Home Mangalorean News Kannada News ಕುಡಿಯುವ ನೀರಿಗಾಗಿ ಪ್ರತಿ ಜಿಲ್ಲೆಗಳಿಗೂ ಅನುದಾನ ಬಿಡುಗಡೆ : ಕಾಗೋಡು ತಿಮ್ಮಪ್ಪ

ಕುಡಿಯುವ ನೀರಿಗಾಗಿ ಪ್ರತಿ ಜಿಲ್ಲೆಗಳಿಗೂ ಅನುದಾನ ಬಿಡುಗಡೆ : ಕಾಗೋಡು ತಿಮ್ಮಪ್ಪ

Spread the love

ಕುಡಿಯುವ ನೀರಿಗಾಗಿ ಪ್ರತಿ ಜಿಲ್ಲೆಗಳಿಗೂ ಅನುದಾನ ಬಿಡುಗಡೆ : ಕಾಗೋಡು ತಿಮ್ಮಪ್ಪ

ಉಡುಪಿ : ಕುಡಿಯುವ ನೀರು ಸರಬರಾಜು ಕುರಿತಂತೆ ಜಿಲ್ಲೆಯ ಪ್ರತಿ ಗ್ರಾಮದ ವಿಎ ಗಳು, ಪಿಡಿಓ ಗಳಿಂದ ಪ್ರತಿದಿನ ವರಿದಿ ಪಡೆದು , ತಹಸೀಲ್ದಾರ್ ಗಳ ಮೂಲಕ ತಮಗೆ ಸಲ್ಲಿಸುವಂತೆ ರಾಜ್ಯದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

ಅವರು ಭಾನುವಾರ ಜಿಲ್ಲಾಧಿಕರಿಗಳ ಕಚೇರಿಯಲ್ಲಿ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಡಿಯುವ ನೀರಿಗಾಗಿ ಪ್ರತಿ ಜಿಲ್ಲೆಗಳಿಗೂ ಅನುದಾನ ಬಿಡುಗಡೆ ಮಾಡಲಾಗಿದ್ದು, ಇದಮನ್ನು ಸಮರ್ಪಕವಾಗಿ ಬಳಸಿ, ಗ್ರಾಮದ ಪ್ರತಿಯೊಂದು ಮನೆಗೂ ನೀರಿನಸರಬರಜು ಮಾಡಿ, ಯಾವುದೇ ಮನೆ ನೀರಿನ ಸಮಸ್ಯೆಗೆ ಒಳಗಾದಂತೆ ನೋಡಿಕೊಳ್ಳಿ ಎಂದರು, ಜಿಲ್ಲೆಯಲ್ಲಿ ಪ್ರಸ್ತುತ 42 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಪ್ರಕೃತಿಕ ವಿಕೋಪ ಪರಿಹಾರದಡಿ ಬಿಡುಗಡೆಯಾಗಿರುವ ಹಣವನ್ನು , ವಿಕೋಪದಿಂದ ದುರಸ್ಥಿಗೊಳಿಸಲು ಬಿಡುಗಡೆ ಮಾಡಲು ನಿಯಮಗಳಲ್ಲಿ ಸಡಿಲಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಕೋರಿದರು, ಈ ಕುರಿತಂತೆ ಸ್ಥಳದಲ್ಲೇ ಕಂದಾಯ ಇಲಾಖೆಯ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ಅವರಿಗೆ ಕಂದಾಯ ಸಚಿವರು ಪೋನ್ ಮೂಲಕ ಸಮಸ್ಯೆ ಬಗೆಹರಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಸಿಡಿಲಿನಿಂದ ಮನೆಯ ವೈರಿಂಗ್ ಮತ್ತು ದನದ ಕೊಟ್ಟಿಗೆಗೆ ಹಾನಿಯಾದರೆ ಪರಿಹಾರ ನಿಧಿಯಲ್ಲಿ ಪರಿಹಾರ ನೀಡಲು ಅವಕಾಶ ನೀಡುವಂತೆ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಕೋರಿದರು.

ಜಿಲ್ಲೆಯಲ್ಲಿ ಅಕ್ರಮ ಸಕ್ರಮ ಮತ್ತು 94 ಸಿ 94ಸಿಸಿ ಯಲ್ಲಿ ಬಾಕಿ ಇರುವ ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡಿ , ಅರ್ಹರಿಗೆ ಹಕ್ಕುಪತ್ರಗಳನ್ನು ವಿತರಿಸುವಂತೆ ಸೂಚಿಸಿದ ಸಚಿವರು, ಜಮೀನಿನ ಸರ್ವೇ ಮಾಡಲು ಸವೇಯರ್ ಗಳ ಕೊರತೆಯಿದ್ದಲ್ಲಿ ಲೈಸೆನ್ಸ್ ಇರುವ ಖಾಸಗಿ ಸರ್ವೇಯರ್ ಗಳನ್ನು ಬಳಸಿಕೊಳ್ಳುವಂತೆ ಸೂಚಿಸಿದರು ಹಾಗೂ ಈ ಕುರಿತು ಆದೇಶ ನೀಡುವುದಾಗಿ ತಿಳಿಸಿದರು, ಜಾಗದ ಪೋಡಿ ಮಾಡಲು ತಹಸೀಲ್ದಾರ್ ಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ, ಡ್ರೀಮ್ಡ್ ಫಾರೆಸ್ಟ್ ನಲ್ಲಿನ ಜಾಗದ ಕುರಿತು ಅರಣ್ಯ ಇಲಾಖೆಯ ಅಭಿಪ್ರಾಯ ಕೇಳಿ ಪತ್ರ ಬರೆಯಬೇಡಿ, ಕಂದಾಯ ಇಲಾಖೆಗೆ ಸಂಬಂದಿಸಿದಂತೆ ಹೊರಡಿಸುವ ಆದೇಶಗಳನ್ನು ಅರ್ಥೈಸಿಕೊಂಡು, ಕಟ್ಟುನಿಟ್ಟಾಗಿ ಪಾಲಿಸಿ ಎಂದು ತಹಸೀಲ್ದಾರ್ ಗಳಿಗೆ ಸಚಿವರು ಸೂಚಿಸಿದರು.

94 ಸಿಸಿ ಯಡಿ ಮಂಜೂರು ಮಾಡುವ ಜಾಗದ ಅಳತೆಯ ಕುರಿತು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಗಳಿಗೆ ಪ್ರತ್ಯೇಕ ಮಾನದಂಡಗಳನ್ನು ರೂಪಿಸುವ ಕುರಿತು ಚರ್ಚೆ ನಡೆಯಿತು.

ಹಕ್ಕುಪತ್ರಗಳನ್ನು ನೀಡುವ ಕುರಿತಂತೆ ದಿನಾಂಕ ಪಟ್ಟಿಯನ್ನು ನಿಗಧಿಪಡಿಸಕೊಂಡು ಅದರಂತೆ ಕಾರ್ಯ ನಿರ್ವಹಿಸಿ, ಆದಷ್ಟು ಶೀಘ್ರದಲ್ಲಿ ರೆಕಾರ್ಡ್ ತಯಾರಿಸಿ, ಫಲಾನುಭವಿಗಳಿಗೆ ಅವರ ಗ್ರಾಮದಲ್ಲೇ ಹಕ್ಕುಪತ್ರಗಳನ್ನು ವಿತರಿಸಿ ಎಂದು ಸಚಿವರು ಸೂಚಿಸಿದರು.

ಸಭೆಯಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಹಾಗೂ ಎಲ್ಲಾ ತಾಲೂಕುಗಳು ತಹಸೀಲ್ದಾರ್ ಗಳು ಉಪಸ್ಥಿತರಿದ್ದರು.


Spread the love

Exit mobile version