Home Mangalorean News Kannada News ಕೆಲಸದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು

ಕೆಲಸದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು

Spread the love

ಮಂಗಳೂರು: ಕೆಲಸದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು

ಮಂಗಳೂರು: ಕೆಲಸದ ವೇಳೆ ವಿದ್ಯುತ್ ಹರಿದು 23 ವರ್ಷದ ಯುವಕನೋರ್ವ ಮೃತಪಟ್ಟ ಘಟನೆ ಫರಿಂಗಿಪೇಟೆಯ ಪೆರಿಮಾರ್ ಎಂಬಲ್ಲಿ ಶನಿವಾರ ಸಂಭವಿಸಿದೆ.

ಮೃತ ಯುವಕನನ್ನು ಅಮ್ಮೆಮ್ಮಾರ್ ನಿವಾಸಿ ಮುಬಾರಕ್ (23) ಎಂದು ಗುರುತಿಸಲಾಗಿದೆ. ಇದೇ ವೇಲೆ ಗಾಯಗೊಂಡ ವ್ಯಕ್ತಿಯನ್ನು ಫಾರೂಕ್ ಎಂದು ತಿಳಿದು ಬಂದಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಹಿತಿಗಳ ಪ್ರಕಾರ ಶನಿವಾರ ಮುಬಾರಕ್ ಮತ್ತು ಫಾರೂಕ್ ಪೆರಿಮಾರ್ ಬಳಿಯ ಕಟ್ಟಡವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಆಕಸ್ಮಿಕವಾಗಿ ನೆಲದಲ್ಲಿ ಬಿದ್ದ ವಿದ್ಯುತ್ ತಂತಿ ಸ್ಪರ್ಷಿಸಿದ ಪರಿಣಾ ಮುಬಾರಕ್ ಸ್ಥಳದಲ್ಲಿಯೇ ಮೃತಪಟ್ಟರು. ಗಂಭೀರ ಗಾಯಗೊಂಡ ಫಾರೂಕ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


Spread the love

Exit mobile version