Home Mangalorean News Kannada News ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೊಂಕಣಿ ಸಾಹಿತಿ ಎಚ್‌.ಎಂ. ಪೆರ್ನಾಲ್‌ಗೆ ಅಭಿನಂದನಾ ಸಮಾರಂಭ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೊಂಕಣಿ ಸಾಹಿತಿ ಎಚ್‌.ಎಂ. ಪೆರ್ನಾಲ್‌ಗೆ ಅಭಿನಂದನಾ ಸಮಾರಂಭ

Spread the love

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೊಂಕಣಿ ಸಾಹಿತಿ ಎಚ್‌.ಎಂ. ಪೆರ್ನಾಲ್‌ಗೆ ಅಭಿನಂದನಾ ಸಮಾರಂಭ

ಮಂಗಳೂರು: 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಎಚ್.ಎಂ. ಪೆರ್ನಾಲ್ ಅವರಿಗೆ ಅಭಿನಂದನಾ ಸಮಾರಂಭವು ಮೇ 15, ಶುಕ್ರವಾರ ನಗರದ ಟೌನ್ ಹಾಲ್ ನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಅಭಿನಂದನಾ ಸಮಿತಿಯ ಸಂಚಾಲಕರಾದ ಮೆಲ್ವಿನ್ ರೊಡ್ರಿಗಸ್ ಅವರ ನೇತೃತ್ವದಲ್ಲಿ ಬಹಳ ಆಯೋಜಿಸಲಾಗಿದೆ.

ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿರುವ ಆಯೋಜಕರು, ಅನಿವಾಸಿ ಉದ್ಯಮಿ ಮೈಕಲ್ ಡಿಸೋಜಾ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಖ್ಯಾತ ಕನ್ನಡ ಕವಿ ಮತ್ತು ಸಾಹಿತಿ ಜಯಂತ್ ಕಾಯ್ಕಿಣಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಸಂಜೆ 5.30ಕ್ಕೆ ಕಾರ್ಯಕ್ರಮವು ಆರಂಭವಾಗಲಿದ್ದು, 5:45ಕ್ಕೆ ಉಸ್ತಾದ್ ರಫೀಕ್ ಖಾನ್ ಮತ್ತು ಅವರ ಸಂಗಾತಿಗಳಿಂದ ‘ಸಿತಾರ್ ಪ್ಯೂಷನ್’ ಎಂಬ ವಿಶಿಷ್ಟ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 6:30ಕ್ಕೆ ಎಡ್ಡಿ ಸಿಕೇ ‘ ಮತ್ತು ಮುಹಮ್ಮದ್ ಮುಆದ್ ಜಿ.ಎಂ. ಅವರಿಂದ ಎಚ್.ಎಂ. ಪೆರ್ನಾಲ್ ಅವರ ಕವಿತೆಗಳ ಸಾದರೀಕರಣದ ಮೂಲಕ ಕವಿತಾ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸಂಜೆ 7:00ಕ್ಕೆ ‘ಜಿವಿತಾಚೊ, ಸಾಹಿತ್ಯಾಚೊ ಸಂಭ್ರಮ್’ ಅಂಗವಾಗಿ ಶಕುಂತಳಾ ಆರ್. ಕಿಣಿ ಮತ್ತು ವಿಲ್ಸನ್ ಕಟೀಲ್ ಅವರು ಎಚ್.ಎಂ. ಅವರೊಂದಿಗೆ ವಿಶೇಷ ಸಂವಾದ ನಡೆಸಲಿದ್ದಾರೆ. ಸಮಾರಂಭದ ಪ್ರಮುಖ ಘಟ್ಟವಾದ ‘ಅಭಿನಂದನ್ ಸಂಭ್ರಮ್’ ಸಂಜೆ 7:30ಕ್ಕೆ ಶುರುವಾಗಲಿದ್ದು, ಟಾಯ್ಸಸ್ ನೊರೊನ್ಹಾ ಅವರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಎಮ್‌ಡಿವಿಕೆ-ಎಚ್ಚೆಮ್

ಅಭಿನಂದನ್ ಸಮಿತಿ ಹಾಗೂ ವಿವಿಧ ಕೊಂಕಣಿ ಸಂಘ-ಸಂಸ್ಥೆಗಳ ವತಿಯಿಂದ ಪೆರ್ನಾಲ್ ಅವರಿಗೆ ಸನ್ಮಾನ ನಡೆಯಲಿದೆ.ಕಾರ್ಯಕ್ರಮದಲ್ಲಿ ಎಚ್.ಎಂ. ಪೆರ್ನಾಲ್, ಜಯಂತ್ ಕಾಯ್ಕಿಣಿ ಮತ್ತು ಮೈಕಲ್ ಡಿಸೋಜಾ ಅವರು ಮಾತನಾಡಲಿದ್ದಾರೆ. ಕಾರ್ಯಕ್ರಮವು ರಾತ್ರಿ 8:30 ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದ್ದಾರೆ.ಪತ್ರಿಕಾ ಗೋಷ್ಠಿಯಲ್ಲಿ ಮೆಲ್ವಿನ್ ರೊಡ್ರಿಗಸ್, ಎಡ್ಡಿ ಸಿಕ್ವೆರಾ ಮತ್ತು ಟಾಯ್ಸಸ್ ನೊರೊನ್ಹಾ ಉಪಸ್ಥಿತರಿದ್ದರು.


Spread the love

Exit mobile version