ಕೊವಿಡ್‌ ಗೆ 50 ಲಕ್ಷ ಜನ ಬಲಿ, ಆದ್ರೆ 100 ಕೋಟಿ ಡೋಸ್ ನೀಡಿದ್ದಕ್ಕೆ ಸಂಭ್ರಮಿಸುತ್ತಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ

Spread the love

 ಕೊವಿಡ್‌ ಗೆ 50 ಲಕ್ಷ ಜನ ಬಲಿ, ಆದ್ರೆ 100 ಕೋಟಿ ಡೋಸ್ ನೀಡಿದ್ದಕ್ಕೆ ಸಂಭ್ರಮಿಸುತ್ತಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ

ಹುಬ್ಬಳ್ಳಿ: ದೇಶದಲ್ಲಿ 50 ಲಕ್ಷ ಜನ ಕೊವಿಡ್‌ಗೆ ಬಲಿಯಾಗಿದ್ದಾರೆ. ಆದ್ರೆ 100 ಕೋಟಿ ಲಸಿಕೆ ಹಾಕಿದ್ದೀವಚಿ ಅಂತಾ ಬಿಜೆಪಿಯವರು ಸಂಭ್ರಮಿಸುತ್ತಿದ್ದಾರೆ. ಇದರಲ್ಲಿ 29 ಕೋಟಿ ಜನರು 2 ಡೋಸ್ ಪಡೆದಿದ್ದಾರೆ. 42 ಕೋಟಿ ಜನರು ಸಿಂಗಲ್ ಡೋಸ್ ಪಡೆದಿದ್ದಾರೆ. ಇದು ವಿಪರ್ಯಾಸ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕೊರೊನಾದಿಂದ ಸತ್ತವರ ಸಂಖ್ಯೆ ಎಷ್ಟು? ಆಕ್ಸಿಜನ್ ಬೆಡ್, ಔಷಧಿ ಕೊಡದೇ ಇರುವುದಕ್ಕೆ 50 ಲಕ್ಷ ಜನರು ಸತ್ತಿದ್ದಾರೆ. ರಾಜ್ಯದಲ್ಲಿ ನಾಲ್ಕು ಲಕ್ಷ ಜನರು ಮೃತಪಟ್ಟಿದ್ದಾರೆ. ಈಗ ಅತ್ಯವಸರದಲ್ಲಿ ಸಂಭ್ರಮಾಚರಣೆ ಮಾಡಿಕೊಳ್ತಿದೆ. ಖಾಲಿ ತಟ್ಟೆ ಬಡಿದು ಸಂಭ್ರಮಿಸ್ತಿರುವುದು ಹಾಸ್ಯಾಸ್ಪದ ಎಂದು ಸಿದ್ದರಾಮಯ್ಯ ಛೇಡಿಸಿದರು. ಯಾವ ಸಾಧನೆಗಾಗಿ ನೀವು ಸಂಭ್ರಮ ಮಾಡಿಕೊಳ್ತಿದ್ದೀರಿ? ‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ ಎಂದು ಟ್ವೀಟ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.


Spread the love

1 Comment

Comments are closed.