರಿ ಡ್ರೀಮ್ಕ್ಲಾಸ್ ಮಲ್ಟಿ ಎಕ್ಸೆಲ್ ಎ.ಸಿ. ಸ್ಲೀಪರ್ ಸಾರಿಗೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.

ಈ ಬಸ್ಸು ಬೆಂಗಳೂರಿನಿಂದ ರಾತ್ರಿ 10 ಗಂಟೆಗೆ ಹೊರಟು ಹಾಸನ, ಮಂಗಳೂರು, ಉಡುಪಿ, ಮಣಿಪಾಲ ಮಾರ್ಗವಾಗಿ ಕುಂದಾಪುರಕ್ಕೆ ಬೆಳಗ್ಗೆ 7.30 ಗಂಟೆಗೆ ತಲುಪುವುದು ಹಾಗೂ ಮರು ಪ್ರಯಾಣದಲ್ಲಿ ಕುಂದಾಪುರದಿಂದ ರಾತ್ರಿ 8.45 ಕ್ಕೆ ಹೊರಟು ಮಣಿಪಾಲ, ಉಡುಪಿ, ಮಂಗಳೂರು ಉಪ್ಪಿನಂಗಡಿ ಸಕಲೇಶಪುರ, ಹಾಸನ ಮಾರ್ಗವಾಗಿ ಬೆಂಗಳೂರಿಗೆ ಬೆಳಗ್ಗೆ 6 ಗಂಟೆಗೆ ತಲುಪುವುದು.

ಪ್ರಯಾಣದರ ಪ್ರತಿ ಪ್ರಯಾಣಿಕರಿಗೆ ರೂ.1000/- ನಿಗದಿಪಡಿಸಲಾಗಿದೆ. ಈ ಬಸ್ಸಿಗೆ ವೆಬ್ಸೈಟ್ ಹಾಗೂ ನಿಗಮದ ಖಾಸಗಿ ಬುಕ್ಕಿಂಗ್ ಕೌಂಟರ್ಗಳಲ್ಲಿ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳಬೇಕು ಎಂದು ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.


Spread the love

Exit mobile version