Home Mangalorean News Kannada News ಕೊಂಕಣಿ ಯುವ ಮಹೋತ್ಸವದಲ್ಲಿ ಯುವ ಪ್ರತಿಭೆಗಳ ಅನಾವರಣ

ಕೊಂಕಣಿ ಯುವ ಮಹೋತ್ಸವದಲ್ಲಿ ಯುವ ಪ್ರತಿಭೆಗಳ ಅನಾವರಣ

Spread the love

ಮಂಗಳೂರು: ಕೊಂಕಣಿ ಭಾಷೆಯ ಅಭಿವೃದ್ಧಿಗಾಗಿ ಯುವಜನತೆ ದುಡಿಯಬೇಕು. ಭಾಷೆಯನ್ನು ಮಾತನಾಡಲು ಸರಕಾರ ದುಡ್ಡು ನೀಡಬೇಕಾಗಿಲ್ಲ. ಯುವಜನತೆ ಕೀಳರಿಮೆ ಬಿಟ್ಟು ಮಾತೃಭಾಷೆಯಲ್ಲಿ ಮಾತನಾಡಬೇಕು ಎಂದು ವಿಧಾನ ಪರಿಷದ್ ಸದಸ್ಯ ಐವನ್ ಡಿಸೋಜ ಕರೆ ಕೊಟ್ಟರು. ಅವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಸಂಘಸಂಸ್ಥೆಗಳ ಸಹಕಾರದಲ್ಲಿ ಆಗಸ್ಟ್ 21 ರಂದು ಕಲಾಂಗಣದಲ್ಲಿ ಆಯೋಜಿಸಿದ ಕೊಂಕಣಿ ಯುವ ಮಹೋತ್ಸವದ ಸಮಾರೋಪ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಇದೇ ವೇಳೆ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅವಿಭಜಿತ ಜಿಲ್ಲೆಗಳಿಂದ ಪದವಿ ಪೂರ್ವ ಮತ್ತು ಪದವಿ ಕಾಲೇಜು ಹಂತಗಳ ಸುಮಾರು 750 ಕೊಂಕಣಿ ಯುವ ಜನತೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

01-KYM-Procession

ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಪ್ರಸ್ತಾವನೆ ನೀಡಿ ಯುವಜನತೆ ಕೊಂಕಣಿಯ ರಾಯಭಾರಿಗಳಾಗಬೇಕು. ಭಾಷೆ ಉಳಿಸುವ ಬೆಳೆಸುವ ಮಹತ್ವದ ಜವಾಬ್ದಾರಿ ಅವರ ಕೈಯಲ್ಲಿದೆ. ನಾವು ಕೊಂಕಣಿ ಮಾತೃಭಾಷಿಕರೆಂಬ ಹೆಮ್ಮೆ ಬೆಳೆಸಬೇಕೆಂದು ಯುವಜನತೆಗೆ ಕರೆ ಕೊಟ್ಟರು. ವೇದಿಕೆಯಲ್ಲಿ ಉದ್ಯಮಿ ಜೊಸೆಫ್ ಮತಾಯಸ್, ಕಾರ್ಯಕ್ರಮ ಸಮನ್ವಯಕಾರ ಲುವಿ ಪಿಂಟೊ, ಅಕಾಡೆಮಿ ರಿಜಿಸ್ಟ್ರಾರ್ ಡಾ. ಬಿ. ದೇವದಾಸ ಪೈ ಮತ್ತು ಎರಿಕ್ ಒಝೇರಿಯೊ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಮುನ್ನಾದಿನ ನಿಧನರಾದ ಅಕಾಡೆಮಿಯ ಮಾಜಿ ಅಧ್ಯಕ್ಷ ವಂ ಮೊನ್ಸಿ ಅಲೆಕ್ಸಾಂಡರ್ ಡಿಸೋಜ ಇವರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು.

ಫ್ರಿವಿಟಾ ಡಿಸೋಜ ಮತ್ತು ಎಂ. ಆರ್. ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಸ್ಟ್ಯಾನಿ ಆಲ್ವಾರಿಸ್ ವಂದಿಸಿದರು.

ಬೆಳಗಿನ ಜಾವ ಕೊಂಕಣಿ ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಕೊಂಕಣಿ ಧ್ವಜ ಅರಳಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಗಾಯನ, ನೃತ್ಯ, ಕಿರು ನಾಟಕ, ಕವಿತಾ ರಚನೆ ಮತ್ತು ವಾಚನ ಇತ್ಯಾದಿ ವಿಭಾಗಗಳಲ್ಲಿ ಯುವಜನರು ಪ್ರದರ್ಶನ ನೀಡಿದರು.  ಅರುಣ್ ಡಿಸೋಜ, ರೋಶನ್ ಕ್ಯಾಸ್ತೆಲಿನೊ, ವಿದ್ಯಾ ಕಾಮತ್, ಪ್ರವೀಣ್ ಪಿಂಟೊ, ಡೆನಿಸ್ ಡಿಸಿಲ್ವಾ, ಲಾರೆನ್ಸ್ ಡಿಸೋಜ, ಪ್ರೀತಿ ಲೋಪಿಸ್ ಮತ್ತಿತರರು ಸಹಕರಿಸಿದರು.

ಫಲಿತಾಂಶ:

ಪಿಯುಸಿ ವಿಭಾಗ:

ಪಂಗಡ ನೃತ್ಯ: ಪ್ರಥಮ – ಪಾದುವಾ, ದ್ವೀತೀಯ – ಸಂತ ಎಲೋಶಿಯಸ್, ತೃತೀಯ – ಶಾರದಾ ಮತ್ತು ಮಿಲಾಗ್ರಿಸ್

ಪಂಗಡ ಗಾಯನ: ಪ್ರಥಮ – ಪಾದುವಾ, ದ್ವೀತೀಯ – ಸಂತ ಆಗ್ನೆಸ್, ತೃತೀಯ – ಸಂತ ಎಲೋಶಿಯಸ್

ಕಿರು ನಾಟಕ: ಪ್ರಥಮ – ಪಾದುವಾ, ದ್ವೀತೀಯ –  ಸಂತ ಎಲೋಶಿಯಸ್  ತೃತೀಯ – ಸಂತ ಆಗ್ನೆಸ್

ಕಾರ್ಯಕ್ರಮ ನಿರ್ವಹಣೆ: ಪ್ರಥಮ – ಸಂತ ಎಲೋಶಿಯಸ್, ದ್ವೀತೀಯ – ಸಂತ ಆಗ್ನೆಸ್    ತೃತೀಯ – ಪೊಂಪೈ

ಸಮಗ್ರ ಚಾಂಪಿಯನ್: ಪಾದುವಾ ಪಿಯು ಕಾಲೇಜು ಮಂಗಳೂರು

ಪದವಿ ವಿಭಾಗ:

ಪಂಗಡ ನೃತ್ಯ: ಪ್ರಥಮ – ಸಂತ ಜೋಸೆಫ್ ಇಂಜಿನಿಯರಿಂಗ್ ವಾಮಂಜೂರು, ದ್ವೀತೀಯ – ಪಾದುವಾ, ತೃತೀಯ – ಸಂತ ಆಗ್ನೆಸ್

ಪಂಗಡ ಗಾಯನ: ಪ್ರಥಮ – ಸಂತ ಆಗ್ನೆಸ್, ದ್ವೀತೀಯ – ಪಾದುವಾ, ತೃತೀಯ – ಸಂತ ಜೋಸೆಫ್ ಇಂಜಿನಿಯರಿಂಗ್ ವಾಮಂಜೂರು

ಕಿರು ನಾಟಕ: ಪ್ರಥಮ – ಪಾದುವಾ, ದ್ವೀತೀಯ – ರೊಸಾರಿಯೊ,  ತೃತೀಯ – ಸಂತ ಆಗ್ನೆಸ್

ಕಾರ್ಯಕ್ರಮ ನಿರ್ವಹಣೆ: ಪ್ರಥಮ – ಸಂತ ಆಗ್ನೆಸ್, ದ್ವೀತೀಯ – ಸಂತ ಜೊಸೆಫ್ ವಾಮಂಜೂರು, ಪಾದುವಾ ಮತ್ತು ಸೆಕ್ರೆಡ್ ಹಾರ್ಟ್ ಮಡಂತ್ಯಾರು,  ತೃತೀಯ – ರೊಸಾರಿಯೊ ಮತ್ತು ಕಾರ್ಮೆಲ್ ಮೊಡಂಕಾಪು,

ಸಮಗ್ರ ಚಾಂಪಿಯನ್: ಸಂತ ಆಗ್ನೆಸ್ ಕಾಲೇಜು, ಮಂಗಳೂರು

15-25 ಸಾರ್ವಜನಿಕ ವಿಭಾಗ:

ಗಾಯನ (ಸ್ತ್ರೀ)

ಪ್ರಥಮ – ಸೋನಲ್ ಮೊಂತೇರೊ, ದ್ವೀತೀಯ – ದಿಶಾ ಪಸನ್ನ, ತೃತೀಯ – ಸೆನೆಟ್ ಡಿಕುನ್ಹಾ

ಗಾಯನ (ಪುರುಷ)

ಪ್ರಥಮ – ವಿಜೇತ್ ಉಲ್ಲಾಳ್, ದ್ವೀತೀಯ – ರೇಯ್ನಲ್ ಸಿಕ್ವೇರಾ, ತೃತೀಯ – ಜೇಸನ್ ಸಿಕ್ವೇರಾ

ಕವಿತಾ ರಚನೆ:

ಪ್ರಥಮ – ಜೈಸನ್ ಸಿಕ್ವೇರಾ ದ್ವೀತೀಯ – ಫ್ರಿವಿಟಾ ಡಿಸೋಜ ತೃತೀಯ – ಓಶಿನ್ ಥಿಯೊಡೊರ್


Spread the love

Exit mobile version