ಕೊರೋನಾ ಎರಡನೇ ಅಲೆ

Spread the love

ಕೊರೋನಾ ಎರಡನೇ ಅಲೆ

ಜನರು ಹೆದರಿ ಅಡಗಿದರು ಮನೆಯೊಳಗೆ
ಕೊರೋನಾದ ಎರಡನೇ ಅಲೆಯ ಆರ್ಭಟಕ್ಕೆ
ಸರಕಾರ ಹೇರಿತು ಲಾಕ್ ಡೌನ್ 14 ದಿನಕ್ಕೆ
ಕಡಿವಾಣ ಹಾಕಲು ಆ ಪುಟ್ಟ ವೈರಸ್ ಗೆ

ಕೊರೋನಾ ಮೆರೆಯಿತು ಅಟ್ಟಹಾಸ
ಹೊಕ್ಕಿತು ಮೂಗಲ್ಲಿ ಹಿರಿಯ ಕಿರಿಯರ
ಓಡಾಟ ಶುರುವಾಯಿತು ಆಸ್ಪತ್ರೆಗೆ
ಹುಡುಕಿ ಪ್ರಾಣವಾಯು, ಹಾಸಿಗೆ

ಆಸ್ಪತ್ರೆಯಲ್ಲಿ ಕೊರತೆ ಹಾಸಿಗೆಯ
ಕೆಲವರ ಪ್ರಾಣ ಹಾರಿ ಹೋಯಿತು ಮಧ್ಯೆ ದಾರಿಯ
ನರಳಾಟ ಹೊರಳಾಟ ಉಳಿಸಲು ಜೀವ ತನ್ನವರ
ದುಃಖದಲ್ಲಿ ಮುಳುಗಿತು ಜಗವೆಂಬ ಕುಟುಂಬ

ಸಾಲು ಸಾಲು ಹೆಣಗಳು ಕಾದವು ಮಸಣದಲಿ
ವಿಲೀನ ವಾಗಲು ದೇಹ ಪಂಚಭೂತಗಳಲಿ
ಹೆಣ ಸುಡಲು ನಿಲ್ಲಬೇಕಾಯ್ತು ಸರತಿಯಲ್ಲಿ
ಗಂಗೆಯಲೂ ಹೆಣಗಳು ಬಂದವು ತೇಲಿ.

ರಾಜಕಾರಣಿಗಳು ಮಗ್ನರು ಪ್ರಚಾರದಲ್ಲಿ
ಗೆಲ್ಲಬೇಕೆಂದು ಎಲ್ಲಾ ರಾಜ್ಯಗಳಲ್ಲಿ
ಕೊರೋನಾಕ್ಕೆ ಸಿಕ್ಕಿತು ಒಳ್ಳೆಯ ಅವಕಾಶ
ಎರಡನೇ ಅಲೆ ಎಬ್ಬಿಸಿ ಆಯಿತು ಬಲಿಷ್ಠ

ಲಾಕ್ ಡೌನ್ ನಿಂದ ಆಗಿಲ್ಲ ಪ್ರಯೋಜನ
ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಕೊರೊನಾ
ವಿಶ್ವಗುರುವಾಗೊ ಕನಸು ನುಚ್ಚು ನೂರಾಗಿಸಿ
ತರಿಸುತ್ತಿದೆ ಯಾರೂ ಬಯಸದ ಮರಣ

ಕೊರೋನಾವನ್ನು ಲಘುವಾಗಿ ತೆಗೆದುಕೊಳ್ಳದಿರಿ
ಬಲಿಷ್ಠವಾಗಿ ಬೆಳೆದಿದೆ ಕೊರೋನಾ ಎರಡನೇ ಅಲೆಯಲಿ
ಕಂಡ ಕಂಡವರ ವಕ್ಕರಿಸಿ
ನೆಲಕಪ್ಪಳಿಸುತ್ತಿದೆ ಕ್ರೂರ ರೀತಿಯಲಿ.

     

ವಾಯ್ಲೆಟ್ ಪಿರೇರಾ

Also Read:


Spread the love

1 Comment

Comments are closed.