Home Mangalorean News Kannada News ಕುವೈಟಿನಲ್ಲಿ ಡಾ. ಡಿ.ಕೆ. ಚೌಟ ಅವರ ಅನುವಾದಿತ ಇಂಗ್ಲಿಷ್ ಕಾದಂಬರಿ ಲೋಕಾರ್ಪಣೆ

ಕುವೈಟಿನಲ್ಲಿ ಡಾ. ಡಿ.ಕೆ. ಚೌಟ ಅವರ ಅನುವಾದಿತ ಇಂಗ್ಲಿಷ್ ಕಾದಂಬರಿ ಲೋಕಾರ್ಪಣೆ

Spread the love

ಕುವೈಟಿನಲ್ಲಿ ಡಾ. ಡಿ.ಕೆ. ಚೌಟ ಅವರ ಅನುವಾದಿತ ಇಂಗ್ಲಿಷ್ ಕಾದಂಬರಿ ಲೋಕಾರ್ಪಣೆ

ಕುವೈಟ್ : ಡಾ. ಡಿ. ಕೆ. ಚೌಟ ಅವರ ತುಳು ಕಾದಂಬರಿ, ಡಾ. ಬಿ. ಸುರೇಂದ್ರ ರಾವ್ ಮತ್ತು ಪ್ರೊ. ಕೆ. ಚಿನ್ನಪ್ಪ ಗೌಡ ಅವರು ಅನುವಾದಿಸಿರುವ ಮಿತ್ತಬೈಲು ಯಮುನಕ್ಕ ಇಂಗ್ಲಿಷ್ ಕಾದಂಬರಿಯು ಶುಕ್ರವಾರ ಸಂಜೆ ಕುವೈಟ್ ನ ಮಿಶ್ರೇಪ್ ಗಾರ್ಡನ್ ನಲ್ಲಿ ಲೋಕಾರ್ಪಣೆಗೊಂಡಿತು.

ತುಳು ಕೂಟ ಕುವೈಟ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಬಂಟರ ಸಂಘ ಕುವೈಟ್ , ಜಿ. ಎಸ್ .ಬಿ. ಸಭಾ, ಕುವೈಟ್ , ಕುವೈಟ್ ಸಾಹಿತ್ಯ ಸಂಪದ, ಭಾರತೀಯ ಪ್ರವಾಸಿ ಪರಿಷತ್ ಇವರು ಸಹಯೋಗ ನೀಡಿದ್ದರು.

ತುಳುಕೂಟದ ಅಧ್ಯಕ್ಷ ವಿಲ್ಸನ್ ಡಿಸೋಜ ಮತ್ತು ಕುವೈಟ್ ಜಿ.ಎಸ್.ಬಿ. ಸಭಾದ ಮಂಜೇಶ್ವರ ಮೋಹನದಾಸ್ ಕಾಮತ್ ಈ ಕಾರ್ಯಕ್ರಮ ಸಂಯೋಜಿಸುವಲ್ಲಿ ತುಂಬಾ ಶ್ರಮವಹಿಸಿದ್ದಾರೆ.

ಕುವೈಟ್ ತುಳು ಕೂಟದ ಪ್ರವಾಸಿ ದಿನಾಚರಣೆಯ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು ನಾಲ್ಕು ನೂರಕ್ಕೂ ಮಿಕ್ಕಿ ಕುವೈಟ್ ವಾಸಿ ಭಾರತೀಯರು ಭಾಗವಹಿಸಿದ್ದರು.


Spread the love

Exit mobile version