ಕೇಂದ್ರದ ಯೋಜನೆಗೆ ಗಾಂಧಿ ಕನ್ನಡಕ ಬೇಕು, ಅವರ ಹೆಸರು ಬೇಡ್ವಾ-ಗರಂ ಆದ ಐವನ್ ಡಿಸೋಜಾ
ಮಂಗಳೂರು: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಕೇಂದ್ರ ಬಿಜೆಪಿ ಸರಕಾರ ಬದಲಿಸಿರುವುದನ್ನು ಖಂಡಿಸಿ ರಾಜ್ಯ ಸರ್ಕಾರ ಜ.22ರಿಂದ 31ರವರೆಗೆ ಜಂಟಿ ಅಧಿವೇಶವನ್ನು ಕರೆದಿದೆ. ಬಡವರು ಬದುಕನ್ನು ಕಂಡುಕೊಂಡಿದ್ದಂತಹ ಉದ್ಯೋಗ ಖಾತರಿ ಯೋಜನೆಯನ್ನು ಮೂಲೆಗುಂಪಾಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ಸಂವಿಧಾನಬದ್ಧವಾಗಿ ಜಾರಿಗೆ ತಂದಿರುವ ಕಾಂಗ್ರೆಸ್ ನ ಜನವರ ಯೋಜನೆಯನ್ನು ಬೀದಿ ಪಾಲು ಮಾಡುವುದೇ ಬಿಜೆಪಿ ಉದ್ದೇಶ.
ಬಿಜೆಪಿಗೆ ಜನವರ ಕಾಳಜಿಯಿಲ್ಲ, ಸಾಮಾಜಿಕ ಬದ್ದತೆಯಿಲ್ಲ. ಬರೀ ದ್ವೇಷದ ರಾಜಕೀಯ ಎಂದು ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ಹೇಳಿದರು.ಕೇಂದ್ರದ ಯೋಜನೆಗೆ ಗಾಂಧಿ ಕನ್ನಡಕ ಬೇಕು, ಅವರ ಹೆಸರು ಬೇಡ್ತಾ-ಗರಂ ಆದ ಐವನ್ ಡಿಸೋಜಾ
ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೇಂದ್ರ ಸರ್ಕಾರ ಈ ಉದ್ಯೋಗ ಖಾತರಿ ಯೋಜನೆಯನ್ನು ನಮಾಪ್ತಿಗೊಳಿಸುವ ಕೆಲಸ ಮಾಡುತ್ತಿದೆ. ಇದನ್ನು ವಿರೋಧಿಸಿ ಕಾಂಗ್ರೆಸ್ ಸರ್ಕಾರ ಈ ಕಾಯ್ದೆ ಮೊದಲು ಹೇಗೆ ಇತ್ತೋ ಹಾಗೇ ಇರಬೇಕು. ಉದ್ಯೋಗ ಖಾತರಿ ಯೋಜನೆ ಮೂಲಕ ಪ್ರತೀ ಪಂಚಾಯತ್ ತನ್ನ ವ್ಯಾಪ್ತಿಯಲ್ಲಿ ಕೋಟ್ಯಾಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿತ್ತು. ಇದರಿಂದ ಗ್ರಾಮದ ಪ್ರಗತಿ ಕುಂಠಿತವಾಗುತ್ತದೆ. ಅಭಿವೃದ್ಧಿಗೆ ಇದು ಕೊಡಲಿಯೇಟು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಳಿದೆಲ್ಲಾ ಕೇಂದ್ರದ ಯೋಜನೆಗೆ ನಿಮಗೆ ಮಹಾತ್ಮಾ ಗಾಂಧಿ ಕನ್ನಡಕ ಬೇಕು. ಮಹಾತ್ಮ ಗಾಂಧಿ ಬೇಡ್ವಾ.. ನೀವು ಬೇಕಾದ್ರೆ ನಾಥೋರಾಮ್ ಗೋಡ್ಸ್ ಹೆಸರಿಡಿ ವಿ ಡೋಂಟ್ ಮೈಂಡ್. ಬಟ್ ನಮಗೆ ನೀವು ತೆಗೆದ ಕಾನೂನು ಮತ್ತೆ ಜಾರಿಗೆ ಬರಲೇ ಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನ ಇತರ ಮುಖಂಡರು ಉಪಸ್ಥಿತರಿದ್ದರು. ಐವನ್ ಡಿಸೋಜಾ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿವಿಧ ಖಾಯಿಲೆಯಿಂದ ಬಳಲುವ 9 ಜನ ಅರ್ಜಿದಾರರಿಗೆ 4 ಲಕ್ಷದ 44 ಸಾವಿರ 25 ರೂ. ಪರಿಹಾರ ಧನದ ಬಿಡುಗಡೆ ಪತ್ರವನ್ನು ಹಸ್ತಾಂತರಿಸಿದರು.
