Home Mangalorean News Kannada News ಕೊಂಚಾಡಿ ಬಿಲ್ಡರ್‌ ಮನೆಯಲ್ಲಿ ಕಳ್ಳತನ ಇಬ್ಬರ ಬಂಧನ

ಕೊಂಚಾಡಿ ಬಿಲ್ಡರ್‌ ಮನೆಯಲ್ಲಿ ಕಳ್ಳತನ ಇಬ್ಬರ ಬಂಧನ

Spread the love

ಕೊಂಚಾಡಿ ಬಿಲ್ಡರ್‌ ಮನೆಯಲ್ಲಿ ಕಳ್ಳತನ ಇಬ್ಬರ ಬಂಧನ

ಮಂಗಳೂರು: ದೆರೆಬೈಲ್ ಸಮೀಪದ ಕೊಂಚಡಿಯಲ್ಲಿ ಕಳೆದ ಶನಿವಾರ ಬಿಲ್ಡರ್ ನರಸಿಂಹ ರಾವ್ ಅವರ ಮನೆಯಲ್ಲಿ ನಡೆದ ಕಳ್ಳತನ ಆರೋಪಿಗಳನ್ನು ಪೋಲಿಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಧಾರವಾಡ ಜಿಲ್ಲೆ ನವಲಗುಂದದ ಅಂಬಣ್ಣ ಬಸಪ್ಪ ಜಾಡರ್ (25) ರಶೀದಾ (23) ಎಂದು ಗುರುತಿಸಲಾಗಿದೆ.

image006konchady-burglary-case-20160708-006

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿ ನಗರ ಪೋಲಿಸ್ ಆಯುಕ್ತ ಚಂದ್ರಶೇಖರ್ ಅವರು ಜುಲೈ 2 ರ ಸಂಜೆ 4.30 ರ ಸುಮಾರಿಗೆ ಮಂಗಳೂರು ನಗರದ ದೆರೆಬೈಲ್ ಕೊಂಚಾಡಿ ನಾಗಕನ್ನಿಕಾ ದೇವಸ್ಥಾನ ರಸ್ತೆಯ ಬಳಿ ಇರುವ ಬಿಲ್ಟರ್ ಪಿ ನರಸಿಂಹ ರಾವ್ ಅವರ ಮನೆಯಲ್ಲಿ ಮನೆಯವರೆಲ್ಲರೂ ಹೊರಗೆ ಹೋಗಿ ಮನೆಗೆ ವಾಪಾಸು ಬಂದಾಗ ಮನೆಯ ಕಪಾಟಿನಲ್ಲಿದ್ದ ಸುಮಾರು 18 ಲಕ್ಷ ನಗದು ಹಣವನ್ನು ಹಾಗೂ 3 ಮೊಬೈಲ್ ಸೆಟ್ ಕಳವಾಗಿರುವ ಬಗ್ಗೆ ಕಾವೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಫೋಟೆಜ್ ಗಮನಿಸಿದಾಗ ಮನೆಯ ಸೆಕ್ಯೂರಿಟಿ ಗಾರ್ಡ್ ಮತ್ತು ಮನೆಯ ಕೆಲಸದಾಕೆಯು ಕಳ್ಳತನವನ್ನು ಮಾಡಿರುವ ಸ್ಪಷ್ಟ ಮಾಹಿತಿಯಂತೆ ಎಸಿಪಿ ಉದಯ್ ನಾಯಕ್ ಮತ್ತು ಸಿಬಂದಿಗಳ ತಂಡ ತನಿಖೆ ಆರಂಭಿಸಿದ್ದರು.

ಜುಲೈ 8 ರಂದು ಆರೋಪಿಗಳು ಕುಳಾಯಿಯ ಕಡೆ ಬಾಡಿಗೆ ಮನೆಯನ್ನು ಹುಡುಕಲು ಬರುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಬೆಳಿಗ್ಗೆ 11.30 ರ ಸುಮಾರಿಗೆ ಅಂಬಣ್ಣ ಬಸಪ್ಪ ಜಾಡರ್ (25) ರಶೀದಾ (23) ಇವರುಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಆರೋಪಿಗಳು ಕೃತ್ಯವೆಸಗಿದ ಬಗ್ಗೆ ಮಾಹಿತಿ ನೀಡಿದ್ದು, ಸದ್ರಿ ಆರೋಪಿಗಳಿಂದ ರೂ 17,30,000 ನಗದು ಹಣ,  ಕಳ್ಳತನ ಮಾಡಿದ ಹಣದಿಂದ ಖರೀದಿಸಿದ ಬೆಳ್ಳೀ ಹಾಗೂ ಚಿನ್ನದ ಒಡವೆಗಳು ರೂ 9700 ನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪೋಲಿಸ್ ನಿರೀಕ್ಷಕರಾದ ಎಂ ಎ ನಟರಾಜ್, ಪಿಎಸ್ಐ ಉಮೇಶ್ ಕುಮಾರ್, ಎಂ. ಎನ್, ಎಎಸ್ ಐ ವನಜಾಕ್ಷಿ, ಸಿಬಂದಿಗಳಾದ ವಿಶ್ವನಾಥ, ರಾಮಣ್ಣ ಶೆಟ್ಟಿ, ಬಾಲಕೃಷ್ಣ, ರಾಜಶೇಖರ ಗೌಡ, ಗಣೇಶ ಕುಮಾರ್, ಯಶವಂತ ರೈ ಅವರು ಪತ್ತೆ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪ್ರತಿಯೊಬ್ಬ ನಾಗರಿಕರು ಕೆಲಸದವರನ್ನು ಸೇರಿಸಿಕೊಳ್ಳುವ ಮುನ್ನ ಅವರ ಪೂರ್ವಪರಗಳನ್ನು ತಿಳಿದುಕೊಳ್ಳಬೇಕು, ಹಾಗೂ ಅವರಿಂದ ಅಧೀಕೃತ ಫೋಟೊ ಐಡಿ ಕಾರ್ಡು ಹಾಗೂ ಯಾವುದೇ ಕೇಸುಗಳೂ ಇಲ್ಲವೆಂಬ ಬಗ್ಗೆ ಪೋಲಿಸ್ ದಾಖಲೆ ಪಡೆದುಕೊಳ್ಳಬೇಕು. ಸಾರ್ವಜನಿಕರು ಮನೆಗಳಿಗೆ ಹಾಗೂ ವಾಣಿಜ್ಯ ಸಂಕೀರ್ಣಗಳಿಗೆ ಸಿಸಿ ಕ್ಯಾಮರಗಳನ್ನು ಅಳವಡಿಸುವಂತೆ ಪೋಲಿಸ್ ಆಯುಕ್ತರು ಮನವಿ ಮಾಡಿದರು.


Spread the love

Exit mobile version