Home Mangalorean News Kannada News ಕೃಷ್ಣ ಜೆ ರಾವ್ ಪ್ರಕರಣ : ಸಂತ್ರಸ್ತೆ ಜೊತೆ ವಿಶ್ವಕರ್ಮ ಸಮಾಜ ಇದೆ – ವಿಕ್ರಂ...

ಕೃಷ್ಣ ಜೆ ರಾವ್ ಪ್ರಕರಣ : ಸಂತ್ರಸ್ತೆ ಜೊತೆ ವಿಶ್ವಕರ್ಮ ಸಮಾಜ ಇದೆ – ವಿಕ್ರಂ ಐ ಆಚಾರ್ಯ

Spread the love

ಕೃಷ್ಣ ಜೆ ರಾವ್ ಪ್ರಕರಣ : ಸಂತ್ರಸ್ತೆ ಜೊತೆ ವಿಶ್ವಕರ್ಮ ಸಮಾಜ ಇದೆ – ವಿಕ್ರಂ ಐ ಆಚಾರ್ಯ

ಮಂಗಳೂರು: ಪುತ್ತೂರು ಕೃಷ್ಣ ರಾವ್ ಪ್ರಕರಣ ನಮ್ಮ ಸಮಾಜದ ಹೆಣ್ಣು ಮಗುವಿಗೆ ಆದ ಅನ್ಯಾಯವಾಗಿದ್ದು, ಸಂತ್ರಸ್ತೆ ಯುವತಿ ಜೊತೆ ಸಮಾಜ ಯಾವತ್ತೂ ಇದೆ. ಹಿಂದೂ ಸಂಘಟನೆಗಳ ಸಹಕಾರ ಸಿಗದೆ ಇದ್ದರೆ ಮುಂದಿನ ದಿನಗಳಲ್ಲಿ ದೇವಸ್ಥಾನಗಳಲ್ಲಿ ಪೋಟೋ ಇಟ್ಟು ಮಾಡಬೇಕಾದ ಕಾಲ ಬರಬಹುದು ಎಂದು ವಿಶ್ವ ಕರ್ಮ ಸಮಾಜದ ಮುಖಂಡ ವಿಕ್ರಂ ಐ ಆಚಾರ್ಯ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ಪುತ್ತೂರಿನಲ್ಲಿ ನಮ್ಮ ಸಮಾಜದ ಹೆಣ್ಣು ಮಗುವಿಗೆ ಆದ ಅನ್ಯಾಯವಾಗಿದೆ. ನಾವು ಈ ಪ್ರಕರಣದ ಕುರಿತಂತೆ ಹಿಂದೂ ಸಂಘಟನೆಗಳು ಹಾಗೂ ಶಾಸಕರ ಜೊತೆ ಮಾತನಾಡುತ್ತೆವೆ. ಈ ಪ್ರಕರಣ ಇದೀಗ ಕೋರ್ಟ್ ನಲ್ಲಿ ಇದೆ ಹಾಗಾಗಿ ನಾವು ಮಾತನಾಡಿಲ್ಲ. ಆದ್ರೆ ಯುವತಿಗೆ ಆದ ಅನ್ಯಾಯದ ವಿರುದ್ದ ನಾವಿದ್ದೇವೆ. ಈ ವಿಚಾರವಾಗಿ ಎಲ್ಲಾ ಪಕ್ಷದ ಶಾಸಕರು ಸಚಿವರನ್ನು ಭೇಟಿ ಆಗಲಿದ್ದೇವೆ. ನಮ್ಮ ಸಮಾಜದ ಮೇಲೆ ಆಗುವ ಅನ್ಯಾಯದ ಶೋಷಣೆ ಬಗ್ಗೆ ಮಾತನಾಡಲಿದ್ದೇವೆ. ಈಗಾಗಲೆ ಡಿಎನ್ಐ ವರದಿ ಯುವಕನೇ ತಂದೆ ಎಂದು ಬಂದಿದೆ. ವರದಿ ಬಂದ ಬಳಿಕ ಆತನ ಕುಟುಂಬಸ್ಥರನ್ನು ನಮ್ಮ ಸಮಾಜ ಹೋಗಿ ಮಾತನಾಡಿದೆ. ಆದ್ರೆ ಅವ್ರು ಮದುವೆ ಆಗಲ್ಲ ಎಂದು ಹೇಳ್ತಾ ಇದ್ದಾರೆ. ಯುವಕ ಯಾವ ಕಾರಣಕ್ಕೆ ಮದುವೆ ಆಗಲ್ಲ ಎನ್ನುತ್ತಿದ್ದಾನೆ ತಿಳಿದಿಲ್ಲ. ಯುವಕ ಕುಟುಂಬಸ್ಥರನ್ನು ಶಾಸಕರೊಂದಿಗೆ ಸೇರಿ ಮನವೊಲಿಸಲು ಪ್ರಯತ್ನಿಸುತ್ತೆವೆ

ಈ ವಿಷಯದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗೂ ಸಿದ್ದ ಕುಟುಂಬಸ್ಥರು ಮದುವೆಗೆ ಒಪ್ಪದಿದ್ದಲ್ಲಿ ಅವ್ರ ವಿರುದ್ದ ಎಲ್ಲರೂ ಒಂದಾಗಲಿದ್ದೇವೆ ಎಂದು ಎಚ್ಚರಿಸಿದರು. ಹಿಂದೂ ಸಂಘಟನೆಗಳ ಸಹಕಾರ ಸಿಗದೆ ಇದ್ದರೆ ಮುಂದಿನ ದಿನಗಳಲ್ಲಿ ದೇವಸ್ಥಾನಗಳಲ್ಲಿ ಪೋಟೋ ಇಟ್ಟು ಮಾಡಬೇಕಾದ ಕಾಲ ಬರಬಹುದು ಎಂದು ವಿಶ್ವ ಕರ್ಮ ಸಮಾಜದ ಮುಖಂಡ ವಿಕ್ರಂ ಐ ಆಚಾರ್ಯ ಹೇಳಿದ್ದಾರೆ.


Spread the love

Exit mobile version