Home Mangalorean News Kannada News ಕುಂದಾಪುರ| ಮೊಬೈಲ್ ವಿಚಾರವಾಗಿ ಪತ್ನಿಯನ್ನೇ ಕಡಿದು ಕೊಂದ ಪತಿ; ಆರೋಪಿ ಬಂಧನ

ಕುಂದಾಪುರ| ಮೊಬೈಲ್ ವಿಚಾರವಾಗಿ ಪತ್ನಿಯನ್ನೇ ಕಡಿದು ಕೊಂದ ಪತಿ; ಆರೋಪಿ ಬಂಧನ

Spread the love

ಕುಂದಾಪುರ| ಮೊಬೈಲ್ ವಿಚಾರವಾಗಿ ಪತ್ನಿಯನ್ನೇ ಕಡಿದು ಕೊಂದ ಪತಿ; ಆರೋಪಿ ಬಂಧನ

ಕುಂದಾಪುರ: ಯಾವಾಗಲೂ ಮೊಬೈಲ್ ಹೆಚ್ಚಾಗಿ ಉಪಯೋಗಿಸುತ್ತಾಳೆಂದು ಹೆಂಡತಿಯೊಂದಿಗೆ ತಕರಾರು ತೆಗೆದು ಗಲಾಟೆ ನಡೆಸಿ ಮಾತಿಗೆ ಮಾತು ಬೆಳೆದು ಉದ್ರೇಕಗೊಂಡ ಪತಿ ಪತ್ನಿಯನ್ನೇ ಹೊಡೆದು ಕೊಂದ ಘಟನೆ ಗುರುವಾರ ತಡರಾತ್ರಿ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಹಿಲಿಯಾಣ ಎಂಬಲ್ಲಿ ನಡೆದಿದೆ.

ಕೊಲೆಗೀಡಾದವರನ್ನು ಹೊಸಮಠ ನಿವಾಸಿ ರೇಖಾ(27) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ, ಆಕೆಯ ಪತಿ ಕೊಳಂಬೆ ಗ್ರಾಮದ ನಿವಾಸಿ ಗಣೇಶ ಪೂಜಾರಿ(42) ಎಂಬಾತನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

ವೃತ್ತಿಯಲ್ಲಿ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಗಣೇಶ್ ಪೂಜಾರಿ ಗುರುವಾರ ತಡರಾತ್ರಿ ಮನೆಗೆ ಬಂದು ಯಾವಾಗಲೂ ಮೊಬೈಲ್ ಹೆಚ್ಚಾಗಿ ಉಪಯೋಗಿಸುತ್ತಾಳೆಂದು ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿ ಯೊಂದಿಗೆ ಜಗಳ ಮಾಡಿರುತ್ತಾನೆ. ಈ ವೇಳೆ ಸಿಟ್ಟಿನಿಂದ ಪತ್ನಿಯ ಕುತ್ತಿಗೆಗೆ ಕತ್ತಿಯಿಂದ ಗಣೇಶ್ ಪೂಜಾರಿ ಕಡಿದಿದ್ದು ತಲೆಗೆ ಗಂಭೀರ ಗಾಯಗೊಂಡ ರೇಖಾ ಸ್ಥಳದಲ್ಲಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

ಬಳಿಕ ಮನೆಯಿಂದ ಓಡಿ ಹೋಗಿದ್ದ ಆರೋಪಿ ಗಣೇಶ್ ಪೂಜಾರಿಯನ್ನು ಶಂಕರನಾರಾಯಣ ಪೊಲೀಸರು ಹುಡುಕಾಡಿ ಕೊನೆಗೆ ಶಂಕರನಾರಾಯಣದಲ್ಲಿ ಬಂಧಿಸಿದ್ದಾರೆ

ಕೊಲೆಯಾದ ರೇಖಾ ಪೂಜಾರಿ ಹಾಗೂ ಆರೋಪಿ ಗಣೇಶ ಪೂಜಾರಿ ದಂಪತಿಗಳಿಗೆ ಒಬ್ಬ 6 ವರ್ಷ ಮತ್ತು ಇನ್ನೊಬ್ಬ 3 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ.

ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version