ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಣಬೆ ಬೇಸಾಯ ತರಬೇತಿ ಕಾರ್ಯಾಗಾರ
ಮಂಗಳೂರು : ಅಣಬೆ ಬೇಸಾಯ ತರಬೇತಿ ಕಾರ್ಯಾಗಾರವು ನಿರುದ್ಯೋಗಿಗಳಿಗೆ ಒಂದು ಉಪಕಸುಬಾಗಿ ಮಾಡಲು ಅನುಕೂಲವಾಗುವುದಲ್ಲದೇ ಕಡಿಮೆ ಬಂಡವಾಳದಲ್ಲಿ ಮಾಡಬಹುದಾಗಿದೆ ಎಂದು ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಡೀನ್ ಡಾ| ಎಚ್. ಶಿವಾನಂದ ಮೂರ್ತಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರವು ಆಸಕ್ತ ರೈತರು, ನಿರುದ್ಯೋಗಿ ಪದವಿದರ ಹಾಗೂ ಮಹಿಳೆಯರಿಗೆ ಫೆಬ್ರವರಿ 14 ರಂದು ಅಣಬೆ ಬೇಸಾಯ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಣಬೆ ಒಂದು ಶಿಲೀಂದ್ರವಾದುದಲ್ಲದೇ ಇದರ ಸೇವನೆಯಿಂದ ಆರೋಗ್ಯಕ್ಕೆ ಯಾವುದೇ ಹಾನಿಕಾರಕ ವಿಷಕಾರಿ ಅಂಶವಿರುವುದಿಲ್ಲ ಮತ್ತು ಉತ್ಪಾದನೆ ಮಾಡಿ ಸ್ಥಳೀಯ ಮಾರುಕಟ್ಟೆಗಳಾದ ಸೂಪರ್ ಮಾರ್ಕೆಟ್‍ಗಳಲ್ಲಿ ಮಾರಾಟ ಮಾಡಬಹುದಾಗಿದೆ ಎಂದರು.
ಇತರ ಕೃಷಿ ಬೆಳೆಗಳನ್ನು ಮಾಡಬೇಕಾದರೆ ಖರ್ಚುವೆಚ್ಚವು ಹೆಚ್ಚಾಗುತ್ತದೆಂಬುದನ್ನು ಗಮನದಲ್ಲಿಟ್ಟುಕೊಂಡು ಮನೆಯ ಅಂಗಳದಲ್ಲಿ ಸ್ವಲ್ಪ ಜಾಗವಿದ್ದರೂ ಸಹ ಅಣಬೆ ಕೃಷಿ ಕೈಗೊಳ್ಳಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ| ಎ.ಟಿ. ರಾಮಚಂದ್ರ ನಾಯ್ಕ ರವರು, ಅಣಬೆಯಿಂದ ದೊರಕುವ ಪೌಷ್ಟಿಕತೆಯ ಬಗ್ಗೆ ಮಾಹಿತಿ ನೀಡಿ, ದೀರ್ಘಾವಧಿಯ ಜೀವನಶೈಲಿ-ಸಂಭಂಧಿತ ಆರೋಗ್ಯ ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡಲು ಅಣಬೆ ಸೇವನೆ ಅಗತ್ಯವಾದುದೆಂದು ಹೇಳಿದರು. ಬೇರೆ ಅಹಾರ ಪದಾರ್ಥಗಳನ್ನು ಹೋಲಿಸಿದರೆ, ಅಣಬೆ ಸೇವನೆಯಿಂದ ಬೊಜ್ಜು ಕರಗಿಸಲು, ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ಮತ್ತು ಹೃದಯ ಸಂಭಂದಿತ ಕಾಯಿಲೆ ಇರುವವರು ಅವುಗಳ ಪ್ರಮಾಣ ಮೊಟಕುಗಳಿಸಿ ಆರೋಗ್ಯಕರ ಮೈಬಣ್ಣ ಮತ್ತು ಕೂದಲಿನ ದಟ್ಟಪುಷ್ಟ ಕಾಪಾಡುವುದಲ್ಲದೇ ದೇಹದ ತೂಕವನ್ನು ಕಡಿಮೆ ಮಾಡಲು ಸಹಕರಿಸುತ್ತದೆಂದು ತಿಳಿಸಿದರು.
ಆಣಬೆಯಲ್ಲಿ ನಾರಿನ ಅಂಶ, ಪೆÇಟ್ಯಾಷಿಯಂ ಮತ್ತು ವಿಟಮಿನ್-ಸಿ ಗಳ ಪ್ರಮಾಣ ಹೆಚ್ಚಾಗಿದ್ದು ಆರೋಗ್ಯ ದೃಷ್ಟಿಯಿಂದ ನೋಡಿದರೆ ಅಣಬೆ ಸೇವನೆಯಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗುವುದಲ್ಲದೇ ಹೃದಯರಕ್ತನಾಳದ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ. ಅಣಬೆಯಲ್ಲಿ ಕ್ಯಾಲೋರಿಯ ಪ್ರಮಾಣ ಕಡಿಮೆಯಿದ್ದು ಪ್ರಮುಖ ಜೀವಸತ್ವ ಮತ್ತು ಖನಿಜಾಂಶದ ಲಭ್ಯತೆ ಹೆಚ್ಚಾಗಿದೆಯೆಂದು ತಿಳಿಸಿದರು. ಅಲ್ಲದೇ, ಸರ್ಕರಪಿಷ್ಟಗಳ ಪ್ರಮಾಣವೂ ಕೂಡ ಯೆಥೇಚ್ಚವಾಗಿರುವುದರಿಂದ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಪ್ರಾಭಲ್ಯ ಹೊಂದಿದ್ದು ಔಷದಿಗಳ ಗುಣ ಹೆಚ್ಚಾಗಿರುತ್ತದೆಂದು ಹೇಳಿದರು.
ಕಾಸರಗೋಡಿನ ಕೃಷಿ ವಿಜ್ಞಾನ ಕೇಂದ್ರದವತಿಯಿಂದ ಪಾಂಡುರಂಗ ಕೆ. ರವರು ಸಂಪನ್ಮೂಲ ವ್ಯಕ್ತಿಯಾಗಿ ತರಭೇತಿಯಲ್ಲಿ ಪ್ರ್ರಾತ್ಯಕ್ಷಿಕೆಯ ಮೂಲಕ ಅಣಬೆ ಬೇಸಾಯ ಕೈಗೊಳ್ಳುವ ವಿಧಾನವನ್ನು ತಿಳಿಸಿಕೊಟ್ಟರು. ಅಣಬೆಯಲ್ಲಿರುವ ವಿವಿಧ ತಳಿಗಳ ಪರಿಚಯ ಮಾಡಿ, ಅವುಗಳ ಕೃಷಿಯ ಪದ್ದತಿಗಳನ್ನು ಕೂಲಂಕುಶವಾಗಿ ಚರ್ಚೆಯ ಮೂಲಕ ಮಾಹಿತಿ ನೀಡಿದರು.
ಒಟ್ಟು 60 ಜನ ರೈತರು, ರೈತ ಮಹಿಳೆಯರು, ನಿರುದ್ಯೋಗಿ ಯುವಕ-ಯುವತಿಯರು ಈ ಕಾರ್ಯಾಗಾರದ ಪ್ರಯೋಜನ ಪಡೆದರು.
ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿಗಳಾದ ಸತೀಶ್ ನಾಯ್ಕ, ಕೇಶವ, ಸೋಮಶೇಖರಯ್ಯ, ಅಶ್ವಿತ್ ಕುಮಾರ್, ಸೀತಾರಾಮ ಎಂ., ವಿದ್ಯಾವತಿ, ಶಾಂಭವಿ, ಕಸ್ತೂರಿ, ಕಮಲ, ಸದಾಶಿವ, ದಾಮೋದರ, ಆಶಾಲತ ಮತ್ತು ವಿನೋದ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮೀನುಗಾರಿಕಾ ವಿಜ್ಞಾನಿ ಗಣೇಶ್‍ಪ್ರಸಾದ್ ಎಲ್. ಸ್ವಾಗತಿಸಿದರು. ಬೇಸಾಯಶಾಸ್ತ್ರದ ವಿಜ್ಞಾನಿ ಹರೀಶ್ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಕು| ಯಶಶ್ರೀ ವಂದಿಸಿದರು. ಶ್ರೀಮತಿ ದೀಪಾ ಪ್ರಾರ್ಥಿಸಿದರು.