ಕೋವಿಡ್ ಲಸಿಕೆ ವಿಚಾರದಲ್ಲಿ ಚರ್ಚುಗಳ ವಿರುದ್ದ ಸಂಸದೆ ಶೋಭಾ ಹೇಳಿಕೆ – ಭಾರತೀಯ ಕ್ರೈಸ್ತ ಒಕ್ಕೂಟ ಖಂಡನೆ

Spread the love

ಕೋವಿಡ್ ಲಸಿಕೆ ವಿಚಾರದಲ್ಲಿ ಚರ್ಚುಗಳ ವಿರುದ್ದ ಸಂಸದೆ ಶೋಭಾ ಹೇಳಿಕೆ – ಭಾರತೀಯ ಕ್ರೈಸ್ತ ಒಕ್ಕೂಟ ಖಂಡನೆ

ಉಡುಪಿ: ವ್ಯಾಕ್ಸಿನೇಷನ್ ಹಾಕಬಾರದೆಂದು ಚರ್ಚುಗಳು ಪ್ರಚಾರ ಮಾಡುತ್ತಿವೆ ಎಂದು ಕ್ರೈಸ್ತರ ಮೇಲೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿರುವ ಶೋಭಾ ಕರಂದ್ಲಾಜೆ ಮಾಡಿರುವ ಸುಳ್ಳು ಆರೋಪವನ್ನು ಭಾರತೀಯ ಕ್ರೈಸ್ತ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

ಭಾರತದ ಯಾವುದೇ ಚರ್ಚುಗಳು ಕೂಡ ಕೋವಿಡ್ ಲಸಿಕೆ ವಿರೋಧವಾಗಿಲ್ಲ ಅಲ್ಲದೆ ಇತ್ತೀಚೆಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಧ್ಯಕ್ಷರು ಕೂಡ ಪ್ರತಿಯೊಬ್ಬರೂ ಕೂಡ ಲಸಿಕೆ ಪಡೆಯುವಂತೆ ಬಹಿರಂಗ ಹೇಳಿಕೆ ನೀಡಿದ್ದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಒರ್ವ ಜವಾಬ್ದಾರಿಯುತ ಸಂಸದೆಯಾಗಿ ಇಂತಹ ಸಮಯದಲ್ಲಿ ಕ್ರೈಸ್ತರ ಮೇಲೆ ಇಲ್ಲ ಸಲ್ಲದ ಸುಳ್ಳು ಆರೋಪವನ್ನು ಮಾಡುವುದು ಬಿಟ್ಟು ಜನರ ಆರೋಗ್ಯಕ್ಕೆ ಯಾವ ಅಗತ್ಯವಿದೆಯೋ ಅದರ ಕುರಿತು ಕೆಲಸ ಮಾಡಬೇಕು.

ಸಂಸದರು ಹೇಳುವ ಪ್ರಕಾರ ಪ್ರೊಟೆಸ್ಟೆಂಟ್ ಮತ್ತು ಪೆಂಥೆಕೋಸ್ಟಲ್ ಚರ್ಚುಗಳು ಸಹ ಸರಕಾರದ ನಿಯಮಗಳನ್ನು ಪಾಲಿಸಿ ಮತ್ತು ಲಸಿಕಾ ಅಭಿಯಾನದಲ್ಲಿ ತೊಡಗಿಸಿಕೊಳ್ಳಿ ಎಂದು ತಮ್ಮ ತಮ್ಮ ಸಭೆಯ ವ್ಯಾಪ್ತಿಗೆ ಬರುವ ಭಕ್ತಾದಿಗಳಿಗೆ ತಿಳಿರುತ್ತಾರೆ. ಸಂಸದೆಯಾಗಿ ಸರಿಯಾದ ಮಾಹಿತಿಯನ್ನು ಅರಿಯದೆ ಕ್ರೈಸ್ತ ಸಮುದಾಯದ ಮೇಲೆ ಅಪವಾದವನ್ನು ಮಾಡಿ ಸೌಹಾರ್ದತೆ ಕೆಡಿಸುವ ಕೆಲಸ ಮಾಡದಂತೆ ಒಕ್ಕೂಟ ಆಗ್ರಹಿಸುತ್ತದೆ. ಈಗಾಗಲೇ ಎಲ್ಲಾ ಧರ್ಮಪ್ರಾಂತ್ಯಗಳಲ್ಲಿ ಮತ್ತು ಸಭೆಗಳಲ್ಲಿ ಕೋವಿಡ್ ನಿಂದ ಸಮಸ್ಯೆಯಲ್ಲಿ ಇರುವ ಜನರ ನೆರವಿಗೆ ಕಾರ್ಯಯೋಜನೆ ಸಿದ್ದಪಡಿಸಿ ಕೆಲಸ ನಡೆಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಕೂಡ ನಮ್ಮ ಪ್ರಾರ್ಥನಾ ಮಂದಿರಗಳನ್ನು ಅಗತ್ಯವಿದ್ದರೆ ಕೋವಿಡ್ ಕೇರ್ ಸೆಂಟರ್ ಆಗಿ ರೂಪಿಸಲು ಕೂಡ ಮುಕ್ತವಾಗಿ ಅವಕಾಶ ನೀಡಲಿದ್ದೇವೆ. ಇಂತಹ ಸಂದೀಗ್ಧ ಪರಿಸ್ಥೀತಿಯಲ್ಲಿ ಜಾತಿ ಮತವನ್ನು ನೋಡದೆ ಎಲ್ಲರ ಸೇವೆಗೆ ಕ್ರೈಸ್ತ ಸಮುದಾಯ ಸಿದ್ದವಾಗಿದೆ.

ಜನರ ಪ್ರಾಣ ಹೋಗುವ ಸಮಯದಲ್ಲಿ ಜನರಿಗೆ ಬೇಕ್ಕಾದ ವ್ಯಾಕ್ಸಿನ್, ಆಕ್ಸಿಜನ್, ಹಾಸ್ಪಿಟಲ್ ವ್ಯವಸ್ಥೆಯ ಕಡೆಗೆ ಗಮನಕೊಟ್ಟು ಜನರಿಗೆ ಸಹಾಯ ಮಾಡಬೇಕೆಂದು ಒಕ್ಕೂಟದ ಅಧ್ಯಕ್ಷರಾದ ಪ್ರಶಾಂತ್ ಜತ್ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .


Spread the love

1 Comment

  1. ಇಷ್ಟು ದಿನ ಮೂಲೆ ಸೇರಿಕೊಂಡಿದ್ದರು, ಹೇಗಾದರೂ ಸುದ್ದಿಗೆ ಬರಬೇಕಲ್ಲಾ ಇಂತವರಿಗೆ ಸಹಾಯಕ್ಕೆ ಬರೋದು ಇಂಥಾ ಆಧಾರವಿಲ್ಲದ ವಿಚಾರಗಳೇ

Comments are closed.