
ಕೋವಿಡ್ ವಾರ್ ರೂಂ ದಾಳಿ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯರ ವರ್ತನೆಗೆ ಕಾಪು ಬ್ಲಾಕ್ ಅಲ್ಪಸಂಖ್ಯಾತ ವಿಭಾಗ ಖಂಡನೆ
ಕಾಪು: ಎಂ. ಪಿ. ತೆಜಸ್ವಿ ಸೂರ್ಯ ಬಿಬಿಎಂಪಿ ಕೊವಿಡ್ ವಾರ್ ರೂಂ ದಾಳಿ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧ ಪಡದ ಅಲ್ಪ ಸಂಖ್ಯಾತ ಸಿಬಂಧಿಗಳ ಹೆಸರನ್ನು ಉಲ್ಲೇಖಿಸಿ ಮತೀಯ ಬಣ್ಣ ಕೊಡುವ ಪ್ರಯತ್ನಕ್ಕೆ ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್ ಖಂಡಿಸಿದ್ದಾರೆ.
ಬೆಂಗಳೂರಿನ ಸಂಸದ ತೆಜಸ್ವಿ ಸೂರ್ಯ ತಮ್ಮದೇ ಸರಕಾರದ ಬೆಡ್ ಬ್ಲಾಕಿಂಗ್ ಹಗರಣವನ್ನು ಬಯಲಿಗೆಳೆಯುವ ಸಂದರ್ಭದಲ್ಲಿ ರಾಜ್ಯ ಸರಕಾರ ಹಾಗೂ ಬಿಬಿಎಂಪಿಯ ಬೇಜವಾಬ್ದಾರಿ ಹಾಗೂ ವೈಫಲ್ಯವನ್ನು ಮರೆಮಾಚಲು ಕೊವಿಡ್ ವಾರ್ ರೂಂ ನ 214 ಸಿಬಂಧಿಗಳ ಪೈಕಿ ಕೇವಲ ಅಲ್ಪ ಸಂಖ್ಯಾತರ 17 ಜನರ ವಾರ್ ರೂಂ ಸಿಬಂಧಿಗಳ ಹೆಸರನ್ನು ಉಲ್ಲೇಖಿಸಿ ಮತೀಯ ಬಣ್ಣ ಕೊಡಲು ಬಹುದೊಡ್ಡ ಷಡ್ಯಂತ್ರ ರೂಪಿಸಿ ಮುಖಭಂಗ ಅನುಭವಿಸಿದ್ದಾರೆ.
ನಿಜವಾಗಿಯೂ 214 ವಾರ್ ರೂಂ ಸಿಬಂದಿಗಳೇನಿದ್ದಾರೆ ಅವರೆಲ್ಲರೂ ಹೊರಗುತ್ತಿಗೆ ಎಜೆನ್ಸಿ ಮುಖಾಂತರ ಸರಕಾರ ಹಾಗೂ ಬಿಬಿಎಂಪಿ ಟೆಂಡರ್ ಕರೆದು ಇವರೇ ನೇಮಿಸಿದ ಕ್ರಿಸ್ಟಲ್ ಇನ್ಫೋಸಿಸ್ಟಂ ಸರ್ವಿಸಸ್ ಎಂಬ ಸಂಸ್ಥೆ ಮಖಾಂತರ ನೇಮಿಸಿರುವ ಸಿಬಂಧಿಗಳು. ನೀವು ವಾರ್ ರೂಂ ಗೆ ದಾಳಿನಡೆಸಿದಾಗ ಮೇಲ್ವಿಚಾರಕರಲ್ಲಿ ಈ 17 ಮಂದಿ ಹೆಸರು ಹೇಳಿ ಇವರನ್ನು ನೀವು ಬಿಬಿಎಂಪಿ ವಾರ್ ರೂಂ ಗೆ ಯಾಕೆ ನೇಮಕಗೊಳಿಸಿದ್ದೀರಿ. ಇದು ಏನು ಮದ್ರಸವಾ ಅಥವಾ ವರ ಬೋರ್ಡ ಕಮೀಟಿಯಾ ಎಂದು ನೀವು ಕೇಳುತ್ತೀರಲ್ಲ ಮಾನ್ಯ ಸಂಸದರೇ.. ಇಂದು ದೇಶದಾದ್ಯಂತ ಎಷ್ಟು ಮದರಸಗಳು ಮಸೀದಿಗಳು ಕೋವಿಡ್ ಸೆಂಟರ್ ಆಗಿ ( ಗೊತ್ತೇ? – ಕೋವಿಡ್, ಆಸ್ಪತ್ರೆಗಳಾಗಿ ಮಾರ್ಪಟ್ಟಿದೆ ನಿಮಗೆ ತನ್ನ ಸ್ವಂತ ಮನೆಯವರು ಕೋವಿಡ್ನಲ್ಲಿ ಮೃತಪಟ್ಟ ಸಂದರ್ಭದಲ್ಲಿ ಶವವನ್ನು ಮುಟ್ಟದೆ ಶವಸಂಸ್ಕಾರವನ್ನು ನಿರಾಕರಿಸಿದ ಸಂದರ್ಭದಲ್ಲಿ ಮುಸ್ಲಿಂ ಸಂಘಟನೆಗಳು ಯಾವುದೇ ಜಾತಿಮತ ನೋಡದೆ ಅವರವರ ಜಾತಿಗೆ ಅನುಗುಣವಾಗಿ ಶವ ಸಂಸ್ಕಾರ ಮಾಡಿರುತ್ತಾರೆ. ಹೀಗೆ ಎಲ್ಲಾ ಜಾತಿ ಧರ್ಮ ಮರೆತು ನಾವೆಲ್ಲರೂ ಭಾರತೀಯರೆಂದು ಕೊರೋನ ವಾರಿಯರ್ಸ ಆಗಿ ಕೆಲಸಮಾಡುತ್ತಿರುವ ಸಮಯದಲ್ಲಿ ನಿಮ್ಮ ಈ ನಡವಳಿಕೆ ನಿಮಗೆ ಶೋಭೆ ತರುವಂತದ್ದಲ್ಲ. ಮುಸಲ್ಮಾನರು ಈ ಕೊರೋನ ಸಂದರ್ಭದಲ್ಲಿ ರಂಝಾನ್ ತಿಂಗಳಲ್ಲೂ ಮಸೀದಿಗೆ ಹೋಗದೆ ಜುಮ್ಮಾ ನಮಾಜ್, ದೈನಂದಿನ ನಮಾಜ್, ತರಾವಿ ಮನೆಯಲ್ಲಿ ನಿರ್ವಹಿಸಿ ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.
ತೆಜಸ್ವಿ ಸೂರ್ಯ ಈ ಕೊರೋನ ಸಮಯದಲ್ಲಿ ಸಹ ಸೌಹಾರ್ದತೆಯನ್ನು ಕೆಡಿಸಿ ಕೋಮುವಾದ ಸೃಷ್ಟಿಸಿ ರಾಜಕೀಯ ಮಾಡಲು ಹೊರಟಿದ್ದಾರೆ. ಹೋದಲ್ಲೆಲ್ಲಾ ಪದೇ ಪದೇ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದೀರಿ. ಈ ಸಮಯದಲ್ಲಿ ಜನರಿಗೆ ಬೇಕಿರುವುದು ಮೆಡಿಸಿನ್, ಆಕ್ಷಿಜನ್, ಆಸ್ಪತ್ರೆ ಬೆಡ್ ಗಳ ಬಗ್ಗೆ ಯೋಚಿಸಿ, ಈ ಕೊರೋನವನ್ನು ಆದಷ್ಟು ಬೇಗ ಹೋಗಲಾಡಿಸುವ ಬಗ್ಗೆ ಕಾರ್ಯ ನಿರ್ವಹಿಸಿ, ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ವೈಫಲ್ಯಗಳನ್ನು ಮರೆಮಾಚಲು ಇಲ್ಲ ಸಲ್ಲದ ಹೇಳಿಕೆಗಳನ್ನು ಕೊಡಬೇಡಿ. ಏಕೆಂದರೆ ಜನರು ತುಂಬಾ ಬುದ್ದಿವಂತರಿದ್ದಾರೆ ನಿಮ್ಮ ಈ ಡ್ರಾಮ ಇನ್ನು ಮುಂದೆ ನಡೆಯುವುದಿಲ್ಲ, ಮುಂದಿನ ದಿನಗಳಲ್ಲಿ ಜನರು ನಿಮಗೆ ಬುದ್ದಿಕಲಿಸಲು ತಯಾರಾಗಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..
Kya dialogue maaraa.