ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ್ಪಕ್ಕೆ ಬೆಲೆ ಏರಿಕೆ ; ಲೀಟರಿಗೆ 90 ರೂ. ಹೆಚ್ಚಳ, ರಾಜ್ಯ ಸರ್ಕಾರದಿಂದ ಗ್ರಾಹಕರಿಗೆ ‘ಬಿಸಿ ತುಪ್ಪ’ ಕೊಡುಗೆ
ಕೇಂದ್ರ ಸರ್ಕಾರವು ಜಿಎಸ್ ಟಿ ತೆರಿಗೆ ಇಳಿಕೆ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರವು ಕೆಎಂಎಫ್ ತುಪ್ಪದ ದರವನ್ನು ಏರಿಸಿದ್ದು ಇಳಿಕೆಯ ಖುಷಿ ಜನರಿಗೆ ತಲುಪುವ ಮೊದಲೇ ಬಿಸಿ ತಟ್ಟಿಸಿದೆ. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (KMF) ನಂದಿನಿ ತುಪ್ಪದ ದರವನ್ನು ಪ್ರತಿ ಲೀಟರ್‌ಗೆ 90 ರೂಪಾಯಿ ಏರಿಸಿದ್ದು ಭರ್ಜರಿ ಶಾಕ್ ನೀಡಿದೆ.

ಇತ್ತೀಚೆಗಷ್ಟೇ ಜಿಎಸ್‌ಟಿ ದರವನ್ನು ಕೇಂದ್ರ ಸರ್ಕಾರವು ಇಳಿಕೆ ಮಾಡಿತ್ತು. ಇದರಂತೆ ಕೆಎಂಎಫ್ ಹಾಲು ಉತ್ಪನ್ನಗಳ ದರವೂ ಇಳಿಕೆಯಾಗಿತ್ತು. ನಂದಿನಿ ತುಪ್ಪದ ಬೆಲೆ 40 ರೂಪಾಯಿ ಇಳಿಕೆಯಾಗಿತ್ತು. ಆದರೆ, ಈಗಿನ ದರ ಏರಿಕೆಯು ಗ್ರಾಹಕರಿಗೆ ಬಿಸಿ ತುಪ್ಪವಾಗಿಸಿದೆ. ಇಂದಿನಿಂದಲೇ ನೂತನ ದರ ಜಾರಿಗೆ ಬರಲಿದೆ ಎಂದು ಕೆಎಂಎಫ್ ತಿಳಿಸಿದೆ.
ನಂದಿನಿ ತುಪ್ಪದ ಬೆಲೆ
ಈ ಹಿಂದೆ ಒಂದು ಕೆಜಿ ತುಪ್ಪಕ್ಕೆ 610 ರೂ. ಇತ್ತು, ಸದ್ಯ 90 ರೂ. ಏರಿಕೆಯಿಂದ 700 ರೂ.ಗೆ ಏರಿಕೆಯಾಗಿದೆ. ಜಿಎಸ್‌ಟಿ ಸುಧಾರಣೆ ಬಳಿಕ 40 ರೂಪಾಯಿ ಇಳಿಕೆ ಮಾಡಲಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ದರ ಏರಿಕೆ ಹಿನ್ನೆಲೆ ದಿಢೀರ್ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಕೆಎಂಎಫ್ ಸಮಜಾಯಿಷಿ ನೀಡಿದೆ.
ನಂದಿನಿ ತುಪ್ಪದ ಹೊಸ ದರ ಪಟ್ಟಿ
50 ಎಂಎಲ್ ತುಪ್ಪ – ರೂ. 47
100 ಎಂಎಲ್ ತುಪ್ಪ – ರೂ.75
200 ລລ – 155-165
500 ৯০৯-350-360
1 30 (1000 ৯০৯) – 700-720